ಚಿನ್ನ, ಬೆಳ್ಳಿ, ವಜ್ರ, ಮುತ್ತು ಹವಳದ ದುಬಾರಿ ಕಾರಿದು!

ಲಂಬೊರ್ಗಿನಿ ಆಟಿಕೆ ಕಾರನ್ನು ಜರ್ಮನಿಯ ರಾಬರ್ಟ್ ಗುಲ್ಪೆನ್ ನಿರ್ಮಿಸಿದ್ದಾರೆ. ಇದಕ್ಕೆ ಪರಿಶುದ್ಧ 14 ಕ್ಯಾರೆಟ್ ಚಿನ್ನ, ಪ್ಲಾಟಿನಂ ಮತ್ತು ಕಾರ್ಬನ್ ಬಳಸಲಾಗಿದೆ. ಈ ಕಾರನ್ನು ಶೀಘ್ರದಲ್ಲಿ ಹರಾಜು ಮಾಡಲಿದ್ದಾರೆ.
ಇಷ್ಟೇ ಅಲ್ಲ. ಈ ಕಾರಿನ ಸೀಟುಗಳಲ್ಲಿ, ಹೆಡ್ ಲೈಟ್ಸ್ ಗಳಲ್ಲಿ, ಸ್ಟೇರಿಂಗ್ ವೀಲ್ ಗಳಲ್ಲಿ ವಜ್ರ ಪೋಣಿಸಲಾಗಿದೆ. ಇದು ಲಂಬೋರ್ಗಿನಿ ಅವೆಂಟಡೊರ್ ಕಾರಿನ ಪಡಿಯಚ್ಚು ಎಂದು ಗುಲ್ಪೆನ್ ಹೇಳಿದ್ದಾರೆ. ಇದನ್ನು ನಿರ್ಮಿಸಲು ಸುಮಾರು 500 ಗಂಟೆ ಬೇಕಾಗಿತ್ತಂತೆ!
ಈ ಕಾರಿನ ಬಾಡಿಗೆ ಕಾರ್ಬನ್ ಪೈಬರ್ ಮತ್ತು ಚಿನ್ನದ ಲೇಪನ ಮಾಡಲಾಗಿದೆ. ಟೈರ್ ರಿಮ್ ಗೂ ಸಾಲಿಡ್ ಚಿನ್ನ ಬಳಸಲಾಗಿದೆ ಮತ್ತು ಕಾರಿನ ಪೂರ್ತಿ ಇಂಟಿರಿಯರ್ ವಿನ್ಯಾಸಕ್ಕೆ ಪ್ಲಾಟಿನಂ ಲೋಹ ಬಳಸಲಾಗಿದೆಯಂತೆ.
"ಅವೆಂಟಡೊರ್ ಎಲ್ಪಿ 700-4 ಎಂದು ಇದಕ್ಕೆ ಹೆಸರಿಡಲಾಗಿದೆ. ಅದಕ್ಕಾಗಿ ಪ್ರತಿಸೀಟಿಗೂ 700 ಬೆಳೆಬಾಳುವ ಹವಳ ಮುತ್ತುಗಳನ್ನು ಜೋಡಿಸಲಾಗಿದೆ. ಅಂದರೆ ಎರಡು ಸೀಟಿಗೆ 1,400 ಬೆಳೆಬಾಳುವ ಕಲ್ಲುಗಳನ್ನು ಪೋಣಿಸಲಾಗಿದೆ" ಎಂದು ಡೈಲಿ ಮೈಲ್ ವರದಿ ಮಾಡಿದೆ. ಈ ಕಾರಿನ ದರ ಸುಮಾರು 30 ಲಕ್ಷ ಪೌಂಡ್ ಅಂತೆ. ಅಂದ್ರೆ ಭಾರತದ ಸುಮಾರು 23 ಕೋಟಿ ರುಪಾಯಿ.


Click it and Unblock the Notifications








