ನಿರೀಕ್ಷಿಸಿ: ಫೋರ್ಡ್ ಎಕೊಸ್ಪೋರ್ಟ್, ಹ್ಯುಂಡೈ ಸೊನಾಟ

ಎಕೊಸ್ಪೋರ್ಟ್ ಕಾರು ಈಗಾಗಲೇ ಬ್ರೆಝಿಲ್ ರಸ್ತೆಗಿಳಿದಿದೆ. ಎಕೊಸ್ಪೋರ್ಟ್ ಕಾರು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ದೊರಕುತ್ತದೆ. ನೂತನ ಫೋರ್ಡ್ ಎಕೊಸ್ಪೋರ್ಟ್ ಕಾರಿನ ಹೆಚ್ಚಿನ ಫೀಚರುಗಳು ಫಿಯೆಸ್ಟಾವನ್ನು ಹೋಲುತ್ತದೆ. ಈ ಕಾರಿನ ವಿನ್ಯಾಸ ಸ್ಪೋರ್ಟ್ ಯುಟಿಲಿಟಿ ಕಾರುಗಳಂತೆ ಕಾಣುತ್ತದೆ.
ಫೋರ್ಡ್ ಎಕೊಸ್ಪೋರ್ಟ್ ದರ ಸುಮಾರು 14 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಈ ಸ್ಪೋರ್ಟ್ ಯುಟಿಲಿಟಿ ವಾಹನವು ಮಹೀಂದ್ರ ಎಕ್ಸ್ ಯುವಿ 5ಒಒ, ಟಾಟಾ ಸಫಾರಿ ಮತ್ತು ಷೆವರ್ಲೆ ಕ್ಯಾಪ್ಟಿವಾ ಎಸ್ ಯುವಿಗಳಿಗೆ ಪೈಪೋಟಿ ನೀಡಲಿದೆ.
ದೆಹಲಿ ವಾಹನ ಪ್ರದರ್ಶನಕ್ಕೆ ಆಗಮಿಸುವ ಇನ್ನೊಂದು ಕಾರಿನ ಹೆಸರು ನೂತನ ಹ್ಯುಂಡೈ ಸೊನಾಟ. ನೂತನ ಫ್ಲೂಡಿಕ್ ಹೊರವಿನ್ಯಾಸದಲ್ಲಿ ಸೊನಾಟ ಬರಲಿದೆ. ಈಗಾಗಲೇ ಹ್ಯುಂಡೈ ವೆರ್ನಾ ಫ್ಲೂಡಿಕ್ ಆವೃತ್ತಿ ರಸ್ತೆಯಲ್ಲಿ ಮೋಡಿಮಾಡುತ್ತಿದೆ. ನೂತನ ಸೊನಾಟ ಕಾರಿನ ದರ ಸುಮಾರು 20 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.
ಈ ಕಾರು 2.4 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಷ್ ಮಿಷನ್ ಆಯ್ಕೆಗಳಲ್ಲಿ ದೊರಕಲಿದೆ. ಈ ಕಾರು ಡೀಸೆಲ್ ಆಯ್ಕೆಯಲ್ಲಿ ಆಗಮಿಸುತ್ತಿಲ್ಲವೆನ್ನುವುದು ಡೀಸೆಲ್ ಕಾರು ಪ್ರೇಮಿಗಳಿಗೆ ಕೊಂಚ ನಿರಾಶೆಯಾಗುವ ಸಂಗತಿ. ಸೊನಾಟಾ ಕಾರು ಹೋಂಡಾ ಅಕಾರ್ಡ್, ಟೊಯೊಟಾ ಕ್ಯಾಮ್ರಿ, ನಿಸ್ಸಾನ್ ಟಿನಾ ಮತ್ತು ಫೋಕ್ಸ್ ವ್ಯಾಗನ್ ಪಸ್ಸಾಟ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








