ಮಹೀಂದ್ರ ಕಂಪನಿ ಕೂಡ ದರ ಹೆಚ್ಚು ಮಾಡುತ್ತದಂತೆ!!

Mahindra to hike prices up to 3% from January
ರೆನಾಲ್ಟ್, ನಿಸ್ಸಾನ್, ಹ್ಯುಂಡೈ, ಫೋರ್ಡ್, ಜನರಲ್ ಮೋಟರ್ಸ್ ಮತ್ತು ಟೊಯೊಟಾ ಕಿರ್ಲೊಸ್ಕರ್ ಈಗಾಗಲೇ ಜನವರಿ ತಿಂಗಳಿನಿಂದ ಕಾರು ದರಗಳನ್ನು ಶೇಕಡ 3ರಷ್ಟು ಹೆಚ್ಚಳ ಮಾಡುವುದಾಗಿ ಪ್ರಕಟಿಸಿವೆ. ಇದೀಗ ಮಹೀಂದ್ರ ಆಂಡ್ ಮಹೀಂದ್ರ ಕಂಪನಿ ಕೂಡ ಮುಂದಿನ ವರ್ಷದ ಜನವರಿಯಿಂದ ತನ್ನ ಎಲ್ಲಾ ವಾಹನಗಳ ದರವನ್ನು ಶೇಕಡ 3ರಷ್ಟು ಏರಿಕೆ ಮಾಡುವುದಾಗಿ ತಿಳಿಸಿದೆ.

ಬಿಡಿಭಾಗ ದರ ಹೆಚ್ಚಳ, ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿದಿರುವುದು ಇತ್ಯಾದಿ ಕಾರಣಗಳಿಂದ ಕಂಪನಿಯು ದರ ಹೆಚ್ಚಳ ಮಾಡಲಿದೆ. "ವಿವಿಧ ಮಾಡೆಲಿಗೆ ಅನುಗುಣವಾಗಿ ವಾಹನ ದರಗಳನ್ನು ಶೇಕಡ 3ರವರೆಗೆ ಹೆಚ್ಚಳ ಮಾಡಲಾಗುವುದು" ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

ರೆನಾಲ್ಟ್ ಕಂಪನಿಯು ಕೊಲಿಯೊಸ್ ದರವನ್ನು ಸುಮಾರು 1 ಲಕ್ಷ ರು.ನಷ್ಟು ಹೆಚ್ಚಿಸುವುದಾಗಿ ತಿಳಿಸಿದೆ. ನಿಸ್ಸಾನ್ ಕಂಪನಿಯು ಸಣ್ಣಕಾರು ಮೈಕ್ರಾ ಮತ್ತು ಪ್ರೀಮಿಯಂ ಸೆಡಾನ್ ದರವನ್ನು ಶೇಕಡ 2ರಷ್ಟು ಏರಿಕೆ ಮಾಡಲಿದೆ. ಹ್ಯುಂಡೈ ಕೂಡ ಕಾರು ದರಗಳನ್ನು ಶೇಕಡ1.5ರಿಂದ ಶೇಕಡ 2ರಷ್ಟು ಏರಿಕೆ ಮಾಡಲಿದೆ.

More from DriveSpark

Article Published On: Thursday, December 15, 2011, 14:26 [IST]
English summary
Mahindra & Mahindra will raise the prices of its entire range of vehicles by up to 3 per cent from January 1 due to rising input costs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+