ಜೋಪಾನ, ಏರ್ ಬ್ಯಾಗ್ ಚೆಕ್ ಮಾಡೋದು ಬೇಡ

ನಿಸ್ಸಾನ್ ಕಂಪನಿಯು ಸನ್ನಿ ಕಾರಿನ ಸುರಕ್ಷತೆಗೆ ಹೆಚ್ಚು ಗಮನ ನೀಡಿದಂತೆ ಕಾಣುತ್ತದೆ. ಅಂದ್ರೆ ಟಾಪ್ ಎಂಡ್ ಆವೃತ್ತಿಯಲ್ಲಿ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಇಬಿಡಿ, ಚಾಲಕ ಮತ್ತು ಚಾಲಕನ ಪಕ್ಕದ ಸವಾರನಿಗೆ ಏರ್ ಬ್ಯಾಗ್ ಇದೆ. ಸನ್ನಿ ಎಕ್ಸ್ ಎಲ್ ಮತ್ತು ಎಕ್ಸ್ ವಿ ಕಾರುಗಳಲ್ಲೂ ಮುಂಭಾಗದ ಪ್ರಯಾಣಿಕನಿಗೆ ಏರ್ ಬ್ಯಾಗ್ ಇದೆ. ಹಿಂಭಾಗದ ಪ್ರಯಾಣಿಕರಿಗೆ ಏರ್ ಬ್ಯಾಗ್ ಇಲ್ಲ.
ಕಾರಿನೊಳಗೆ ಸಾಕಷ್ಟು ಕಂಪರ್ಟೆಬಲ್ ಅನುಭವ ಆಗುತ್ತದೆ. ಹೊರಗೆ ಇದು ಬೃಹತ್ ಕಾರು. ಹಾಗಂತ ಹತ್ತು ಜನರು ಇದರಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ. ಡ್ರೈವರ್ ಸೇರಿದಂತೆ ನಾಲ್ಕು ಜನರು ಆರಾಮವಾಗಿ ಪ್ರಯಾಣಿಸಬಹುದು. ಹಿಂಭಾಗದ ಸೀಟಿನಲ್ಲಿ ಸಪೂರದ ಮೂರು ಜನರು ಕುಳಿತುಕೊಳ್ಳಬಹುದು. ಇಬ್ಬರು ದಪ್ಪದವರು ಕೂತರೆ ನಡುವಿನಲ್ಲಿ ಕುಳಿತ ಮೂರನೆಯವನಿಗೆ ಇಕ್ಕಟ್ಟು ಆಗಬಹುದು.
ಹಿಂಭಾಗದ ಎರಡು ಸೀಟುಗಳ ನಡುವೆ ಕಪ್ ಹೋಲ್ಡರ್ ಇದೆ. ಕಾರಿನಲ್ಲಿ ಕಾಲಿಡಲು ಸಾಕಷ್ಟು ಸ್ಥಳವಕಾಶವಿದೆ. ಸನ್ನಿ ಡ್ಯಾಷ್ ಬೋರ್ಡ್ ವಿನ್ಯಾಸ ಸಿಂಪಲ್ ಆಗಿದೆ. ಆದರೆ ಮುಂಭಾಗದಲ್ಲಿರುವ ಫೀಚರ್ಸ್ ಗಳು, ಮೀಟರ್ ಗಳು, ನಡುವೆ ರೌಂಡ್ ಶೇಪ್ ನಲ್ಲಿರುವ ಸೆಂಟ್ರಲ್ ಕಂಟ್ರೊಲ್ ಕನ್ಸೊಲ್ ಕಾರಿನ ಮುಂಭಾಗದ ಸೌಂದರ್ಯವನ್ನು ಹೆಚ್ಚಿಸಿವೆ.
ಮುಂಭಾಗದ ಸೀಟು ಹೆಚ್ಚು ಆರಾಮದಾಯಕವಾಗಿದೆ. ಮುಂಭಾಗದ ಸೀಟುಗಳಿಗೆ ಹೊಂದಾಣಿಕೆ ಫೀಚರು ಇದೆ. ಐನಾಕ್ಸ್ ಫಿಲ್ಮ್ ಥಿಯೆಟರ್ ಅಥವಾ ಐರಾವತ ಬಸ್ ನಲ್ಲಿ ಪ್ರಯಾಣಿಸಿದಂತೆ ಬೇಕಾದರೆ ಪ್ರಯಾಣಿಸಬಹುದು.


Click it and Unblock the Notifications








