ಪೆಟ್ರೋಲ್ ಬಿಟ್ಟು ಡೀಸೆಲ್ ಕಾರಿಗೆ ಶರಣೆಂದ ರೆನಾಲ್ಟ್

"ಮುಂದಿನ ವರ್ಷ ಹೊರತರುವ ಎಲ್ಲಾ ಕಾರುಗಳು ಡೀಸೆಲ್ ಆವೃತ್ತಿಯಾಗಲಿದೆ. ಕಂಪನಿಯು ಕೇವಲ ಡೀಸೆಲ್ ಮಂತ್ರದ ಮೂಲಕ ದೇಶದ ವಾಹನ ಮಾರುಕಟ್ಟೆಯಲ್ಲಿ ಪ್ರಗತಿ ಕಾಣಲು ನಿರ್ಧರಿಸಿದೆ" ಎಂದು ರೆನಾಲ್ಟ್ ಇಂಡಿಯಾದ ಉಪಾಧ್ಯಕ್ಷರು ಹೇಳಿದ್ದಾರೆ.
ದೇಶದ ಡೀಸೆಲ್ ಕಾರು ಮಾರುಕಟ್ಟೆಯು ಕಳೆದ ಆರ್ಥಿಕ ವರ್ಷದಲ್ಲಿ ಶೇಕಡ 27ರಷ್ಟಿತ್ತು. ಇದು ಈ ಆರ್ಥಿಕ ವರ್ಷದಲ್ಲಿ ಶೇಕಡ 33ರಷ್ಟು ಏರಿಕೆ ಕಾಣುವ ನಿರೀಕ್ಷೆಯನ್ನು ದೇಶದ ವಾಹನ ತಯಾರಿಕರ ಒಕ್ಕೂಟ ವ್ಯಕ್ತಪಡಿಸಿತ್ತು.
ಬಡ್ಡಿದರ ಹೆಚ್ಚಳ ಮತ್ತು ಪೆಟ್ರೋಲ್ ದರ ಏರಿಕೆಯಿಂದ ಗ್ರಾಹಕರು ಡೀಸೆಲ್ ಕಾರುಗಳತ್ತ ಮುಖಮಾಡುತ್ತಿದ್ದಾರೆ. ಹೀಗಾಗಿ ಪೆಟ್ರೋಲ್ ಕಾರುಗಳಿಗೆ ಬೇಡಿಕೆಯು ಕಡಿಮೆಯಾಗುತ್ತಿದೆ. ಡೀಸೆಲ್ ಕಾರುಗಳ ಬೇಡಿಕೆಗೆ ಸಮರ್ಥವಾಗಿ ಸ್ಪಂಧಿಸಲು ಕಾರು ಕಂಪನಿಗಳು ವಿಫಲವಾಗುತ್ತಿವೆ.
ರೆನಾಲ್ಟ್ ಕಂಪನಿಯು ಕೆಲವು ದಿನದ ಹಿಂದೆ ಫ್ಲೂಯೆನ್ಸ್ ಡೀಸೆಲ್ ಆವೃತ್ತಿ ಹೊರತಂದಿತ್ತು. ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ರೆನಾಲ್ಟ್ ಪಲ್ಸ್ ಪರಿಚಯಿಸಲು ನಿರ್ಧರಿಸಿದೆ. ಮುಂದಿನ ವರ್ಷದ ಮಧ್ಯಾವದಿ ವೇಳೆಗೆ ರೆನಾಲ್ಟ್ ಡಸ್ಟರ್ ರಸ್ತೆಗಿಳಿಯಲಿದೆ. ಮುಂದಿನ ವರ್ಷದ ಕೊನೆಗೆ ರೆನಾಲ್ಟ್ ಸೆಡಾನ್ ಕಾರೊಂದು ರಸ್ತೆಗಿಳಿಯುವ ನಿರೀಕ್ಷೆಯಿದೆ.


Click it and Unblock the Notifications








