ನಿಸ್ಸಾನ್ ಸನ್ನಿ ಸೆಡಾನ್ ಹೇಗಿದೆ ಸಾರ್?

ಇಂಟಿರಿಯರ್ ಒಳಗಿರುವ ರಿಯರ್ ವ್ಯೂ ಮಿರರ್ ಸಣ್ಣದಾಗಿದೆ. ಹಿಂಭಾಗವನ್ನು ಸಮರ್ಪಕವಾಗಿ ನೋಡಲು ಸಾಧ್ಯವಾಗಲಿಲ್ಲ. ನಾನಂತು ಕತ್ತು ಹಿಂದಕ್ಕೆ ತಿರುಗಿಸಿ ಹಿಂಭಾಗ ನೋಡುತ್ತಿದ್ದೆ ಎನ್ನುವುದು ಸತ್ಯ. ಒಆರ್ ವಿಎಂ ವಿನ್ಯಾಸ ಸೂಪರ್. ಕಾರು ಒಳಗಿನ ಡೋರ್ ಹ್ಯಾಂಡಲ್ ಮೈಕ್ರಾ ಡೋರ್ ಹ್ಯಾಂಡಲ್ ತರಹವೇ ಇದೆ.
ಸನ್ನಿ ಎಕ್ಸ್ ಎಲ್ ಮತ್ತು ಎಕ್ಸ್ ವಿ ಆವೃತ್ತಿಗಳು ಆಟೋಮ್ಯಾಟಿಕ್ ಏರ್ ಕಂಡಿಷನ್ ಹೊಂದಿವೆ. ಅದರ ಕಂಟ್ರೊಲ್ ಗಳು ಮೈಕ್ರಾದಂತೆ ಇವೆ. ಎಸಿ ಕ್ಷಮತೆ ಚೆನ್ನಾಗಿದೆ. ಕೂಲಾಗಿ ಪ್ರಯಾಣಿಸಬಹುದಾಗಿದೆ.
ಆಡಿಯೋ ಪ್ಯಾಕೇಜ್ ಸೂಪರ್. ಅಂದ್ರೆ ನಾಲ್ಕು ಸ್ಪೀಕರ್, ಒಂದು ಸಿಡಿ ಪ್ಲೇಯರ್ ಮತ್ತು ಆಕ್ಸ್ ಇನ್ ಇದೆ. ಅದರಲ್ಲಿ ಯುಎಸ್ ಬಿ ಇನ್ ಪುಟ್ ಇಲ್ಲದ್ದು ಒಂದು ಪ್ರಮುಖ ಕೊರತೆ. ಸ್ಟೀಯರಿಂಗ್ ವೀಲ್ ನಲ್ಲಿಯೇ ವಾಲ್ಯೂಂ ಕಂಟ್ರೊಲ್ ಮಾಡಬಹುದಾಗಿದೆ. ಹಿಂಭಾಗದ ಪ್ರಯಾಣಿಕರಿಗೆ ಇರುವ ಏಸಿ ವೆಂಟ್/ಕಂಟ್ರೊಲ್ ಇಷ್ಟವಾಗುತ್ತದೆ.
ನಾವು ಟಾಪ್ ಎಂಡ್ ಆವೃತ್ತಿ ಡ್ರೈವಿಂಗ್ ಮಾಡಿದ್ದರಿಂದ ಡ್ರೈವಿಂಗ್ ಅನುಭವ ಅತ್ಯುತ್ತಮ. ಸಿಟಿ ರಸ್ತೆಯಲ್ಲೂ ಹೆಚ್ಚು ಬೋರ್ ಹೊಡೆಸಬಹುದು. ಓಹ್.. ನಿಸ್ಸಾನ್ ಸನ್ನಿ ಸಂಪೂರ್ಣ ವಿಮರ್ಶೆ ಓದಿ ಸ್ವಲ್ಪ ಬೋರಾಯಿತೇ? ನಿಸ್ಸಾನ್ ಸನ್ನಿಯಲ್ಲಿ ತುಂಬಾ ಹೊತ್ತು ಸವಾರಿ ಮಾಡಿದರೆ ಕೊಂಚ ಬೋರ್ ಆದೀತು.
ನಿಸ್ಸಾನ್ ಜಾಹೀರಾತು ಸುಳ್ಳಲ್ಲ. ಅದು ಕೇವಲ ಕಾರಲ್ಲ. ಅದು ಕಾ...ರ್! ಒಮ್ಮೆ ಹತ್ತಿರದ ನಿಸ್ಸಾನ್ ಶೋರೂಂಗೆ ಹೋಗಿ ಟೆಸ್ಟ್ ರೈಡ್ ಮಾಡಿ ನೋಡಿ. ನಿಮಗೆ ಇಷ್ಟವಾಗದಿದ್ದರೆ ನಮಗೆ ಹೇಳಿ.


Click it and Unblock the Notifications








