2012 ದೆಹಲಿ ವಾಹನ ಪ್ರದರ್ಶನ ಯಾವಾಗ ಆರಂಭ?

ವಾಹನ ಪ್ರದರ್ಶನವೆಂದರೆ ಕೇವಲ ಪ್ರದರ್ಶನವಲ್ಲ. ವಾಹನ ಕಂಪನಿಗಳಿಗೆ, ವಾಹನ ಪ್ರಿಯರಿಗದು ಅದೊಂದು ಹಬ್ಬ. ವಾಹನ ಲೋಕದ ಹೊಸತುಗಳಿಗೆ, ಕಾನ್ಸೆಪ್ಟ್ ಕಾರುಗಳ ಪ್ರದರ್ಶನಕ್ಕೆ ಅದೊಂದು ವೇದಿಕೆ. ವಾಹನ ಪ್ರದರ್ಶನದಲ್ಲಿ ಕಣ್ ತುಂಬಿಸಿಕೊಳ್ಳಲು ಸಾಕಷ್ಟು ಬ್ಯೂಟಿಗಳು ಇರುತ್ತವೆ.

ನಮ್ಮ ದೇಶದಲ್ಲಿ ಪ್ರಮುಖ ವಾಹನ ಪ್ರದರ್ಶನ ದೆಹಲಿಯಲ್ಲಿ ಪ್ರತಿವರ್ಷ ನಡೆಯುತ್ತದೆ. ಈ ಪ್ರದರ್ಶನಕ್ಕೆ ಇನ್ನು ಹೆಚ್ಚು ತಿಂಗಳು ಉಳಿದಿಲ್ಲ. 2012ರ ದೆಹಲಿ ಆಟೋ ಪ್ರದರ್ಶನ ಜನವರಿ ಒಂದರಿಂದ ಹನ್ನೆರಡರ ತನಕ ನಡೆಯಲಿದೆ.

ಭಾರತ ಜಾಗತಿಕವಾಗಿ ಪ್ರಮುಖ ವಾಹನ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ದೇಶಿ ಮತ್ತು ಜಾಗತಿಕ ಕಂಪನಿಗಳು ಈ ವಾಹನ ಪ್ರದರ್ಶನದಲ್ಲಿ ಗ್ರಾಹಕರ ಗಮನ ಸೆಳೆಯಲು ಯತ್ನಿಸುತ್ತವೆ. ಹೊಸ ಕಾನ್ಸೆಪ್ಟ್ ಕಾರುಗಳು, ಬೈಕುಗಳು, ಜೀಪುಗಳು ಅಲ್ಲಿರಲಿವೆ.

ಪ್ರಸಕ್ತ 2012ರ ದೆಹಲಿ ವಾಹನ ಪ್ರದರ್ಶನದಲ್ಲಿ ಸುಮಾರು 55 ಹೊಸ ಕಾರುಗಳು ಬಿಡುಗಡೆಯಾಗಲಿದೆ. ಈ ಹಿಂದಿನ ದೆಹಲಿ ವಾಹನ ಪ್ರದರ್ಶನಕ್ಕೆ ಹೋಲಿಸಿದರೆ ಇದು ದೊಡ್ಡ ಸಂಖ್ಯೆ ಪೊರ್ಷ್, ಫೆರಾರಿ ಮತ್ತು ಬುಗಾಟಿಯಂತಹ ಅಂತಾರಾಷ್ಟ್ರೀಯ ಪ್ರಮುಖ ಕಾರು ಬ್ರಾಂಡುಗಳು ದೆಹಲಿ ಪ್ರದರ್ಶನದಲ್ಲಿ ಬೀಡು ಬಿಡುವುದನ್ನು ಶೋ ಸಂಘಟಕರು ಖಾತ್ರಿ ಪಡಿಸಿದ್ದಾರೆ.

2010ರ ಪ್ರದರ್ಶನಕ್ಕೆ ಹೋಲಿಸಿದರೆ 2011ರ ವಾಹನ ಪ್ರದರ್ಶನ ಹೆಚ್ಚು ಯಶಸ್ವಿಯಾಗಿರಲಿಲ್ಲ. ಅಲ್ಲಿ ಬಿಡುಗಡೆಯಾದ ಹೊಸ ಕಾರುಗಳ ಸಂಖ್ಯೆಯೂ ಕಡಿಮೆಯಿತ್ತು. ಆದರೆ 2012ರ ದೆಹಲಿ ವಾಹನ ಪ್ರದರ್ಶನ ಸಾಕಷ್ಟು ನಿರೀಕ್ಷೆ ಮತ್ತು ಹೈಪ್ ಕ್ರಿಯೇಟ್ ಮಾಡಿದೆ.

ದೆಹಲಿ ಪ್ರಗತಿ ಮೈದಾನದಲ್ಲಿ 7 ದಿನಗಳ ವಾಹನ ಹಬ್ಬ ನಡೆಯಲಿದೆ. ದೇಶದ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ SIAM ಈ ಪ್ರದರ್ಶನದ ಉಸ್ತುವಾರಿ ವಹಿಸಲಿದೆ. ಇದರಲ್ಲಿ ಮೊದಲ ಎರಡು ದಿನಗಳ ಪ್ರದರ್ಶನ ಮಾಧ್ಯಮ ಮತ್ತು ವಿಶೇಷ ಅಹ್ವಾನಿತರಿಗೆ ಮಾತ್ರ. ಜನವರಿ ಏಳರಿಂದ ಈ ಪ್ರದರ್ಶನ ಸಾರ್ವಜನಿಕರಿಗೆ ಮುಕ್ತವಾಗುತ್ತದೆ.

ಟಿಕೇಟ್ ದರ
* ಸೀಸನಲ್ ಟಿಕೇಟ್ ದರ: ತಲಾ ಒಬ್ಬರಿಗೆ 1,500 ರುಪಾಯಿ
* ವಾರದ ದಿನ(ಸೋಮವಾರದಿಂದ ಶುಕ್ರವಾರ) ಪ್ರಮುಖ ಗಂಟೆಗಳಲ್ಲಿ(ಪೂರ್ವಾಹ್ನ 10ರಿಂದ ಅಪರಾಹ್ನ 3 ಗಂಟೆ): ತಲಾ ಒಬ್ಬರಿಗೆ 500 ರುಪಾಯಿ
* ವಾರದ ದಿನ ಸಂಜೆ ಮೂರು ಗಂಟೆಯಿಂದ 7 ಗಂಟೆವರೆಗೆ: ಒಬ್ಬರಿಗೆ 150 ರು.
* ವಾರಾಂತ್ಯ: ತಲಾ ಒಬ್ಬರಿಗೆ 200 ರು.

ಯಾವೆಲ್ಲ ಹೊಸ ಕಾರುಗಳು, ಬೈಕುಗಳು ಇರಲಿವೆ? ಮುಂದಿನ ಪುಟ ನೋಡಿ

More from DriveSpark

Article Published On: Friday, November 18, 2011, 16:35 [IST]
English summary
The 2012 Delhi Auto Expo will be a huge affair for several carmakers. India's only premier car show has always attracted carmakers from across the globe but next year's event has gained more importance. India has shown potential to be a huge car market and every carmaker intends to capture the buyer's attention. The Auto Expo appears to be the best possible platform for them
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+