ಸನ್ನಿ ದರ: ಬೇರೆ ಕಾರುಗಳೊಂದಿಗೆ ಹೋಲಿಸಿ ನೋಡಿ

ಸನ್ನಿ ಮಧ್ಯಮ ಆವೃತ್ತಿ ದರ ಸುಮಾರು 6.68 ಲಕ್ಷ ರು. ಇದೆ. ಈ ಕಾರಲ್ಲಿ ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಏರ್ ಬ್ಯಾಗ್ ಇವೆ. (ಟೊಯೊಟಾ ಎಟಿಯೋಸ್ ಮಧ್ಯಮ ಆವೃತ್ತಿ ದರ ಸುಮಾರು 5.99 ಲಕ್ಷ ರುಪಾಯಿ ಇದೆ)
ನಿಸ್ಸಾನ್ ಸನ್ನಿ ಟಾಪ್ ಎಂಡ್ ಆವೃತ್ತಿ ದರ 7.68 ಲಕ್ಷ ರುಪಾಯಿ ಇದೆ. ಇದೇ ಕಾರನ್ನು ನಾವು ಫಸ್ಟ್ ಡ್ರೈವ್ ಮಾಡಿದ್ದು. (ಟೊಯೊಟಾ ಎಟಿಯೋಸ್ ಟಾಪ್ ಎಂಡ್ ಆವೃತ್ತಿ ದರ ಸುಮಾರು 6.51 ಲಕ್ಷ ರು, ಡಿಜೈರ್ ದರ 6.40 ಲಕ್ಷ ರು, ಮಾಂಝಾ ದರ 6.83 ಲಕ್ಷ ರು. ಎಸ್ಎಕ್ಸ್4 ದರ 8 ಲಕ್ಷ ರು. ಆಸುಪಾಸಿನಲ್ಲಿದೆ. ವೆಂಟೊ ಟಾಪ್ ಎಂಡ್ ದರ 8.23 ಲಕ್ಷ ರು. ಮತ್ತು ಫಿಯೆಟ್ ಕ್ಲಾಸಿಕ್ ಟಾಪ್ ಎಂಡ್ ದರ ಸುಮಾರು 7.29 ಲಕ್ಷ ರುಪಾಯಿ)
ನಿಸ್ಸಾನ್ ಸನ್ನಿ ಪ್ರತಿಸ್ಪರ್ಧಿ ಕಾರುಗಳ ದರದೊಂದಿಗೆ ಹೋಲಿಕೆ ಮಾಡಿದರೆ ಸನ್ನಿ ದರ ಹೆಚ್ಚು ಸೆಳೆಯುತ್ತದೆ.


Click it and Unblock the Notifications








