ಡಿಸೆಂಬರ್ ನಲ್ಲಿ ಹೊಸ ಹೋಂಡಾ ಸಿಟಿ ರಸ್ತೆಗೆ

Honda Confirms New City Launch In December
ಹೋಂಡಾ ಸಿಟಿಯ ನೂತನ ಪರಿಷ್ಕೃತ ಆವೃತ್ತಿ ಡಿಸೆಂಬರ್ ತಿಂಗಳಲ್ಲಿ ರಸ್ತೆಗಿಳಿಯಲಿದೆ. ದೇಶದ ಅತ್ಯಧಿಕ ಮಾರಾಟದ ಮಧ್ಯಮ ಗಾತ್ರದ ಸೆಡಾನ್ ಕಾರಿನ ಫೇಸ್ ಲಿಫ್ಟ್ ಆವೃತ್ತಿ ರಸ್ತೆಗಿಳಿಯುವುದನ್ನು ಸ್ವತಃ ಕಂಪನಿಯೇ ಖಚಿತಪಡಿಸಿದೆ. ಈ ಆವೃತ್ತಿ ಈಗಾಗಲೇ ರಸ್ತೆಗಿಳಿಯಬೇಕಿತ್ತು. ಆದರೆ ಥೈಲಾಂಡಿನಲ್ಲಿ ನೆರೆಹಾವಳಿ ಸಂಭವಿಸಿದರಿಂದ ಉತ್ಪಾದನೆಗೆ ಹಿನ್ನಡೆಯಾಗಿತ್ತು.

ಕಂಪನಿಯು ಡಿಸೆಂಬರ್ ತಿಂಗಳ ಮಧ್ಯಾವದಿಯಲ್ಲಿ ನೂತನ ಸಿಟಿ ಕಾರನ್ನು ಅನಾವರಣ ಮಾಡಲಿದೆ. ನಂತರ ಕೆಲವೇ ದಿನಗಳಲ್ಲಿ ಈ ಕಾರಿನ ಮಾರಾಟ ಆರಂಭವಾಗುವ ನಿರೀಕ್ಷೆಯಿದೆ. ನೂತನ ಸಿಟಿ ಕಾರಲ್ಲಿ ಯಾವುದೇ ತಾಂತ್ರಿಕ ಪರಿಷ್ಕರಣೆ ಇಲ್ಲವಂತೆ. ಅಂದರೆ ಸಿಟಿ ಕಾರು ಹಳೆಯ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಆದರೆ ಕಾರಿನ ವಿನ್ಯಾಸದಲ್ಲಿ ಕೊಂಚ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ.

ಥೈಲಾಂಡಿನಲ್ಲಿ ನೆರೆಹಾವಳಿ ಉಂಟಾದ ಹಿನ್ನಲೆಯಲ್ಲಿ ನೂತನ ಸಿಟಿ ಬಿಡಿಭಾಗ ಪೂರೈಕೆಗೆ ತೊಂದರೆಯಾಗಿತ್ತು. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಮುಂದಿನ ದಿನಗಳಲ್ಲಿ ಸ್ಥಳೀಯ ಉತ್ಪಾದನೆಗೆ ಹೆಚ್ಚು ಪ್ರಾಶಸ್ತ್ಯ ನೀಡುವುದಾಗಿ ಕಂಪನಿ ಹೇಳಿದೆ.

ಥೈಲಾಂಡ್ ನೆರೆಯು ಹೋಂಡಾ ಕಂಪನಿಯ ಎಲ್ಲಾ ಕಾರು ಉತ್ಪಾದನೆಗೂ ಹಿನ್ನಡೆಯುಂಟು ಮಾಡಿದೆ. ಪರಿಸ್ಥಿತಿ ತಹಬದಿಗೆ ಬರುವರೆಗೆ ನೋಯ್ಡಾ ಘಟಕದಲ್ಲಿ ಕಾರು ಉತ್ಪಾದನೆ ಸ್ಥಗತಗೊಳಿಸಲು ಕಂಪನಿ ನಿರ್ಧರಿಸಿದೆ. ನೂತನ ಹೋಂಡಾ ಸಿಟಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ.

More from DriveSpark

Article Published On: Tuesday, November 22, 2011, 14:02 [IST]
English summary
The Honda City, India's highest selling mid level sedan will be getting its much needed facelift in India this December itself. The City's facelifted version was unveiled in September in Thailand but its launch in India was delyed due to the severe floods in Thailand. The City's launch has been recently confirmed by the Japanese carmaker.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+