2011ರ ನೂತನ ಹ್ಯುಂಡೈ ವೆರ್ನಾ ಸೌಂದರ್ಯ ಲಹರಿ

By * ಪ್ರವೀಣ್ ಚಂದ್ರ

Hyundai Verna 2011
ಕೆಲವು ದಿನಗಳ ಹಿಂದೆ ರಸ್ತೆಗಿಳಿದ ಹ್ಯುಂಡೈ ವೆರ್ನಾ ಸುಂದರ ಕಾರು. ಐಷಾರಾಮಿ, ಸೌಂದರ್ಯ, ಶಕ್ತಿಯಲ್ಲಿ ರಾಜಿಯಿಲ್ಲದಂತೆ ರೂಪಿಸಲಾಗಿದೆ. ಅದರ ವಿನ್ಯಾಸ ಕಾರು ಪ್ರೇಮಿಗಳಿಗೆ ಯಾವತ್ತಿಗೂ ಆಕರ್ಷಣೆ. ಇದು ಹ್ಯುಂಡೈ ವೆರ್ನಾ ಸೌಂದರ್ಯ ಲಹರಿ.

ಹ್ಯುಂಡೈ ಕಾರು ಇಷ್ಟವಾಗುವುದಕ್ಕೆ ಪ್ರಮುಖ ಕಾರಣಗಳೇನು. ಪ್ರಶ್ನೆಗೆ ಉತ್ತರ ಸ್ಟೈಲ್ ಮತ್ತು ಪವರ್. ನೂತನ ವೆರ್ನಾ ಮೇಲಿರುವ ವಿನ್ಯಾಸ, ಅದರ ಸ್ಟೈಲಿಶ್ ಗೆರೆಗಳು ಸಹಜ ಬದುಕಿನ ಲಯಗಳಿಗೆ ಕನ್ನಡಿ ಹಿಡಿಯುವಂತಿದೆ.

ನಯವಾದ ಹೊರಮೈ, ಅಪ್ಸರೆಯನ್ನು ನಾಚಿಸುವ ಲುಕ್, ಸ್ಪೋರ್ಟ್ಸ್ ಕಾರುಗಳ ಫೀಚರ್ ಗಳು, ಇತ್ತೀಚಿನ ತಂತ್ರಜ್ಞಾನ, ವೇಗ, ಆವೇಗ, ಸುಮಧುರ ಅನುಭವ ನೀಡುವ ಇಂಟಿರಿಯರ್ ಇವೆಲ್ಲ ವೆರ್ನಾ ಇಷ್ಟವಾಗಲು ಇನ್ನಿತರ ಕಾರಣಗಳು.

ಆಕರ್ಷಕತೆ, ಲಕ್ಷಣಗಳು ಮತ್ತು ವಿನ್ಯಾಸ ಇವೆಲ್ಲ ವಿಷಯಗಳಲ್ಲಿ ಹ್ಯುಂಡೈಗೆ ಹ್ಯುಂಡೈನೇ ಸಾಟಿ. ಕಾರನ್ನು ಕಲಾತ್ಮಕವಾಗಿ, ಸುಂದರವಾಗಿ ಗ್ರಾಹಕರ ಕೈಗಿಡುವಲ್ಲಿನ ಅದರ ಪರಿಶ್ರಮ ಇಷ್ಟಪಡಲೇ ಬೇಕು. ಚಕ್ರಗಳು ವಕ್ರವಾಗಿರದೇ ಅಲ್ಲೂ ಒಂದಿಷ್ಟು ಸೃಜನಶೀಲತೆಗೆ ಇಷ್ಟವಾಗುವಂತಹ ಕಲಾತ್ಮಕತೆಗೆ ಬಹುಪರಾಕ್ ಎನ್ನಲೇ ಬೇಕು.

ಇದರ ಹೊರ ವಿನ್ಯಾಸದ ಗ್ರಿಲ್ಲುಗಳು, ಎಲ್ ಆಕಾರದ ಹಿಂಬಂದಿ ಲ್ಯಾಂಪ್ ಗಳು, ಹೆಡ್ ಲ್ಯಾಂಪ್ ಗಳು ಇನ್ನಷ್ಟು ಮೆರುಗು ನೀಡುತ್ತವೆ. ಮೇಲೆ ಎರಡು ಹೆಡ್ ಲ್ಯಾಂಪ್, ಕೆಳಗೆ ಮೀನಿನ ಕಣ್ಣಿನಂತಹ ಇನ್ನೆರಡು ಹೆಡ್ ಲ್ಯಾಂಪ್ ಗಳು ಇದರ ಸೌಂದರ್ಯವನ್ನು ಹೆಚ್ಚಿಸಿವೆ.

ಇಂಟಿರಿಯರ್ ನ್ನು ಒಮ್ಮೆ ಇಣುಕಿ ನೋಡಿದರೆ ಸಾಕು. ಗುಣಮಟ್ಟ, ಆಕರ್ಷಕತೆ, ಶ್ರೀಮಂತಿಕೆ ಮತ್ತು ಐಷಾರಾಮಿ ಗುಣಗಳು ಎದ್ದು ಕಾಣುತ್ತವೆ. ಕಟ್ಟಿಂಗ್ ಎಡ್ಜ್ ವಿನ್ಯಾಸದ ಡ್ಯಾಷ್ ಬೋರ್ಡ್ ಅಂತೂ ಸೂಪರ್ ಆಗಿದೆ.

ಪ್ರತಿಕಾರುಗಳ ಸೌಂದರ್ಯ ಹೆಚ್ಚಿಸುವುದು ಅದರಲ್ಲಿರುವ ಫೀಚರ್ ಗಳು. ವೆರ್ನಾ ದಲ್ಲಿ ಸುಲಭವಾಗಿ ನಿರ್ವಹಿಸಬಹುದಾದ ಸ್ವಿಚ್ ಗೇರ್, ವಿಆಕಾರದ ಕನ್ಸೊಲ್, ಜೊತೆಗೆ ಮುದ್ದಾಗಿರುವ ಮ್ಯೂಸಿಕ್ ಸಿಸ್ಟಮ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸ್ಟೀರಿಂಗ್ ವೀಲ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಸುಂದರ ಸೀಟುಗಳು ಆರಾಮದಾಯಕತೆಯೊಂದಿಗೆ ಸುರಕ್ಷತೆಯ ಅನುಭವವನ್ನೂ ನೀಡುತ್ತವೆ.

ಯುಎಸ್ ಬಿ ಪೋರ್ಟ್ ಮತ್ತು ಬ್ಲೂಟೂಥ್ ಸಾಧನ ಸೇರಿದಂತೆ ಮ್ಯೂಸಿಕ್ ಮನರಂಜನೆಗೆ ಇಲ್ಲಿ ಯಾವುದೇ ಮಿತಿಗಳಿಲ್ಲ. ಒಳಗಡೆ ಆರು ಏರ್ ಬ್ಯಾಗ್ ಗಳಿವೆ. ಇದರಲ್ಲಿ 2 ಸೈಡ್ ಏರ್ ಬ್ಯಾಗ್ ಗಳಿವೆ. ಡ್ರೈವರ್ ಮತ್ತು ಎದುರು ಕೂತ ಪ್ರಯಾಣಿಕನಿಗೂ ಒಂದೊಂದು ಏರ್ ಬ್ಯಾಗ್ ಗಳಿವೆ.

2011ರ ವೆರ್ನಾ ಎರಡು ಪೆಟ್ರೊಲ್ ಮತ್ತು ಎರಡು ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತವೆ. ಎರಡೆರಡು ಆವೃತ್ತಿಗಳೇನು ಎಂದರೆ 1.4 ಲೀಟರ್ ಮತ್ತು 1.6 ಲೀಟರ್ ಎಂಜಿನ್ ಗಳಾಗಿವೆ. ಇದರಲ್ಲಿ 1.4 ಲೀಟರ್ ಎಂಜಿನ್ ಆವೃತ್ತಿಗಳಲ್ಲಿ 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಇದೆ. 1.6 ಲೀಟರ್ ಆವೃತ್ತಿಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇದೆ.

ಯಾವುದೇ ಒತ್ತಡವಿಲ್ಲದೇ ಆರಾಮವಾಗಿ ಸವಾರಿ ಮಾಡುವಲ್ಲಿ ಇವೆರಡು ಎಂಜಿನ್ ಗಳು ಅನನ್ಯ ಕ್ಷಮತೆ ನೀಡುತ್ತವೆ. ದೇಶದ ರಸ್ತೆಗೆ ಪೂರಕವಾಗಿರುವ ಇದರ ಸಸ್ಪೆನ್ಸನ್ ಇಷ್ಟವಾಗುತ್ತದೆ. ನೂತನ ವೆರ್ನಾ ಕಾರಿಗೆ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 7,08,320 ರು.ನಿಂದ 10,88,826 ರು.ವರೆಗಿದೆ.

ಖಂಡಿತಾ ನೂತನ ಹ್ಯುಂಡೈ ವೆರ್ನಾ ಕಾರು ಹ್ಯುಂಡೈ ಮೋಟರ್ ಇಂಡಿಯಾದ ಗುಣಮಟ್ಟ ಮತ್ತು ಹಣದ ಮೌಲ್ಯಕ್ಕೆ ಕೊರತೆಯಾಗದಂತೆ ರೂಪಿಸಲಾಗಿರುವ ಅತ್ಯುತ್ತಮ ಕಾರೆಂಬುದರಲ್ಲಿ ಎರಡು ಮಾತಿಲ್ಲ. 2011ರ ನೂತನ ಹ್ಯುಂಡೈ ವೆರ್ನಾ ಇಷ್ಟಪಡಲು ಸದ್ಯ ಇಷ್ಟು ಕಾರಣಗಳು ಸಾಕು.

Most Read Articles

Kannada
English summary
All new Hyundai Verna 2011 a perfect combination of style, power, and luxury. Fluidic sculpture design philosophy that seeks to create cars that are inspired by nature and are based on the natural rhythm of life. Just read Hyundai Verna 2011 soundarya lahari.
Story first published: Sunday, June 5, 2011, 12:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X