ಹದಿನೈದು ಲಕ್ಷ ರು.ಗೆ ಹೊಸ ಟಾಟಾ ಬಸ್ ಖರೀದಿಸಿ

Tata Motors launches Tata Divo Luxury Coach and Tata Starbus Ultra
ಟಾಟಾ ಮೋಟರ್ಸ್ ಎರಡು ಹೊಸ ಬಸ್ ಆವೃತ್ತಿಗಳನ್ನು ಪರಿಚಯಿಸಿದೆ. ಡಿವೊ ಮತ್ತು ಸ್ಟಾರ್ ಬಸ್ ಅಲ್ಟ್ರಾ ಹೆಸರಿನ ಈ ಬಸ್ ಗಳೆರಡರ ದರ ಕ್ರಮವಾಗಿ 66 ಲಕ್ಷ ರು. ಮತ್ತು 15 ಲಕ್ಷ ರು. ಆಗಿದೆ. ಇದು ದೆಹಲಿ ಎಕ್ಸ್ ಶೋರೂಂ ದರ.

ನಗರದ ಜನರ ಸಾರಿಗೆ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಎರಡು ಹೊಸ ಬಸ್ ಹೊರತರಲಾಗಿದೆ ಎಂದು ಕಂಪನಿ ಹೇಳಿದೆ "ಟಾಟಾ ಡಿವೊ ಮತ್ತು ಸ್ಟಾರ್ ಬಸ್ ಅಲ್ಟ್ರೋ ಸಾರ್ವಜನಿಕ ಸಾರಿಗೆ ಅವಶ್ಯಕತೆಗಳಿಗೆ ಪೂರಕವಾಗಿದೆ" ಎಂದು ಕಂಪನಿಯ ವಾಣಿಜ್ಯ ವಾಹನ ವಿಭಾಗದ ಅಧ್ಯಕ್ಷರಾದ ರವಿ ಪಿಸ್ತೊರೊಡಿ ಹೇಳಿದ್ದಾರೆ.

ಈ ಬಸ್ ಗಳಲ್ಲಿ ಡಿವೊ ಐಷಾರಾಮಿ ಏರ್ ಕಂಡಿಷನ್ ಅಂತರ್ ನಗರ ಪ್ರಯಾಣಿಕ ಸಾರಿಗೆ ಬಸ್ಸಾಗಿದೆ. ಈ ಬಸ್ ಪ್ರವಾಸಿ ಅವಶ್ಯಕತೆಗಳಿಗೆ ಸೂಕ್ತವಾಗಿದೆ. ಸ್ಪೈನ್ ಅಂಗಸಂಸ್ಥೆ ಹಿಸ್ಪಾನೊ ಕೊರೊಸೆರಾ ಈ ಬಸ್ ವಿನ್ಯಾಸ ಬಿಡಿಭಾಗ ನೀಡಿದೆ.

"ಐಷಾರಾಮಿ ಡಿವೊ ಬಸ್ಸಿನ ಇಂಟಿರಿಯರ್ ಅತ್ಯುತ್ತಮ ಗುಣಮಟ್ಟದಾಗಿದ್ದು ಸೆಮಿ ಸ್ಲೀಪರ್, ಸೀಟ್ ಕಾನ್ಫಿಗರೇಷನ್, ವಿಶಾಲ ಸೀಟುಗಳು, ಕೈ ಮತ್ತು ತಲೆಗೆ ಆರಾಮದಾಯಕ ಮೆತ್ತೆಗಳಿವೆ" ಎಂದು ಪಿಸ್ತೊರೊಡಿ ಹೇಳಿದ್ದಾರೆ.

ಈ ಬಸ್ಸಿನಲ್ಲಿ ಎಂಟರ್ ಟೈನ್ ಮೆಂಟ್ ಸಿಸ್ಟಮ್, ರೆಫ್ರಿಜರೇಟರ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಮುಂತಾದ ಸ್ಪೋರ್ಟಿ ಫೀಚರುಗಳಿವೆ. ಡಿವೊ ಬಸ್ 285 ಎಚ್ ಪಿ ಕ್ಯೂಮಿನ್ಸ್ ಎಂಜಿನ್ ಮತ್ತು 6 ಸ್ಪೀಡಿನ ಓವರ್ ಡ್ರೈವ್ ಗೇರ್ ಬಾಕ್ಸ್ ಹೊಂದಿದೆ.

ಸ್ಟಾರ್ ಬಸ್ ಆಲ್ಟ್ರಾ ಅಂತರ್ ನಗರ ಸಾರಿಗೆ ಅವಶ್ಯಕತೆಗೆ ಸೂಕ್ತವಾಗಿದೆ. ಈ ಬಸ್ಸು ಐಷಾರಾಮಿ, ಸ್ಟಾಂಡರ್ಡ್, ಸ್ಕೂಲ್ ಮತ್ತು ಡಿಲಕ್ಸ್ ಆವೃತ್ತಿಗಳಲ್ಲಿ ದೊರಕುತ್ತಿದೆ. "22ರಿಂದ 46 ಸೀಟುಗಳ ವಿವಿಧ ಆಯ್ಕೆಗಳಲ್ಲಿ ಈ ಸ್ಟಾರ್ ಬಸ್ ಆವೃತ್ತಿಗಳು ದೊರಕುತ್ತವೆ" ಎಂದು ಕಂಪನಿ ಹೇಳಿದೆ. ಸ್ಟಾರ್ ಬಸ್ 486 ಎಂಜಿನ್,6 ಸ್ಪೀಡ್ ಓವರ್ ಡ್ರೈವ್ ಗೇರ್ ಬಾಕ್ಸ್ ಮತ್ತು ಕೆಬಲ್ ಶಿಫ್ಟ್ ಮೆಕಾನಿಸಂ ಹೊಂದಿದೆ.

More from DriveSpark

Article Published On: Wednesday, December 21, 2011, 10:14 [IST]
English summary
Tata Motors launched the Tata Divo, a luxurious long distance inter-city travel bus and the Tata Starbus Ultra, a modern and practical offering for commuting within the city. Divo and Starbus Ultra bus priced, at Rs.66 lakh and Rs.15 lakh respectively.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+