ಬಿಎಂಡಬ್ಲ್ಯು ಮಿನಿ ಮತ್ತು ಬೆಂಝ್ ಬಿ-ಕ್ಲಾಸ್ ನೋಡಬನ್ನಿ

ಮಿನಿ ಕಾರು ಪ್ರೀಮಿಯಂ ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ನಲ್ಲಿ ಮಾರಾಟವಾಗಲಿದೆ. ದೇಶದ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಮಿನಿ ದರ ಸುಮಾರು 25 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಆಟೋಮ್ಯಾಟಿಕ್ ಟ್ರಾನ್ಷ್ ಮಿಷನ್ ನಲ್ಲಿ ಬರಲಿರುವ ಮಿನಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕಲಿದೆ.
ನೂತನ ಮಿನಿ ಕಾರು ಫೋಕ್ಸ್ ವ್ಯಾಗನ್ ಬೀಟಲ್, ಫಿಯೆಟ್ 500 ಮತ್ತು ಶೀಘ್ರದಲ್ಲಿ ರಸ್ತೆಗಿಳಿಯಲಿರುವ ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಜೊತೆ ಪೈಪೋಟಿ ನಡೆಸುವ ನಿರೀಕ್ಷೆಯಿದೆ.
ದೆಹಲಿ ವಾಹನ ಪ್ರದರ್ಶನದಲ್ಲಿ ಕಾಣಸಿಗುವ ಇನ್ನೊಂದು ದುಬಾರಿ ಹ್ಯಾಚ್ ಬ್ಯಾಕ್ ಕಾರೆಂದರೆ ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್. ಬಿ-ಕ್ಲಾಸ್ ಕಾರಿನ ದರ ಮಿನಿಗಿಂತ ಕಡಿಮೆ ಇರಲಿದೆಯಂತೆ. ಇದರ ದರ ಸುಮಾರು 20 ಲಕ್ಷ ರು.ನಿಂದ 25 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯನ್ನು ಮೂಲಗಳು ವ್ಯಕ್ತಪಡಿಸಿವೆ.
ಮರ್ಸಿಡಿಸ್ ಬೆಂಝ್ ಬಿ-ಕ್ಲಾಸ್ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. ಪೆಟ್ರೋಲ್ ಎಂಜಿನ್ ಸುಮಾರು 156 ಹಾರ್ಸ್ ಪವರ್ ಮತ್ತು ಡೀಸೆಲ್ ಎಂಜಿನ್ ಸುಮಾರು 135 ಹಾರ್ಸ್ ಪವರ್ ನೀಡಲಿದೆ.


Click it and Unblock the Notifications








