ಜಯನಗರದಿಂದ ನೈಸ್ ರಸ್ತೆವರೆಗೆ ಸನ್ನಿ ಸವಾರಿ

ನಾವು ಒಟ್ಟಾರೆ ಪ್ರಯಾಣ ಮಾಡಿದ್ದು ಸುಮಾರು 200 ಕಿ.ಮೀ. ನಮಗೆ ಪ್ರತಿಲೀಟರ್ ಪೆಟ್ರೋಲ್ ಗೆ ಅಂದಾಜು ಹದಿನೈದು ಕಿ.ಮೀ. ಮೈಲೇಜ್ ದೊರಕಿದೆ. ಬನ್ನಿ ನಿಸ್ಸಾನ್ ಸನ್ನಿ ಸಂಪೂರ್ಣ ವಿಮರ್ಶೆ ಮಾಡೋಣ.
ಸನ್ನಿ ವಿನ್ಯಾಸ ಆಕರ್ಷಕ. ಅದರ ಬೃಹತ್ ಗಾತ್ರವೇ ಪ್ರಮುಖ ಆಕರ್ಷಣೆ. ಕಾರಿನ ಹಿಂಭಾಗದ ಬೂಟ್ ಸ್ಪೇಸ್ ಅಥವಾ ಡಿಕ್ಕಿ ತೆರೆದು ನೋಡಿದರೆ ನಿಮಗೆ ಅಚ್ಚರಿಯಾದೀತು. ಅಲ್ಲಿ ಸಾಕಷ್ಟು ಸ್ಥಳಾವಕಾಶವಿರುವ ಡಿಕ್ಕಿ ನೋಡಿ ನಮಗೆ ಒಮ್ಮೆ ಅಂಬಾಸಡರ್ ಕಾರು ನೆನಪಿಗೆ ಬಂದಿತ್ತು.
ಈ ಕಾರು ತುಂಬಾ ಉದ್ದ ಇದೆ ಅಂತ ಎಲ್ಲರಿಗೂ ಅನಿಸುತ್ತದೆ. ಇದೇ ಕಾರಣಕ್ಕೆ ಹೆಚ್ಚು ಜನರಿಗೆ ಇದು ಇಷ್ಟವಾದೀತು. ನಾವು ರೈಡ್ ಮಾಡಿದ ಕಾರಿನ ಬಣ್ಣ ಬಿಳಿ. ಅದರ ಮುಂಭಾಗದಲ್ಲಿ ನಿಸ್ಸಾನ್ ಸಿಂಬಲ್. ಆಕರ್ಷಕ ಹ್ಯಾಂಡಲ್. ಡೀಸೆಂಟ್ ಲುಕ್ ಇಷ್ಟವಾಗುತ್ತದೆ. ಇದರ ಡ್ರೈವಿಂಗ್ ಅನುಭವ ಅತ್ಯುತ್ತಮವಾಗಿದೆ. ಪವರ್ ಸ್ಟೀರಿಂಗ್, ಸ್ಟೀರಿಂಗ್ ನಲ್ಲೇ ಸ್ಟೀರಿಯೊ ವಾಲ್ಯುಮ್, ಏರ್ ಬ್ಯಾಗ್ ಇತ್ಯಾದಿ ಫೀಚರುಗಳಿವೆ. ಸಿಟಿ ರಸ್ತೆ ಸವಾರಿಯಲ್ಲಿ ಹೆಚ್ಚು ಆಯಾಸವಾಗುವುದಿಲ್ಲ.


Click it and Unblock the Notifications








