ಹ್ಯುಂಡೈ ವೆರ್ನಾಕ್ಕೆ ಎನ್ ಡಿಟಿವಿ ವರ್ಷದ ಕಾರು ಪ್ರಶಸ್ತಿ

ಇಷ್ಟು ಮಾತ್ರವಲ್ಲದೇ ಹ್ಯುಂಡೈ ವರ್ನಾ ಕಾರಿಗೆ ಬೇರೆ ಮೂರು ವಿಭಾಗಗಳಲ್ಲಿಯೂ ಪ್ರಶಸ್ತಿ ದೊರಕಿದೆ. ವರ್ಷದ ಅತ್ಯುತ್ತಮ ಕಾಂಪ್ಯಾಕ್ಟ್ ಸೆಡಾನ್ ಕಾರು, ವರ್ಷದ ಅತ್ಯುತ್ತಮ ವಿನ್ಯಾಸದ ಕಾರು ಮತ್ತು ಸಿಎನ್ ಬಿ ವೀಕ್ಷಕರ ಆಯ್ಕೆಯ ಕಾರು ಎಂಬ ಮೂರು ಪ್ರಶಸ್ತಿ ವೆರ್ನಾಗೆ ದೊರಕಿದೆ.
ಹ್ಯುಂಡೈ ವೆರ್ನಾ ಕಾರು 2011ರ ಮೇ ತಿಂಗಳಲ್ಲಿ ರಸ್ತೆಗಿಳಿದಿತ್ತು. ಈ ಕಾರು ಈಗಾಗಲೇ ಸುಮಾರು 34 ಸಾವಿರ ಯುನಿಟ್ ಮಾರಾಟವಾಗಿದೆ. ಆಕರ್ಷಕ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯ ವೆರ್ನಾ ಕಾರಿನ ಸೌಂದರ್ಯ ಲಹರಿ ಓದಿ.
2011ರ ನೂತನ ವೆರ್ನಾ 2 ಪೆಟ್ರೊಲ್ ಮತ್ತು 2 ಡೀಸಲ್ ಆವೃತ್ತಿಗಳಲ್ಲಿ ರಸ್ತೆಗಿಳಿದಿತ್ತು. 1.4 ಲೀಟರ್ ಮತ್ತು 1.6 ಲೀಟರ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. 1.4 ಲೀಟರ್ ಎಂಜಿನ್ ಆವೃತ್ತಿಗಳಲ್ಲಿ 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಇದೆ. 1.6 ಲೀಟರ್ ಆವೃತ್ತಿಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇದೆ.
1.4 ಲೀಟರಿನ ಪೆಟ್ರೋಲ್ ಎಂಜಿನ್ ಫ್ಲೂಡಿಕ್ ವೆರ್ನಾ ಪ್ರತಿಲೀಟರ್ ಗೆ 17.43 ಕಿ.ಮೀ. ಮತ್ತು 1.6 ಲೀಟರಿನ ಎಂಜಿನ್ ಪ್ರತಿಲೀಟರ್ ಗೆ 17 ಕಿ.ಮೀ. ಮೈಲೇಜ್ ನೀಡುತ್ತದೆ. ಡೀಸೆಲ್ ಆವೃತ್ತಿಯ 1.4 ಲೀಟರ್ ಎಂಜಿನ್ ವೆರ್ನಾ ಪ್ರತಿಲೀಟರ್ ಗೆ ಸುಮಾರು 23.5 ಕಿ.ಮೀ. ಮತ್ತು 1.6 ಲೀಟರ್ ಎಂಜಿನ್ ಲೀಟರ್ ಗೆ 22.32 ಕಿ.ಮೀ. ಮೈಲೇಜ್ ನೀಡುತ್ತದೆ.
ನೂತನ ವೆರ್ನಾ ಕಾರಿಗೆ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 7,08,320 ರು.ನಿಂದ 10,88,826 ರು.ವರೆಗಿದೆ.


Click it and Unblock the Notifications








