ಮಹಾಶತಕ ವೀರ ಸಚಿನ್ ಪ್ರಯಾಣಕ್ಕೆ ಶುಭಕೋರುವ

Posted By:
ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಜೀವನದಲ್ಲಿ ಶುಕ್ರವಾರ ಶತಕ ಸಂಭ್ರಮದ ದಿನವಾಗಿದೆ. ಬಾಂಗ್ಲಾದೇಶ ನಡೆದ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಸಚಿನ್, ತಮ್ಮ ವೃತ್ತಿ ಜೀವನದಲ್ಲಿ 100ನೇ ಶತಕದ ದಾಖಲೆ ಬರೆದಿದ್ದಾರೆ. ಈ ನೆಪದಲ್ಲಿ ಅವರ ಕಾರು ಜಗತ್ತಿನ ಸುತ್ತ ಕನ್ನಡ ಡ್ರೈವ್ ಸ್ಪಾರ್ಕ್ ಒಂದು ನೋಟ.

ಸಚಿನ್ ಗೆ ಫೆರಾರಿ ಕಾರು ಇಷ್ಟ. ಫೆರಾರಿ ಮಾರಾಟ ಮಾಡಿದ್ಮೆಲೆ ಅವರು ಖರೀದಿಸಿದ್ದು ನಿಸ್ಸಾನ್ ಸ್ಪೋರ್ಟ್ ಕಾರು. ಫೆರಾರಿ ಕಾರಲ್ಲದೇ ಸಚಿನ್ ಇಷ್ಟಪಡುವ ಕಾರು ಕಂಪನಿಗಳೆಂದರೆ ಮರ್ಸಿಡಿಸ್, ಪೊರ್ಷ್, ಬಿಎಂಡಬ್ಲ್ಯು. ಈ ಕಂಪನಿಯ ಪ್ರಮುಖ ಮಾಡೆಲ್ ಕಾರುಗಳು ಅವರಲ್ಲಿದೆ. ಅದರಲ್ಲಿ ಮರ್ಸಿಡಿಸ್ ಕಂಪನಿಯ ಎಸ್ಎಲ್ಎಸ್ ಎಎಂಜಿ ಕಾರು ಅವರಿಗಿಷ್ಟ. ಅದರೊಂದಿಗೆ ಮರ್ಸಿಡಿಸ್ ಸಿ230 ಕಾರಲ್ಲೂ ಆಗಾಗ ಸವಾರಿ ಹೊರಡುತ್ತಾರೆ. ಲ್ಯಾಂಡ್ ಕ್ರೂಷರ್ ಕೂಡ ಅವರ ನೆಚ್ಚಿನ ಕಾರು.

ಸಚಿನ್ ತೆಂಡೂಲ್ಕರ್ ಗೆ ವೇಗದ ಸವಾರಿ ಥ್ರಿಲ್ ಅನುಭವ ನೀಡುತ್ತದೆ ನಿಜ. ಹಾಗಂತ ಅವರು ರಾಷ್ ಡ್ರೈವರಲ್ಲ. ವೇಗದ ಸವಾರಿ ಅವರಿಗೆ ಮನೋಲ್ಲಾಸ ನೀಡುತ್ತದೆ. ಅವರೇ ಹೇಳುವಂತೆ "ವೇಗದ ಸವಾರಿ ಎಂಜಾಯೆಬಲ್". ಕಾರು ಡ್ರೈವಿಂಗ್ ನಲ್ಲಿ ತಕ್ಷಣ ಸೊನ್ನೆಯಿಂದ 80kmph ವೇಗ ಪಡೆದುಕೊಳ್ಳುವುದೆಂದರೆ ಇಷ್ಟವೆಂದು ಒಮ್ಮೆ ಹೇಳಿದ್ದರು.

ಸಚಿನ್ ತೆಂಡೂಲ್ಕರ್ ಅವರ ಮೊದಲ ಕಾರು ಯಾವುದು? ಅವರು ಆರಂಭದಲ್ಲಿ ಬಳಸುತ್ತಿದ್ದದ್ದು ಮಾರುತಿ 800. ಮನೆಯ ಹತ್ತಿರವಿರುವ ಸಿನಿಮಾ ಥಿಯೇಟರ್ ಗೆ ಹೋಗಲು ಇದೇ ಕಾರನ್ನು ಬಳಸುತ್ತಿದ್ದರಂತೆ. ಇದೀಗ ಅವರ ಗ್ಯಾರೆಜ್ ನಲ್ಲಿ ಸಾಕಷ್ಟು ಲಕ್ಷುರಿ ಕಾರುಗಳು ಸಾಲಾಗಿವೆ.

ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಶತಕದಲ್ಲಿ ಶತಕ ಪಡೆದು ವೇಗ ಹೆಚ್ಚಿಸಿಕೊಂಡ ಸಚಿನ್ ಕಂಡು ಇದೆಲ್ಲ ನೆನಪಾಯಿತು.

ಭಾರತದ ಕ್ರಿಕೆಟಿಗರಲ್ಲಿ ಎಷ್ಟೆಷ್ಟು ಕಾರುಗಳಿವೆ ಗೊತ್ತಾ?

English summary
Indian Master Blaster Sachin Tendulkar has completed the centuries of centuries by scoring his 49th ODI Century. Here is a look at all his favorite cars. Sachin owns several cars including a BMW, Mercedes, Porsche and Ferrari. He recently bought himself a Nissan sports car after selling his Ferrari.
Story first published: Friday, March 16, 2012, 16:57 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark