ಗೂಗಲ್ ನಲ್ಲಿ ಹೆಚ್ಚು ಹುಡುಕಾಡಿದ ಕಾರು ಯಾವುದು?

Most Searched Car In Google
ಅಂತರ್ ಜಾಲವೆಂಬ ಮಾಯಾಜಾಲದಲ್ಲಿ ಹುಡುಕಾಡಿದರೆ ಎಲ್ಲವೂ ದೊರಕುತ್ತದೆ. ಅಚ್ಚುಮೆಚ್ಚಿನ ಸೆಲೆಬ್ರಿಟಿಗಳು, ಚಿತ್ತ ಕದಡಿಸುವ ಚಿತ್ರವಿಚಿತ್ರಗಳು, ವಿಡಿಯೋಗಳು, ಹಾಡುಗಳು, ಮಾಹಿತಿಗಳು ಅಲ್ಲಿ ದೊರಕುತ್ತವೆ.

ಪ್ರತಿವರ್ಷ ಹೆಚ್ಚು ಹುಡುಕಾಡಿದ ವಿಷಯವನ್ನು ಗೂಗಲ್ ಬಹಿರಂಗಪಡಿಸುತ್ತದೆ. ಯಾವ ಸೆಲೆಬ್ರಿಟಿ ಹುಡುಕಾಟದಲ್ಲಿ ಟಾಪ್ ಸ್ಥಾನ ಪಡೆದಿದ್ದಾರೆ. ಯಾರು ಯಾವ ಕಾರು ಬೈಕನ್ನು ಹೆಚ್ಚು ಹುಡುಕಾಡಿದ್ದಾರೆ. ಹೀಗೆ ಎಲ್ಲಾ ಮಾಹಿತಿಗಳು ದೊರಕುತ್ತವೆ.

ಕಾರು ಮತ್ತು ಬೈಕು ಖರೀದಿಗೆ ಮುನ್ನ ಹೆಚ್ಚಿನ ಜನರು ಭೇಟಿ ನೀಡುವ ಸ್ಥಳ ಅಂತರ್ ಜಾಲ. ಅಲ್ಲಿ ಇಷ್ಟಪಟ್ಟ ಕಾರು ಬೈಕುಗಳ ವಿಮರ್ಶೆ, ಟೆಸ್ಟ್ ರೈಡ್, ದರ, ಮಾಹಿತಿಗಳನ್ನು ಪಡೆಯುತ್ತಾರೆ. ಗೂಗಲ್ ಸರ್ಚ್ ಎಂಜಿನ್ ನಲ್ಲಿ ಈ ವರ್ಷ ಹೆಚ್ಚು ಜನರು ಹುಡುಕಾಡಿದ ಕಾರು ಮತ್ತು ಕಾರು ಕಂಪನಿಗಳ ಪಟ್ಟಿ ಇಲ್ಲಿದೆ.

ಜಪಾನಿನ ಕಾರು ಮತ್ತು ಕಾರು ಬ್ರಾಂಡು ಗೂಗಲ್ ಹುಡುಕಾಟದಲ್ಲಿ ಅಗ್ರಸ್ಥಾನದಲ್ಲಿದೆ. ಈ ವರ್ಷ ಹೆಚ್ಚು ಜನರು ಹುಡುಕಾಡಿದ ಕಾರು ಹೋಂಡಾ ಸಿವಿಕ್. ಟೊಯೊಟಾ ಕಂಪನಿಯನ್ನು ಹೆಚ್ಚು ಜನರು ಹುಡುಕಾಡಿದ್ದಾರೆ.

ಈ ವರ್ಷ ಹೆಚ್ಚು ಜನರು ಹುಡುಕಾಡಿದ ಕಾರು ಮತ್ತು ಕಂಪನಿಗಳ ಹೆಸರು ಇಲ್ಲಿದೆ. ಇದರಲ್ಲಿ ಕೆಲವು ಕಾರುಗಳು ಭಾರತದಲ್ಲಿ ಮಾರಾಟವಾಗುತ್ತಿಲ್ಲ ಎಂಬುದು ನಿಮ್ಮ ಗಮನಕ್ಕೆ. ಗೂಗಲ್ ನಲ್ಲಿ ಹುಡುಕಾಟಕ್ಕೆ ಯಾವ ಗಡಿ, ದೇಶದ ಹಂಗಿಲ್ಲ ತಾನೇ.

ಹೆಚ್ಚು ಹುಡುಕಾಡಿದ ಕಾರುಗಳು
* ಹೋಂಡಾ ಸಿವಿಕ್
* ಹೋಂಡಾ ಅಕಾರ್ಡ್
* ಟೊಯೊಟಾ ಕ್ಯಾಮ್ರಿ
* ಹೋಂಡಾ ಸಿಆರ್-ವಿ
* ಫೋರ್ಡ್ ಎಫ್-150
* ಹ್ಯುಂಡೈ ಸೊನಾಟಾ
* ಷೆವರ್ಲೆ ಇಕ್ವೊನೊಕ್ಸ್
* ಟೊಯೊಟಾ ಪ್ರಿಯೂಸ್
* ಫೋಕ್ಸ್ ವ್ಯಾಗನ್ ಜೆಟ್ಟಾ
* ನಿಸ್ಸಾನ್ ಅಲ್ಟಿಮಾ
* ಟೊಯೊಟಾ ಹೈಲ್ಯಾಂಡರ್
* ಹೋಂಡಾ ಒಡಿಸ್ಸೆ
* ಟೊಯೊಟಾ ಕರೊಲ್ಲಾ
* ಫೋರ್ಡ್ ಫ್ಯೂಷನ್
* ಫೋರ್ಡ್ ಫೋಕಸ್
* ಫೋರ್ಡ್ ಎಕ್ಸ್ ಪ್ಲೋರರ್
* ಟೊಯೊಟಾ ರಾವ್4
* ಷೆವರ್ಲೆಟ್ ಸಿಲ್ವೆರೊಡೊ 1500
* ಫೋರ್ಡ್ ಎಸ್ಕೆಪ್

ಹೆಚ್ಚು ಜನರು ಹುಡುಕಾಡಿದ ಕಾರು ಕಂಪನಿಗಳು
* ಟೊಯೊಟಾ ಮೋಟರ್ಸ್
* ಫೋರ್ಡ್ ಮೋಟರ್ಸ್
* ಹೋಂಡಾ ಮೋಟರ್ಸ್
* ಷೆವರ್ಲೆ
* ಹ್ಯುಂಡೈ ಮೋಟರ್ಸ್

More from DriveSpark

Article Published On: Tuesday, December 20, 2011, 10:30 [IST]
English summary
Most Searched Cars In Google. Honda Civic topping the lsit 2011. Honda Accord, Toyota Camry, Honda CR-V, Ford F-150, Hyundai Sonata, Hyundai Elantra, Chevrolet Equinox,Toyota Prius, Volkswagen Jetta, Nissan Altima, Toyota Highlander, Honda Odyssey, Toyota Corolla, Ford Fusion, Ford Focus, Ford Explorer, Toyota RAV4, Chevrolet Silverado 1500, Ford Escape Most Searched Cars In Google.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+