ನವೆಂಬರ್: ಟಾಟಾ ಮಾರಾಟ ಶೇ. 41ರಷ್ಟು ಹೆಚ್ಚಳ

Tata Motors November 2011 Sales
ನವೆಂಬರ್ ತಿಂಗಳಲ್ಲಿ ಟಾಟಾ ಮೋಟರ್ಸ್ ಮಾರಾಟ ಶೇಕಡ 41ರಷ್ಟು ಏರಿಕೆ ಕಂಡಿದೆ. ಕಂಪನಿಯು ಕಳೆದ ತಿಂಗಳು ದೇಶಿ ಮಾರುಕಟ್ಟೆಯಲ್ಲಿ 44,736 ಯುನಿಟ್ ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ನವೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡ 27.53ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಕಂಪನಿಯು ದೇಶದಲ್ಲಿ 35,079 ವಾಹನ ಮಾರಾಟ ಮಾಡಿತ್ತು.

ನವೆಂಬರ್ 2011ರಲ್ಲಿ ಟಾಟಾ ಮೋಟರ್ಸ್ ಒಟ್ಟಾರೆಯಾಗಿ 76,737 ಯುನಿಟ್ ವಾಹನ ಮಾರಾಟ ಮಾಡಿದ್ದು ಕಳೆದ ವರ್ಷದ ಇದೇ ಅವಧಿಗಿಂತ ಶೇಕಡ 40.64ರಷ್ಟು ಹೆಚ್ಚಾಗಿದೆ. ಕಂಪನಿಯು ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಒಟ್ಟಾರೆ 54,622 ಯೂನಿಟ್ ವಾಹನ ಮಾರಾಟ ಮಾಡಿತ್ತು.

ಕಳೆದ ತಿಂಗಳು ಕಂಪನಿಯು ದೇಶದಲ್ಲಿ 27,237 ಪ್ರಯಾಣಿಕ ಕಾರು ಮಾರಾಟ ಮಾಡಿದ್ದು, ಶೇಕಡ 80ರಷ್ಟು ಏರಿಕೆ ಕಂಡಿತ್ತು. ಕಳೆದ ವರ್ಷ ನವೆಂಬರ್ ನಲ್ಲಿ ಇದು 15,340 ಯುನಿಟ್ ಆಗಿತ್ತು ಎಂದು ಟಾಟಾ ಮೋಟರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ನ್ಯಾನೊ ಮಾರಾಟ: ಕಳೆದ ತಿಂಗಳು ಕಂಪನಿಯು 6,401 ಯೂನಿಟ್ ನ್ಯಾನೊ ಕಾರು ಮಾರಾಟ ಮಾಡಿದೆ. ಕಳೆದ ವರ್ಷದ ನವೆಂಬರ್ ತಿಂಗಳ 509 ನ್ಯಾನೊ ಮಾರಾಟಕ್ಕೆ ಹೋಲಿಸಿದರೆ ಹನ್ನೆರಡು ಪಟ್ಟಿಗಿಂತಲೂ ಹೆಚ್ಚಾಗಿದೆ.

ಟಾಟಾ ಕಂಪನಿಯು ಕಳೆದ ತಿಂಗಳು 10,926 ಯುನಿಟ್ ಇಂಡಿಕಾ ಕಾರು ಮಾರಾಟ ಮಾಡಿದೆ. ಇದೇ ಸಮಯದಲ್ಲಿ 6,213 ಇಂಡಿಗೊ ಕಾರು ಮಾರಾಟ ಮಾಡಲಾಗಿದೆ. ಸುಮೊ, ಸಫಾರಿ ಮತ್ತು ಆರಿಯಾ ಮಾರಾಟ 4,197 ಯುನಿಟ್ ಗೆ ತಲುಪಿದೆ.

More from DriveSpark

Article Published On: Friday, December 2, 2011, 16:39 [IST]
English summary
The month of November has turned out to be good one for Tata Motors thanks to the new 2012 Tata Nano. The Nano which was a slow seller so far ha received 6409 sales just in November marking a 12 times increase considering Tata Motors has sold 509 Nanos in November 2010.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+