ಮಿಟ್ಸುಬಿಸಿ ಮಿರೆಜ್ ಸೆಡಾನ್ ಆವೃತ್ತಿ ಬರಲಿದೆಯಂತೆ!

ಮಿಟ್ಸುಬಿಸಿ ಮಿರೆಜ್ ಕಾರು ದೇಶದ ಮಾರುಕಟ್ಟೆಗೂ ಬರಲಿದೆ. ಇದರ ದರ ಸುಮಾರು 15 ಸಾವಿರ ಡಾಲರ್ ಅಂತೆ. ಭಾರತದಲ್ಲಿ ದರ ಸುಮಾರು ಐದಾರು ಲಕ್ಷ ರುಪಾಯಿ ಇರುವ ನಿರೀಕ್ಷೆಯಿದೆ. ಆದರೆ ಸೆಡಾನ್ ಮಿರೆಜ್ ಕುರಿತು ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ. ಕಂಪನಿಯು ಸೆಡಾನ್ ಕುರಿತು ಯೋಚನೆ ಆರಂಭಿಸಿದೆಯಷ್ಟೇ!
ಯುವ ಕುಟುಂಬದ ಸವಾರಿಗೆ ಸೂಕ್ತವಾಗಿರುವ ಮಿರೆಜ್ ಕಾರನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಕಂಪನಿಯು ತಿಳಿಸಿದೆ. ಈ ಸಣ್ಣಕಾರು ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ. ಇದರ ಸಣ್ಣಗಾತ್ರ ಮತ್ತು ದರ ಭಾರತದ ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.
ಇನ್ನೊಂದು ವರ್ಷದಲ್ಲಿ ಮಿರೆಜ್ ಸಣ್ಣಕಾರು ಮಾರಾಟ ಆರಂಭವಾಗಲಿದೆ. ಇದು ನೂತನ ಒಂದು ಲೀಟರಿನ 3 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಇದರೊಂದಿಗೆ ಮಿಟ್ಸುಬಿಸಿ ಕಂಪನಿಯು ಮಿರೆಜ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಕೂಡ ಹೊರತರಲಿದೆಯಂತೆ.


Click it and Unblock the Notifications








