ಟಾಟಾ ಕಾರುಗಳಿಗೆ ಡಿಸೆಂಬರ್ ಡಿಸ್ಕೌಂಟ್ ಧಮಾಕ!

Tata Motors 2011 Year End Discounts
ಟಾಟಾ ಮೋಟರ್ಸ್ ಕಂಪನಿಯು ತನ್ನ ವಿವಿಧ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್ ಪ್ರಕಟಿಸಿದೆ. ಈಗಾಗಲೇ ಕೆಲವು ಕಾರು ಕಂಪನಿಗಳು ದರ ಹೆಚ್ಚಳ ಪ್ರಕಟಿಸುತ್ತಿವೆ. ಆದರೆ ಟಾಟಾ ಮೋಟರ್ಸ್ ದರ ವಿನಾಯಿತಿ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿದೆ.

ನ್ಯಾನೊ ಇನ್ನೂ ಅಗ್ಗ: ಟಾಟಾ ಮೋಟರ್ಸ್ ಇತ್ತೀಚೆಗೆ ನೂತನ ನ್ಯಾನೊ ಕಾರು ಪರಿಚಯಿಸಿದೆ. ಈಗ ನ್ಯಾನೊ ಕಾರುಗಳಿಗೆ ಕಂಪನಿಯು ಭರ್ಜರಿ ದರ ವಿನಾಯಿತಿ ಪ್ರಕಟಿಸಿದೆ. ಹಳೆಯ ನ್ಯಾನೊ ಸ್ಟಾಂಡರ್ಡ್ ಆವೃತ್ತಿಗೆ 25 ಸಾವಿರ ರುಪಾಯಿ ದರ ವಿನಾಯಿತಿ ಪ್ರಕಟಿಸಿದೆ.

ಹಳೆಯ ಆವೃತ್ತಿ ನ್ಯಾನೊ ಸಿಎಕ್ಸ್ ಮತ್ತು ಎಲ್ಎಕ್ಸ್ ಕಾರುಗಳಿಗೆ ಕಂಪನಿಯು ಸುಮಾರು 30 ಸಾವಿರ ರು.ನಷ್ಟು ಡಿಸ್ಕೌಂಟ್ ಮಾಡಿದೆ. ಕೇವಲ ಡಿಸ್ಕೌಂಟ್ ಮಾತ್ರವಲ್ಲದೇ ಸುಮಾರು 5 ಸಾವಿರ ರುಪಾಯಿಯಷ್ಟು ಎಕ್ಸ್ ಚೇಂಜ್ ಬೋನಸ್ ಕೂಡ ನೀಡುತ್ತದೆಯಂತೆ.

ಒಟ್ಟಾರೆ ಕಂಪನಿಯು ಹಳೆಯ ನ್ಯಾನೊ ಕಾರುಗಳಿಗೆ ಸುಮಾರು 35 ಸಾವಿರ ರು.ವರೆಗೆ ದರ ವಿನಾಯಿತಿ ಮಾಡಲಿದೆ. ನೂತನ ಸ್ಟಾಂಡರ್ಡ್ ನ್ಯಾನೊ ಕಾರುಗಳಿಗೆ ಕಂಪನಿಯು ಸುಮಾರು 12 ಸಾವಿರ ರು. ದರ ವಿನಾಯಿತಿ ಮತ್ತು 5 ಸಾವಿರ ರು. ಎಕ್ಸ್ ಚೇಂಜ್ ಬೋನಸ್ 5 ಸಾವಿರ ರು. ನೀಡಲಿದೆ.

ನೂತನ ನ್ಯಾನೊ ಸಿಎಕ್ಸ್ ಮತ್ತು ಎಲ್ಎಕ್ಸ್ ಆವೃತ್ತಿಗಳಿಗೆ ಸುಮಾರು 15 ಸಾವಿರ ರು. ಡಿಸ್ಕೌಂಟ್ ಮತ್ತು 5 ಸಾವಿರ ರು ಎಕ್ಸ್ ಚೇಂಜ್ ಬೋನಸ್ ನೀಡಲಿದೆ. ಟಾಟಾ ನ್ಯಾನೊ ಡೌನ್ ಪೇಮೆಂಟ್ ಕೇವಲ 15 ಸಾವಿರ ರುಪಾಯಿ ಆಗಿದೆ.

ಉಳಿದ ಕಾರುಗಳಿಗೆ ಎಷ್ಟು ಡಿಸ್ಕೌಂಟ್, ಡೌನ್ ಪೇಮೆಂಟ್ ಉಂಟು? ಮುಂದಿನ ಪುಟ ನೋಡಿರಿ..

More from DriveSpark

Article Published On: Tuesday, December 13, 2011, 13:00 [IST]
English summary
Tata Motors India December 2011 Discounts Offers. Tata Nano 2012, Tata Indigo Manza, New Tata Indica Vista, Tata Indigo eCS, Tata Aria Crossover, Tata Grand Car Discounts, exchange bonus and down-payment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+