ಸನ್ನಿಗೊಂದು ಸಲಾಂ: ಕಾರಲ್ಲ ಇದು ಕಾ...ರ್!!

ವಿ ಪ್ಲಾಟ್ ಫಾರ್ಮ್ ನಲ್ಲಿ ಬಂದ ಸನ್ನಿ ಕಂಪನಿಯ ಹತ್ತನೇ ತಲೆಮಾರಿನ ಮಾಡೆಲ್. ಇದೇ ವಿ-ಪ್ಲಾಟ್ ಫಾರ್ಮ್ ನಲ್ಲಿ ಮೈಕ್ರಾ ಕಾರನ್ನು ಕಂಪನಿ ಹೊರತಂದಿತ್ತು. ಆದರೆ ಮೈಕ್ರಾಕ್ಕಿಂತ ವಿಭಿನ್ನವಾಗಿ ಹೊಸ ವಿನ್ಯಾಸ ಪರಿಕಲ್ಪನೆಯಲ್ಲಿ ನೂತನ ಸನ್ನಿಯನ್ನು ಅಭಿವೃದ್ಧಿಪಡಿಸಲಾಗಿದೆ.
ನಿಸ್ಸಾನ್ ಕಂಪನಿಯು ದೇಶದ ರಸ್ತೆಗೆ 1.5 ಲೀಟರಿನ ಎಂಜಿನ್ ನ ಸನ್ನಿ ಕಾರನ್ನು ಪರಿಚಯಿಸಿದೆ. ಇದು ಮ್ಯಾನುಯಲ್ ಟ್ರಾನ್ಸ್ ಮಿಷನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತಿದೆ. ಅಮೆರಿಕದಲ್ಲಿ ಇದು 1.6 ಲೀಟರ್ ಎಂಜಿನ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಯಲ್ಲಿ ದೊರಕುತ್ತಿದೆ.
ಭಾರತದಲ್ಲಿ ನಿಸ್ಸಾನ್ ಕಂಪನಿಯು ಚೆನ್ನೈ ಘಟಕದಲ್ಲಿ ಸನ್ನಿ ಕಾರುಗಳನ್ನು ಉತ್ಪಾದಿಸುತ್ತಿದೆ. ಇಲ್ಲಿಂದಲೇ ಕೆಲವು ದೇಶಗಳಿಗೆ ಸನ್ನಿ ರಫ್ತು ಮಾಡುತ್ತಿರುವುದು ವಿಶೇಷ. ಫಸ್ಟ್ ಡ್ರೈವ್ ಮಾಡುವ ಮುನ್ನ ನಿಸ್ಸಾನ್ ಸನ್ನಿ ದರ ಮತ್ತು ಅದೇ ಸೆಗ್ಮೆಂಟಿನ ಬೇರೆ ಕಾರುಗಳ ದರದ ಮೇಲೆ ಹೋಲಿಕೆ ಮಾಡಿ ನೋಡುವುದು ಒಳ್ಳೆಯದು ಅಲ್ಲವೇ. ಮುಂದಿನ ಪುಟಕ್ಕೆ ಸ್ವಾಗತ.


Click it and Unblock the Notifications








