ಟಾಟಾದಿಂದ ಮೈಕ್ರೊ ಹೈಬ್ರಿಡ್ ನ್ಯಾನೊ ಕಾರ್

ನೂತನ ಸ್ಟಾರ್ಟ್ ಸ್ಟಾಪ್ ಸಿಸ್ಟಮ್ ಕಾರನ್ನು ಸ್ವಯಂಚಾಲೀತವಾಗಿ ಎಂಜಿನ್ ಆನ್/ಆಫ್ ಮಾಡಲು ಸಹಕರಿಸುತ್ತದೆ. ಇದರಿಂದ ಕೊಂಚ ಇಂಧನ ದಕ್ಷತೆ ಹೆಚ್ಚುತ್ತದೆ. ಇದು ಕಾರು ಚಾಲಕರಿಗೆ ಆರಾಮದಾಯಕ ಎನಿಸಲಿದೆ. ಇಂತಹ ಸಾಧನವನ್ನು ಈ ಹಿಂದೆ ಮಹೀಂದ್ರ ಕಂಪನಿಯು ಸ್ಕಾರ್ಪಿಯೋ ಕಾರುಗಳಿಗೆ ಅಳವಡಿಸಿತ್ತು.
ಆದರೆ ಇದರಿಂದ ಕೇವಲ ಅಲ್ಪಪ್ರಮಾಣದಲ್ಲಿ ಇಂಧನ ಉಳಿಸಬಹುದು ಎಂಬುದು ಇದರ ಕೊರತೆ. ಇದರ ಇನ್ನೊಂದು ಸಮಸ್ಯೆಯೆಂದರೆ ಸ್ವಯಂಚಾಲೀತವಾಗಿ ಎಂಜಿನ್ ಆಫ್ ಆದಾಗ ಏರ್ ಕಂಡಿಷನ್ ಕೂಡ ಆಫ್ ಆಗುತ್ತದೆ. ಈ ಕಾರಣಕ್ಕೆ ದೇಶದ ವಾತಾವರಣ ಮತ್ತು ಪರಿಸರಕ್ಕೆ ಇದು ಅಷ್ಟು ಸೂಕ್ತ ಅನಿಸುವುದಿಲ್ಲ.
ಟಾಟಾ ನ್ಯಾನೊ ಕಾರು ರಸ್ತೆಯಲ್ಲಿ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಆದರೆ ಕಂಪನಿ ಅದಕ್ಕಿಂತಲೂ ಸಣ್ಣ ಕಾರು ಹೊರತರಲು ಯೋಜಿಸಿರುವುದು ಗ್ರಾಹಕರಿಗೆ ಇಷ್ಟವಾದಿತೇ ಎಂಬ ಪ್ರಶ್ನೆ ಮೂಡಿಸಿದೆ. ನೂತನ ತಂತ್ರಜ್ಞಾನಗಳೊಂದಿಗೆ ಬರಲಿರುವ ಪುಟ್ಟ ನ್ಯಾನೊ ಕಾರ್ ಮೋಡಿ ಮಾಡುವುದೇ ಕಾದು ನೋಡೋಣ.


Click it and Unblock the Notifications








