ಫೋರ್ಡ್ 1.29 ಲಕ್ಷ ಕಾರುಗಳ ಹಿಂಪಡೆತ, ಯಾಕಂತೆ?

ಕಾರಿನ ವೀಲ್ಹ್ ಬೋಲ್ಟ್ ಜೋಡನೆ ಸಮರ್ಪಕವಾಗಿಲ್ಲದ ಕಾರಣ ಕಾರನ್ನು ಹಿಂಪಡೆಯಲು ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ವಿಭಾಗ(ಎನ್ಎಚ್ ಟಿಎಸ್ಎ)ವೂ ಸೂಚಿಸಿತ್ತು. ಫ್ಯೂಷನ್ ಮತ್ತು ಮಿಲನ್ ಆರು ಕಾರುಗಳಲ್ಲಿ ಇಂತಹ ಸಮಸ್ಯೆ ಕಂಡು ಬಂದಿತ್ತು. ಇಂತಹ ಆರು ದೂರುಗಳನ್ನು ಎನ್ಎಚ್ ಟಿಎಸ್ಎ ಪಡೆದಿತ್ತು.
ಈ ಸಮಸ್ಯೆ ಕುರಿತು ಫೋರ್ಡ್ ತನಿಖೆ ಆರಂಭಿಸಿತ್ತು. ನಂತರ ಈ ಬೃಹತ್ ಹಿಂಪಡೆತಕ್ಕೆ ನಿರ್ಧರಿಸಿದೆ. ಏಪ್ರಿಲ್ 2009ರಿಂದ ಡಿಸೆಂಬರ್ 2009ರವರೆಗೆ ಉತ್ಪಾದಿಸಲಾಗಿರುವ ಮಿಲನ್ ಮತ್ತು ಫ್ಯೂಷನ್ ಕಾರುಗಳನ್ನು ಕಂಪನಿ ಹಿಂಪಡೆಯಲಿದೆಯಂತೆ.


Click it and Unblock the Notifications








