ನಿಸ್ಸಾನ್ ಸನ್ನಿ ಡೀಸೆಲ್ ಎಂಜಿನ್ ರಹಸ್ಯ ಬಹಿರಂಗ!!
ಇತ್ತೀಚೆಗೆ ಡ್ರೈವ್ ಸ್ಪಾರ್ಕ್ ತಂಡ ನಿಸ್ಸಾನ್ ಸನ್ನಿ ಕಾರಿನ ಟೆಸ್ಟ್ ಡ್ರೈವ್ ಮಾಡಿತ್ತು. ಕಂಪನಿಯು ಇನ್ನೂ ನಿಸ್ಸಾನ್ ಸನ್ನಿ ಡೀಸೆಲ್ ಆವೃತ್ತಿ ಹೊರತಂದಿಲ್ಲವೆನ್ನುವುದು ಆಶ್ಚರ್ಯ. ಡೀಸೆಲ್ ಆವೃತ್ತಿ ಸನ್ನಿ ಬಂದರೆ ರಸ್ತೆ ಸನ್ನಿಮಯ ಆಗುವುದರಲ್ಲಿ ಸಂಶಯವಿಲ್ಲ. ಡೀಲರುಗಳಲ್ಲಿ ಹೆಚ್ಚಿನವರು ಡೀಸೆಲ್ ಸನ್ನಿ ಇದೆಯಾ ಎಂದು ಕೇಳುತ್ತಿದ್ದಾರಂತೆ!
ಮುಂದಿನ ವರ್ಷದ ಆರಂಭದಲ್ಲಿ ನಿಸ್ಸಾನ್ ಸನ್ನಿ ಡೀಸೆಲ್ ಆವೃತ್ತಿ ಹೊರತರುವುದಾಗಿ ಕಂಪನಿ ತಿಳಿಸಿದೆ. ಸನ್ನಿಗೆ ಕಂಪನಿ ಬಳಸುವ ಡೀಸೆಲ್ ಎಂಜಿನ್ ಕುರಿತಾದ ರಹಸ್ಯವು ಡ್ರೈವ್ ಸ್ಪಾರ್ಕ್ ಗೆ ದೊರಕಿದೆ. ಇದು 1461 ಟರ್ಬೊ ಚಾರ್ಜಡ್ ಎಂಜಿನ್ ಹೊಂದಿದ್ದು, 86 ಪಿಎಸ್ ಮತ್ತು 200 ಎನ್ಎಂ ಟಾರ್ಕ್ ಪವರ್ ನೀಡಲಿದೆ. ಇದು ಸನ್ನಿ ಪವರ್ ಹೆಚ್ಚಿಸಲಿದೆ.
ಪೆಟ್ರೋಲ್ ಆವೃತ್ತಿಗೆ ಹೋಲಿಸಿದರೆ ಡೀಸೆಲ್ ಸನ್ನಿ ಹೆಚ್ಚು ಮೈಲೇಜ್ ಮತ್ತು ಕಡಿಮೆ ರನ್ನಿಂಗ್ ವೆಚ್ಚ ಹೊಂದಿರಲಿದೆ. ಒಂದು ನಿರೀಕ್ಷೆಯ ಪ್ರಕಾರ ನಿಸ್ಸಾನ್ ಸನ್ನಿ ಡೀಸೆಲ್ ಆವೃತ್ತಿ ಪ್ರತಿಲೀಟರ್ ಗೆ ಸುಮಾರು 20 ಕಿ.ಮೀ. ಮೈಲೇಜ್ ನೀಡಲಿದೆ. ಡೀಸೆಲ್ ಆವೃತ್ತಿ ಸನ್ನಿಯ ದರದ ಯಾವುದೇ ಮಾಹಿತಿ ಕಂಪನಿ ಕಡೆಯಿಂದ ದೊರಕಿಲ್ಲ. ದರ ಪೆಟ್ರೋಲ್ ಆವೃತ್ತಿಗಿಂತ ಸುಮಾರು ಒಂದು ಲಕ್ಷ ರು. ಹೆಚ್ಚಿರಲಿದೆ. (ನಿಸ್ಸಾನ್ ಸನ್ನಿ ಟೆಸ್ಟ್ ಡ್ರೈವ್ ಓದಿರಿ)
ನಿಸ್ಸಾನ್ ಸನ್ನಿ ಕಾರುಗಳ ಚಿತ್ರಗಳ ರಾಶಿ ಇಲ್ಲಿದೆ


Click it and Unblock the Notifications








