ಬೇಟೆಗೆ ಸಿದ್ಧವಾದ ಚಿರತೆ ಮಹೀಂದ್ರ ಎಕ್ಸ್ ಯುವಿ ರಸ್ತೆಗೆ

ನೂತನಕಾರು ಬ್ಯೂಟಿ, ಸ್ಪೋರ್ಟಿ ಮತ್ತು ಲೈಫ್ ಸ್ಟೈಲ್ ಕಾರಾಗಿರುವುದಾಗಿ ಕಂಪನಿ ಪ್ರಕಟಿಸಿದೆ. ಚಿರತೆ ಬೇಟೆಗೆ ಸಿದ್ಧವಾಗಿರುವಂತೆ ಮೊದಲ ನೋಟಕ್ಕೆ ಕಾಣುತ್ತದೆ. ದರ ಹೇಳಿ ಕಾರು ಗೆಲ್ಲಿ ಕಾರ್ಯಕ್ರಮದಲ್ಲಿ ಕಂಪನಿಯ ಒಂದು ಪ್ರಶ್ನೆ ಇದೇ ಆಗಿತ್ತು. ಅಂದರೆ ಈ ಕಾರು ನೋಡಲು ಯಾವ ಪ್ರಾಣಿಯಂತೆ ಕಾಣುತ್ತದೆ ಎಂದಾಗಿತ್ತು. ಚೀತಾ ಅಂತ ಉತ್ತರಿಸಿದವರು ವಿನ್!!
"ಇದು ಕೇವಲ ಕಾರಲ್ಲ. ಗ್ರಾಹಕರ ನಿಷ್ಠಾವಂತ ವಾಹನ. ಇಂದು ಈ ಕಾರನ್ನು ಔಪಚಾರಿಕವಾಗಿ ಹೊರ ತಂದಿದ್ದೇವೆ. ಇದರ ದರ ಮತ್ತು ಇತರ ಮಾಹಿತಿಗಳನ್ನು ನಾಳೆ ಪ್ರಕಟಿಸಲಿದ್ದೇವೆ" ಎಂದು ಮಹೀಂದ್ರ ಆಂಡ್ ಮಹೀಂದ್ರ ಮುಖ್ಯಸ್ಥ ಪವನ್ ಗೋಯೆಂಕಾ ಹೇಳಿದ್ದಾರೆ.
ಕಂಪನಿಯು ಕಾರಿನ ದರ ಮತ್ತಿತ್ತರ ವಿಶೇಷತೆಗಳನ್ನು ಅಂದಾಜಿಸಲು ಜನರಿಗೆ ತಿಳಿಸಿತ್ತು. ಇದರಲ್ಲಿ ಗೆಲುವು ಪಡೆದ 5 ಜನರಿಗೆ ಫಾರ್ಮುಲಾ ಒನ್ ಗ್ರಾಂಡ್ ಪ್ರಿಕ್ಸ್ ಟಿಕೇಟ್ ದೊರಕಲಿದೆ. ಇನ್ನು ಹಲವು ಆಕರ್ಷಕ ಪ್ರಶಸ್ತಿಗಳನ್ನು ಕಂಪನಿ ಪ್ರಕಟಿಸಿತ್ತು. ಅದನ್ನೆಲ್ಲ ಇಂದು ಕಂಪನಿ ಪ್ರಕಟಿಸುವ ನಿರೀಕ್ಷೆಯಿದೆ.


Click it and Unblock the Notifications








