ಟಾಟಾ ಡಿಸ್ಕೌಂಟ್: ಕಡಿಮೆಯಾಗಿದೆ ಡೌನ್ ಪೇಮೆಂಟು

ಟಾಟಾ ಇಂಡಿಕಾ ಮಾಂಝಾ: ಮಾಂಝಾ ಕಾರಿಗೆ ಕಂಪನಿಯು ಸುಮಾರು 20 ಸಾವಿರ ರು. ಡಿಸ್ಕೌಂಟ್ ಮತ್ತು ಎಕ್ಸ್ ಚೇಂಜ್ ಬೋನಸ್ 40 ಸಾವಿರ ರು. ನೀಡಿದೆ. ಈ ಕಾರು ಖರೀದಿಗೆ ಕೇವಲ 50 ಸಾವಿರ ರು. ಡೌನ್ ಪೇಮೆಂಟ್ ಪಾವತಿಸಿದರೆ ಸಾಕು.
ಟಾಟಾ ಇಂಡಿಗೊ ಇಸಿಎಸ್ ಕಾರಿಗೂ ಕಂಪನಿಯು 10 ಸಾವಿರ ರು. ಡಿಸ್ಕೌಂಟ್ ಪ್ರಕಟಿಸಿದೆ. ಜೊತೆಗೆ ಎಕ್ಸ್ ಚೇಂಜ್ ಬೋನಸ್ 40 ಸಾವಿರ ರು. ನೀಡಿದೆ. ಈ ಕಾರಿನ ಕನಿಷ್ಠ ಡೌನ್ ಪೇಮೆಂಟ್ 35 ಸಾವಿರ ರು. ಆಗಿದೆ.
ಟಾಟಾ ಆರಿಯಾ: ಟಾಟಾ ಆರಿಯಾ ಕಾರಿಗೆ ಸುಮಾರು 1.75 ಲಕ್ಷ ರು.ವರೆಗೆ ಕಂಪನಿ ಡಿಸ್ಕೌಂಟ್ ನೀಡುತ್ತದಂತೆ! ಇದರೊಂದಿಗೆ 40 ಸಾವಿರ ರು. ಎಕ್ಸ್ ಚೇಂಜ್ ಬೋನಸ್ ಕೂಡ ನೀಡಿದೆ. ಈ ಕಾರಿನ ಕನಿಷ್ಠ ಡೌನ್ ಪೇಮೆಂಟ್ 1.99 ಲಕ್ಷ ರುಪಾಯಿ. ಟಾಟಾ ಆರಿಯಾ ಕ್ರಾಸೊವರ್ ಆವೃತ್ತಿಗೆ ಕಂಪನಿಯು 2 ಲಕ್ಷ ಡಿಸ್ಕೌಂಟ್ ನೀಡಿದೆ.
ಟಾಟಾ ಗ್ರಾಂಡೆ: ಟಾಟಾ ಮೋಟರ್ಸ್ ಕಂಪನಿಯು ಗ್ರಾಂಡೆ ಡಿಕೊರ್ ಕಾರಿಗೆ ಸುಮಾರು 34 ಸಾವಿರ ರು. ಡಿಸ್ಕೌಂಟ್ ಮತ್ತು 40 ಸಾವಿರ ರು. ವಿನಿಮಯ ಬೋನಸ್ ನೀಡುತ್ತಿದೆ. ಈ ಕಾರಿನ ಖರೀದಿಗೆ ಡೌನ್ ಪೇಮೆಂಟ್ ಕೇವಲ 85 ಸಾವಿರ ರು. ಆಗಿದೆ.
ಟಾಟಾ ವೆಂಚೂರು ಎಂಪಿವಿ: ಟಾಟಾ ವೆಂಚೂರು ಎಂಪಿವಿ ಕಾರಿಗೆ ಕಂಪನಿಯು 25,500 ರು. ಡಿಸ್ಕೌಂಟ್ ಮತ್ತು 40 ಸಾವಿರ ಎಕ್ಸ್ ಚೇಂಜ್ ಬೋನಸ್ ಪ್ರಕಟಿಸಿದೆ. ಈ ಎಂಪಿವಿ ಖರೀದಿಗೆ ಕೇವಲ 50 ಸಾವಿರ ರು. ಡೌನ್ ಪೇಮೆಂಟ್ ನೀಡಿದರೆ ಸಾಕು.
ಟಾಟಾ ಸಫಾರಿ ಡಿಕೊರ್ ಎಸ್ ಯುವಿ: ಈ ಕಾರಿಗೆ ಸುಮಾರು 34 ಸಾವಿರ ರು. ಡಿಸ್ಕೌಂಟ್ ಮತ್ತು ಸುಮಾರು 40 ಸಾವಿರ ರು.ನಷ್ಟು ಎಕ್ಸ್ ಚೇಂಜ್ ಬೋನಸ್ ನೀಡುತ್ತಿದೆ.
ವಿ.ಸೂ: ಈ ಎಲ್ಲಾ ಡಿಸ್ಕೌಂಟ್ ಮತ್ತು ಎಕ್ಸ್ ಚೇಂಜ್ ಬೋನಸ್ ಗಳು ಡೀಲರುಗಳಿಂದ ಡೀಲರುಗಳಿಗೆ ಕೊಂಚ ವ್ಯತ್ಯಾಸವಿರಬಹುದು.


Click it and Unblock the Notifications








