ಟೆಸ್ಟ್ ಡ್ರೈವ್: ನಿಸ್ಸಾನ್ ಸನ್ನಿ ಸಂಪೂರ್ಣ ವಿಮರ್ಶೆ

ನಿಸ್ಸಾನ್ ಸನ್ನಿಯಲ್ಲಿ ಕೆಲವು ವಿಷಯಗಳು ನಮಗೆ ಇಷ್ಟವಾಗಿಲ್ಲ. ಎಂಜಿನ್ ಸದ್ದು ಸ್ವಲ್ಪ ಜಾಸ್ತಿ ಇದೆ ಎನಿಸಿತ್ತು. ಎಂಜಿನ್ ಸದ್ದು 3 ಸಾವಿರ ಆರ್ ಪಿಎಂಗಿಂತ ಹೆಚ್ಚಿರುವುದರಿಂದ ಚೂರು ಕಿರಿಕಿರಿ ಎನಿಸಿದರೂ ಎನಿಸಬಹುದು.
ಇಷ್ಟವಾಗದ ಇನ್ನೊಂದು ವಿಷ್ಯವೆಂದರೆ ನಿಸ್ಸಾನ್ ಸನ್ನಿ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿಲ್ಲ. ಆಟೋಮ್ಯಾಟಿಕ್ ಟ್ರಾನ್ಷ್ ಮಿಷನ್ ಕೂಡ ಇಲ್ಲ. ಇವೆಲ್ಲದರ ಹೊರತಾಗಿಯೂ ಅದರಲ್ಲಿರುವ ಫೀಚರುಗಳಿಗೆ ತೃಪ್ತಿಪಡಬಹುದು.
ನಮ್ಮ ಕಾರು ಸಿಟಿ ಮುಗಿದು ನೈಸ್ ರಸ್ತೆಗೆ ಪ್ರವೇಶಿಸಲು ಸಿದ್ಧವಾಗಿತ್ತು. ಅಲ್ಲೇ ಎತ್ತರದಲ್ಲಿ ಬೃಹತ್ ಕಟೌಟ್ ರಾರಾಜಿಸುತ್ತಿತ್ತು. ಕಟೌಟ್ ನಲ್ಲಿದ್ದ ಉದ್ದ ತಲೆಕೂದಲಿನ ವ್ಯಕ್ತಿಯೊಬ್ಬರನ್ನು ತೋರಿಸುತ್ತ ಸಂದೀಪ "ಯಾರಾತ" ಎಂದು ಕೇಳಿದ
ನಾನು ಹೇಳಿದೆ. ಖೇಣಿ... ಅಶೋಕ್ ಖೇಣಿ.


Click it and Unblock the Notifications








