ನ್ಯಾನೊಗೆ ಎದುರಾಳಿ, ಬಜಾಜ್ ಅಗ್ಗದ ಸಣ್ಣಕಾರು

Posted By:
Bajaj To Display Improved Low Cost Car In Delhi
ಅಗ್ಗದ ಬಜಾಜ್ ಸಣ್ಣಕಾರೊಂದು ಶೀಘ್ರದಲ್ಲಿ ದೇಶದ ರಸ್ತೆಗಿಳಿಯಲಿದೆ. ಇದು ದರ ಮತ್ತು ಮೈಲೇಜ್ ವಿಷ್ಯದಲ್ಲಿ ಟಾಟಾ ಮೋಟರ್ಸ್ ನ ಸಣ್ಣಕಾರು ನ್ಯಾನೊಗೆ ಪೈಪೋಟಿ ನೀಡಲಿದೆ. ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಬಜಾಜ್ ಆಟೋ ನೂತನ ಸಣ್ಣಕಾರಿನ ಪ್ರೊಟೊಟೈಪ್ ಮಾದರಿಯನ್ನು ಪ್ರದರ್ಶಿಸಲು ಸಜ್ಜಾಗಿದೆ.

ನೂತನ ಕಾರಿನ ಟೆಕ್ ಮಾಹಿತಿಯನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ ಈ ಕಾರಿನ ಮಾರಾಟ ಮತ್ತು ಮಾರುಕಟ್ಟೆ ಉಸ್ತುವಾರಿ ರೆನಾಲ್ಟ್-ನಿಸ್ಸಾನ್ ಜಂಟಿ ಕಂಪನಿಯದ್ದು. ಬಜಾಜ್ ಕಾರಿನ ಗುಣಮಟ್ಟದ ಕುರಿತು ಟೀಕಿಸಿದ ಕಾರಣಕ್ಕಾಗಿ ಬಜಾಜ್ ಮತ್ತು ರೆನಾಲ್ಟ್-ನಿಸ್ಸಾನ್ ಮೈತ್ರಿ ಇತ್ತೀಚೆಗೆ ಕೊಂಚ ಹಾಳಾಗಿತ್ತು.

ಬಜಾಜ್ ಕಾರಿನ ಗುಣಮಟ್ಟ ಮತ್ತು ಸೂಕ್ತತೆ ಕುರಿತು ಫ್ರಾನ್ಸ್ ಕೊ ಜಪಾನಿಸ್ ಡ್ಯೋ ಕಂಪನಿ ತಗಾದೆ ತೆಗೆದಿತ್ತು. ಆದರೆ ಬಜಾಜ್ ಕಂಪನಿಯು ಸಣ್ಣಕಾರು ಅಭಿವೃದ್ಧಿಪಡಿಸುವುದನ್ನು ಮುಂದುವರೆಸಿತ್ತು. ಬಜಾಜ್ ಸಣ್ಣಕಾರು ಅಭಿವೃದ್ಧಿ ಅಂತಿಮ ಹಂತದಲ್ಲಿದ್ದು, ಈ ಕಾರನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸುವ ನಿರೀಕ್ಷೆಯಿದೆ.

ಬಜಾಜ್ ಸಣ್ಣಕಾರು ಮುಂದಿನ ವರ್ಷ ರಸ್ತೆಗಿಳಿಯಲಿದೆಯಂತೆ. ಟಾಟಾ ಮೋಟರ್ಸ್ ನ ಅಗ್ಗದ ನ್ಯಾನೊ ಕಾರಿಗೆ ಬೇಡಿಕೆ ಕಡಿಮೆಯಿರುವುದು ಕೂಡ ಬಜಾಜ್ ವಿಳಂಬಕ್ಕೆ ಒಂದು ಕಾರಣ.

ಮೈಲೇಜ್ ವಿಷ್ಯದಲ್ಲಿ ಬಜಾಜ್ ಕಾರು ನ್ಯಾನೊವನ್ನು ಹಿಂದಿಕ್ಕುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ ನ್ಯಾನೊ ಕಾರು ಪ್ರತಿಲೀಟರಿಗೆ 25 ಕಿ.ಮೀ. ಮೈಲೇಜ್ ನೀಡಿದರೆ ಬಜಾಜ್ ಕಾರು 30 ಕಿ.ಮೀ. ಮೈಲೇಜ್ ನೀಡಲಿದೆಯಂತೆ.

ದೆಹಲಿ ವಾಹನ ಪ್ರದರ್ಶನದಲ್ಲಿ ಕೇವಲ ಕಾರನ್ನು ಮಾತ್ರ ಪ್ರದರ್ಶಿಸಲು ಬಜಾಜ್ ಯೋಜಿಸಿದೆ. ಕಾರಿಗೆ ಹೆಚ್ಚು ಪ್ರಚಾರ ನೀಡುವುದು ಇದರ ಹಿಂದಿನ ಉದ್ದೇಶ. ಇದರೊಂದಿಗೆ ಬಜಾಜ್ ಕಂಪನಿಯು ಕೆಟಿಎಂ ಕಂಪನಿಯ ಡ್ಯೂಕ್ ಬೈಕನ್ನು ಭಾರತಕ್ಕೆ ಪರಿಚಯಿಸಲು ಸಜ್ಜಾಗಿದೆ.

English summary
The Bajaj low cost car was expected to hit the roads by 2012. It is a well known fact that Bajaj Auto is working on developing an ultra low cost car that will compete against the Tata Nano in terms of pricing.
Story first published: Saturday, December 10, 2011, 10:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark