2012 ಆಟೋ ಶೋ: ನೋಡ ಸಿಗುವ ಬ್ಯೂಟಿಗಳು

By Super

Cars & Bikes To Be Launched In 2012 Auto Expo
2012ರ ದೆಹಲಿ ವಾಹನ ಪ್ರದರ್ಶನದಲ್ಲಿ ಸಾಕಷ್ಟು ಹೊಸ ಕಾರು ಬೈಕುಗಳನ್ನು ನೋಡಬಹುದಾಗಿದೆ. ಯಾವೆಲ್ಲ ಕಾರು ಬೈಕು ಇರಬಹುದೆಂಬ ನಿರೀಕ್ಷೆಗೆ ಉತ್ತರ ಇಲ್ಲಿದೆ. ಇಲ್ಲಿ ತಿಳಿಸಿದಕ್ಕಿಂತ ಕೊಂಚ ಹೆಚ್ಚು ಕಡಿಮೆ ನಾಡಿದ್ದು ವಾಹನ ಪ್ರದರ್ಶನದಲ್ಲಿ ಇರಬಹುದು.

ಬಜಾಜ್ ಆಟೋ ಕಂಪನಿಯ ಅಲ್ಟ್ರಾ ಅಗ್ಗದ ಕಾರು ಪ್ರದರ್ಶನದಲ್ಲಿರುವ ನಿರೀಕ್ಷೆಯಿದೆ. ಬಜಾಜ್ ಕಂಪನಿಯು ತನ್ನ ಜಂಟಿಕಂಪನಿಗಳಾದ ರೆನಾಲ್ಟ್ ಮತ್ತು ನಿಸ್ಸಾನ್ ಜೊತೆಯಾಗಿ ಹೊಸ ಸಣ್ಣಕಾರನ್ನು ಇಲ್ಲಿ ಪ್ರದರ್ಶಿಸಲಿದೆ.

ಈ ವಾಹನ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳುವ ಇನ್ನೊಂದು ಪ್ರಮುಖ ಕಾರು ಮಾರುತಿ ಸುಜುಕಿ ಇರ್ಟಿಗಾ. ಟೊಯೊಟಾ ಇನ್ನೋವಾದಂತಹ ಇರ್ಟಿಗಾ ಕಾರು ಮುಂದಿನ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ದೊರಕಲಿದೆ. ಈ ಮಲ್ಟಿಪರ್ಪೊಸ್ ವೆಹಿಕಲನ್ನು ಮಾರುತಿ ಪ್ರದರ್ಶಿಸಲಿದೆ ಎಂದು ಕೆಲವು ವರದಿಗಳು ಹೇಳಿವೆ.

ಹ್ಯುಂಡೈ ಇಯಾನ್ ಮತ್ತು ಐ10 ಎಲ್ ಪಿಜಿ ಆವೃತ್ತಿ ಇಲ್ಲಿ ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ. ಪ್ಯೂಜೊ ಮತ್ತು ಸಿಟ್ರೊನ್ ಕಂಪನಿಯು ಭಾರತದಲ್ಲಿ ಮೊದಲ ಘಟಕ ನಿರ್ಮಿಸಲು ಆರಂಭಿಸಿದೆ. ಹೀಗಾಗಿ ಹಲವು ಪ್ಯೂಜೊ ಸಿಟ್ರೊನ್ ಕಾರುಗಳು ಪ್ರದರ್ಶನದಲ್ಲಿ ಕಂಡುಬರಬಹುದು.

ಫೋರ್ಡ್ ಮೋಟರ್ಸ್ ಕೂಡ ಎಕೊಸ್ಪೋರ್ಟ್ ಎಸ್ ಯುವಿ ಪ್ರದರ್ಶಿಸುವ ನಿರೀಕ್ಷೆಯಿದೆ. ಎಕೊಸ್ಪೋರ್ಟ್ ಕಾರು ಫಿಯೆಸ್ಟಾ ಪ್ಲಾಟ್ ಫಾರ್ಮ್ ನಲ್ಲಿ ಹೊರಬರಲಿದೆ. ಇದು ಕಂಪನಿಯ ಮೊದಲ ನಾಲ್ಕು ಮೀಟರ್ ಸ್ಪೋರ್ಟ್ ಕಾರು. ಇದರ ದರ ಸುಮಾರು 7ರಿಂದ 9 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

2012ರ ವಾಹನ ಪ್ರದರ್ಶನದಲ್ಲಿ ಸಾಕಷ್ಟು ದ್ವಿಚಕ್ರವಾಹನಗಳು ಕಾಣಸಿಗಲಿದೆ. ಯಮಹಾ ಸ್ಕೀಟರ್, ಬಜಾಜಿನ ಕೆಟಿಎಂ ಮಾದರಿಯ ವಾಹನಗಳು, ಮಹೀಂದ್ರ ಬೈಕುಗಳು ಇರಲಿವೆ. ಫೇಸ್ ಲಿಫ್ಟ್ ನ್ಯಾನೊ ಕಾರು ಕೂಡ ಇಲ್ಲಿರುವ ನಿರೀಕ್ಷೆಯಿದೆ. ಉಳಿದಂತೆ ಫೆರಾರಿ, ಆಸ್ಟನ್ ಮಾರ್ಟಿನ್, ಮಸೆರಟಿ ಮತ್ತು ರೋಲ್ಸ್ ರಾಯ್ಸ್ ಕಾರುಗಳು ಕಣ್ಣಿಗೆ ಹಬ್ಬವನ್ನು ಉಂಟುಮಾಡಲಿವೆ.

More from DriveSpark

Article Published On: Friday, November 18, 2011, 16:21 [IST]
English summary
Cars & Bikes To Be Launched In 2012 Auto Expo. One of the highlights of 2012 Auto Expo will probably be the unveiling of Bajaj Auto's ultra low cost car. Maruti Suzuki Ertiga, Hyundai LPG cars, Ford Motors Ecosport SUV cars expected in Auto Expo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+