4-6 ಲಕ್ಷ ರು.ನ ಡೀಸಲ್ ಬೀಟ್ ಸವಾರಿಗೆ ರೆಡಿಯಾಗಿ

Chevrolet Beat Diesel
ಪೆಟ್ರೊಲ್ ದರಗಳು ಗಗನಕ್ಕೇರುತ್ತಿರುವುದರಿಂದ ಕಾರು ಗ್ರಾಹಕರ ಹೃದಯದ ಬಡಿತ ಬಡಿಯೋದನ್ನೇ ಮರೆತಂತ್ತಿತ್ತು. ಇದೀಗ ಕಾರು ಪ್ರೇಮಿಗಳ ಅಪದಮನಿ, ಅಭಿದಮನಿಗಳು ಮತ್ತೆ ಬೀಟ್ ಬೀಟ್ ಎನ್ನುತ್ತಿವೆ. ಯಾಕೆಂದರೆ ಜುಲೈ ಕೊನೆಯ ವಾರದಲ್ಲಿ ಷೆವರ್ಲೆ ಬೀಟ್ ಡೀಸಲ್ ಕಾರು ದೇಶದ ರಸ್ತೆಗಿಳಿಯಲಿದೆ.

ತನ್ನ ಕಡಿಮೆ ದರದಿಂದಾಗಿ ಷೆವರ್ಲೆ ಬೀಟ್ ಹೆಚ್ಚು ಜನಪ್ರಿಯತೆಗಳಿಸಿದೆ. ಆದರೆ ಪೆಟ್ರೊಲ್ ದರದಿಂದಾಗಿ ಜನರು ಡೀಸಲ್ ಕಾರುಗಳತ್ತ ಮುಖ ಮಾಡುತ್ತಿದ್ದಾರೆ. ಜಾಸ್ತಿ ಮೈಲೇಜ್ ನೀಡುವ ಕಾರುಗಳು ಭಾರತೀಯರ ಮೆಚ್ಚಿನ ಆಯ್ಕೆಯಾಗಿದೆ. ಈಗಾಗಲೇ ಷೆವರ್ಲೆ ಬೀಟ್ ತನ್ನ ಅತ್ಯಧಿಕ ಮೈಲೇಜಿನಿಂದಾಗಿ ಸುದ್ದಿ ಮಾಡಿದೆ.

ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್(ಎಆರ್ಎಐ) ಪ್ರಕಾರ ನೂತನ ಷೆವರ್ಲೆ ಬೀಟ್ ಪ್ರತಿಲೀಟ್ ಗೆ 24 ಕಿ.ಮೀ. ಮೈಲೇಜ್ ನೀಡುತ್ತಿದೆ. ಇದು ಫಿಯೆಟ್ ನ 1.3 ಮಲ್ಟಿಜೆಟ್ ಡೀಸಲ್ ಎಂಜಿನ್ ಹೊಂದಿದೆ. ಇವೇ ಎಂಜಿನ್ ಹೊಂದಿರುವ ಕಾರುಗಳು ಫಿಯೆಟ್, ಟಾಟಾ ಮತ್ತು ಸುಜುಕಿ ಕಂಪನಿಗಳೂ ಹೊಂದಿವೆ ಎಂಬುದನ್ನು ಮರೆಯುವಂತ್ತಿಲ್ಲ. ಆದರೆ ಆ ಕಾರುಗಳೆಲ್ಲ ಈ ಬೀಟ್ ದರಕ್ಕೆ ದೊರಕದು ಎಂಬುದು ಕಟು ಸತ್ಯ.

ಇಷ್ಟು ಮೈಲೇಜ್ ನೀಡುವ ಬೀಟ್ ಹಿಂದಿನ ರಹಸ್ಯವಾದರೂ ಏನು? ಈ ಕಾರಿನ ಪಿಸ್ಟನ್, ಅಲ್ಯುಮಿನಿಯಂ ಬಾಡಿ, ಪ್ಲಾಸ್ಟಿಕ್ ಭಾಗಗಳೇ ಈ ಕಾರನ್ನು ಹಗುರವಾಗಿಸಿದೆ. ಕಾರು ಹಗುರವಾಗಿರುವುದರಿಂದ ಸಹಜವಾಗಿಯೇ ಮೈಲೇಜ್ ಹೆಚ್ಚಿದೆ. ಒಂದು ಅಂದಾಜಿನ ಪ್ರಕಾರ ಈ ಕಾರಿನ ದರ ಸುಮಾರು 4.25 ಲಕ್ಷ ರು.ನಿಂದ 6 ಲಕ್ಷ ರು.ವರೆಗಿರಲಿದೆ.

More from DriveSpark

Article Published On: Monday, July 18, 2011, 10:22 [IST]
English summary
General Motors will launch the new Chevrolet Beat Diesel by July Last week. As far as the pricing is concerned it is speculated to be around Rs 4.25 lakh to Rs 6 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+