ಹರ್ಮನ್ ಜೊತೆ ಎಆರ್ ರೆಹಮಾನ್ ಕುಹೂ ಕುಹೂ..

ಹರ್ಮನ್ ಆಡಿಯೋ ಸಿಸ್ಟಮ್ ಆಕರ್ಷಕ ಗುಣಮಟ್ಟದ ಸೌಂಡ್ ಸಿಸ್ಟಮ್ ಮೂಲಕ ಜನಪ್ರಿಯವಾಗಿದೆ. ಕಂಪನಿಯ ಉತ್ಪನ್ನಗಳು ದುಬಾರಿ ಕೂಡ ಹೌದು. ದೇಶದಲ್ಲಿ ಕಂಪನಿಯು ಜೆಬಿಎಲ್ ಬ್ರಾಂಡ್ ಈಗಾಗಲೇ ಹೊಂದಿದೆ. ಜಾಗತಿಕವಾಗಿ ಜೆಬಿಎಲ್, ಎಕೆಜಿ ಮತ್ತು ಹರ್ಮನ್ ಕಾರ್ಡೊನ್ ಮುಂತಾದ ಹಲವು ಬ್ರಾಂಡ್ ಗಳನ್ನು ಕಂಪನಿ ಹೊಂದಿದೆ.
ಕಂಪನಿಯು ಬಿಎಂಡಬ್ಲ್ಯು ಮತ್ತು ಆಡಿ ಇಂಡಿಯಾಗಳಿಗೆ ಆಡಿಯೋ ಸಿಸ್ಟಮ್ ಅಭಿವೃದ್ಧಿಪಡಿಸಲಿದೆ. ಜಾಗತಿಕವಾಗಿ ಬಿಎಂಡಬ್ಲ್ಯು, ಆಡಿ, ಫೋಕ್ಸ್ ವ್ಯಾಗನ್, ಡೈಮ್ಲಾರ್, ಟೊಯೊಟಾ, ಫಿಯೆಟ್ ಸ್ಪಾ, ಜನರಲ್ ಮೋಟರ್ಸ್, ಹ್ಯುಂಡೈ ಮತ್ತು ಫೆರಾರಿ ಕಂಪನಿಗಳಿಗೆ ಹರ್ಮನ್ ಆಡಿಯೋ ಅಭಿವೃದ್ಧಿಪಡಿಸಿಕೊಡುತ್ತಿದೆ.
ಇದೀಗ ಕಂಪನಿಯು ಟಾಟಾ ಮೋಟರ್ಸ್, ಮಹೀಂದ್ರ ಆಂಡ್ ಮಹೀಂದ್ರ ಮತ್ತು ಮಾರುತಿ ಸುಜುಕಿ ಕಂಪನಿಗಳನ್ನು ಸೆಳೆಯಲು ಯತ್ನಿಸುತ್ತಿದೆ.
"ಕಂಪನಿಯು ಭಾರತದಲ್ಲಿ ಮಿಲಿಯನ್ ಡಾಲರ್ ಹೂಡಿಕೆ ಮಾಡಿ ಆಡಿಯೋ ಸಿಸ್ಟಮ್ ಹೊರತರಲಿದೆ. ಇಲ್ಲಿನ ಜನತೆಗೆ ಕೈಗೆಟುಕುವ ದರದಲ್ಲಿ ಉತ್ಪನ್ನಗಳನ್ನು ನೀಡುವುದು ನಮ್ಮ ಗುರಿ" ಎಂದು ಕಂಪನಿ ಹೇಳಿದೆ.
ದೇಶದ ಮಾರುಕಟ್ಟೆಯಲ್ಲಿ ಕಂಪನಿಯು ಬಾಷ್, ಯಮಹಾ, ಬೋಸ್, ಪ್ಯಾನಸೋನಿಕ್ ಮತ್ತು ಸೋನಿ ಕಂಪನಿಗಳೊಂದಿಗೆ ಸ್ಪರ್ಧೆ ನಡೆಸಲಿದೆ.
ಕಂಪನಿಯು ಈಗಾಗಲೇ ದೇಶದ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ರನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಂಡಿದೆ. ಶೀಘ್ರದಲ್ಲಿ ರೆಹಮಾನ್ ಸಂಗೀತದ ಹರ್ಮನ್ ಟೆಲಿವಿಷನ್ ಜಾಹೀರಾತು ಕೂಡ ಬರಲಿದೆಯಂತೆ.


Click it and Unblock the Notifications








