ಖೇಣಿ ರಸ್ತೆಯಲ್ಲಿ ಫನ್ನಿಯಾಗಿತ್ತು ಸನ್ನಿ ಸವಾರಿ

ಆ ವಿಷಯ ಅಲ್ಲೇ ಇರಲಿ. ನೈಸ್ ರಸ್ತೆಯಲ್ಲಿ ಸನ್ನಿ ಸವಾರಿ ಅತ್ಯುತ್ತಮ ಅನುಭವ. ಅಕ್ಕಪಕ್ಕದಲ್ಲಿ ಬೃಹತ್ ಲಾರಿಗಳು ವೇಗವಾಗಿ ಸಾಗುತ್ತಿದ್ದರೂ ನಮ್ಮ ಕಾರು ರಾಜನಂತೆ ಸಾಗುತ್ತಿತ್ತು. ನಮ್ಮ ಕಾರು ವಿಮರ್ಶೆ ಮುಂದುವರೆಸೋಣ.
ನಿಸ್ಸಾನ್ ಸಿ-ಸೆಗ್ಮೆಂಟಿನ ಪ್ರತಿಸ್ಪರ್ಧಿ ಕಾರುಗಳಿಗೆ ಹೋಲಿಸಿದರೆ ಸನ್ನಿ ಒಟ್ಟಾರೆ ವಿನ್ಯಾಸ ಇಷ್ಟವಾಗುತ್ತದೆ. ಅಂದ್ರೆ ಮುಂಭಾಗದ ಗ್ರಿಲ್, ಹೆಡ್ ಲೈಟ್, ವೀಲ್ ಎಲ್ಲವೂ ಆಕರ್ಷಕವಾಗುತ್ತದೆ. ಹಿಂಭಾಗದಲ್ಲಿರುವ ಸಿಗ್ನಲ್ ಲೈಟ್ ಮೂಲೆಯಲ್ಲಿ ಉದ್ದವಾಗಿದೆ. ಈ ವಿನ್ಯಾಸ ಚೆನ್ನಾಗಿದೆ. ಆದರೆ ಯಾವುದದರೂ ಗಾಡಿ ಒರೆಸಿಕೊಂಡು ಹೋದರೆ ಪೂರ್ತಿ ಫಾಗ್ ಲ್ಯಾಂಪ್ ಬದಲಾಯಿಸುವ ಕಷ್ಟ ನಿಮಗೆ ಬರಬಹುದು.
ಒಂದೇ ಮಾತಿನಲ್ಲಿ ಹೇಳುವುದಾದರೆ ಎಕ್ಸ್ ಟೀರಿಯರ್ ಪೇಂಟ್ ಗುಣಮಟ್ಟ ಸೂಪರ್. ಅಂದ್ರೆ ಪೊಲೊ/ವೆಂಟೊ ಪೇಂಟ್ ಗಳಿಗೆ ಹೋಲಿಸಿದರೆ ಫಿನಿಷಿಂಗ್ ಹೆಚ್ಚು ಆಪ್ತವಾಗುತ್ತದೆ. ಹಿಂಭಾಗದಿಂದ ನೋಡಿದರೆ ಡಿಜೈರ್ ಲುಕ್ ಅಭಿವೃದ್ಧಿಪಡಿಸಿದಂತೆ ಕಾಣುತ್ತದೆ.
ಕಾರಿನ ಮುಂಭಾಗದಲ್ಲಿ ಕೊಂಚ ಪ್ಯಾನೆಲ್ ಗ್ಯಾಪ್ ಕಾಣುತ್ತದೆ. ಅಂದ್ರೆ ಬಾನೆಟ್ ಮತ್ತು ಬೂಟ್ ಸ್ಥಳದಲ್ಲಿ ಗ್ಯಾಪ್ ಕಾಣುತ್ತದೆ. ಬಾನೆಟ್ ಮೂಲೆಯಲ್ಲೂ ಬೃಹತ್ ಗ್ಯಾಪ್ ಇದೆ.
ನಾವು ಟೆಸ್ಟ್ ರೈಡ್ ಮಾಡಿದ ಟಾಪ್ ಎಂಡ್ ಸನ್ನಿ ಆವೃತ್ತಿಯಲ್ಲಿ ಸ್ಟಾರ್ಟ್/ಸ್ಟಾಪ್ ಪುಷ್ ಬಟನ್ ಇದೆ. ಉಳಿದಂತೆ ಕೀಲೆಸ್ ಎಂಟ್ರಿ, ಪವರ್ ವಿಂಡೋಸ್, ಎಲೆಕ್ಟ್ರಿಕ್ ಒಆರ್ ವಿಎಂ, ಆಡಿಯೋ ಸಿಸ್ಟಮ್, ಸಿಡಿ ಪ್ಲೇಯರ್, ಸ್ಟೇರಿಂಗ್ ನಲ್ಲಿಯೇ ಆಡಿಯೊ ಕಂಟ್ರೊಲ್ ಇತ್ಯಾದಿಗಳಿವೆ.
ಸನ್ನಿ ಅನುಭವ ಇಷ್ಟಕ್ಕೆ ಮುಗಿಯೋದಿಲ್ಲ. ಮುಂದಿನ ಪುಟ ನೋಡಿ


Click it and Unblock the Notifications








