ಕಾರುಗಳು ಸಾರ್ ಕಾರುಗಳು, ಹೊಸ ಹೊಸ ಕಾರುಗಳು

ನೂತನ ಸೆಡಾನುಗಳು, ಹ್ಯಾಚುಬ್ಯಾಕುಗಳು, ಪ್ರೀಮಿಯಂ ಕಾರುಗಳು, ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಮತ್ತು ಮಲ್ಟಿ ಪರ್ಪೊಸ್ ವೆಹಿಕಲ್ ಗಳು ಪ್ರದರ್ಶನದಲ್ಲಿ ನೋಡ ಸಿಗಲಿವೆಯಂತೆ. ಕೇವಲ ಕಾರು ಮಾತ್ರವಲ್ಲದೇ ನೂತನ ಬೈಕುಗಳು, ಸ್ಕೂಟರುಗಳು, ಪರಿಷ್ಕೃತ ದ್ವಿಚಕ್ರವಾಹನ ಆವೃತ್ತಿಗಳು ಅಲ್ಲಿರಲಿವೆ.
2012ರ ಜನವರಿ ಐದರಿಂದ ಒಂದು ವಾರಗಳ ಕಾಲ ವಾಹನ ಜಾತ್ರೆ ನಡೆಯಲಿದೆ. ಅಲ್ಲಿರುವ, ಇರಬಹುದಾದ, ಇದ್ದರೂ ಇರಬಹುದಾದ ಕೆಲವು ಕಾರುಗಳ ಮಾಹಿತಿ ಇಲ್ಲಿದೆ.
ದೇಶದ ಬೃಹತ್ ಕಾರು ಕಂಪನಿ ಮಾರುತಿ ಸುಜುಕಿಯಿಂದಲೇ ಆರಂಭಿಸೋಣ. ಮಾರುತಿ ಸುಜುಕಿ ಕಂಪನಿಯ ನೂತನ ಎಂಯುವಿ ಕಾರು "ಎರ್ಟಿಗಾ" ಪ್ರದರ್ಶನದಲ್ಲಿರುವ ನಿರೀಕ್ಷೆಯಿದೆ. ಕಂಪನಿಯು ಸಣ್ಣಕಾರು ಮಾರುಕಟ್ಟೆಯಿಂದ ಬೃಹತ್ ಕಾರು ಮಾರುಕಟ್ಟೆಯತ್ತ ನೆಗೆಯಲು ಯೋಜಿಸಿದೆ.
ಮಾರುತಿ ಸುಜುಕಿ ಎರ್ಟಿಗಾ ದರ ಸುಮಾರು 6 ಲಕ್ಷ ರು.ನಿಂದ 9 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. ನೂತನ ಎರ್ಟಿಗಾ ಕಾರಿಗೆ ಟೊಯೊಟಾ ಇನ್ನೋವಾ, ಷೆವರ್ಲೆ ತವೆರಾ, ಟಾಟಾ ಸುಮೊ, ಮಹೀಂದ್ರ ಕ್ಷೈಲೊ ಮತ್ತು ಟಾಟಾ ಆರಿಯಾ ಪ್ರಮುಖ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಇನ್ಯಾವ ಹೊಸ ಕಾರು ಇರಲಿದೆ? ಮುಂದಿನ ಪುಟ ನೋಡಿ


Click it and Unblock the Notifications








