2012 ಫಿಯೆಟ್ ಲೀನಿಯಾ ಡೀಸೆಲ್: ಸಂಪೂರ್ಣ ವಿಮರ್ಶೆ

ಫಿಯೆಟ್ ಲೀನಿಯಾ 1.4 ಲೀಟರ್ ಎಲ್ ಫೈರ್ ಪೆಟ್ರೋಲ್ ಮತ್ತು 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಈ ವರ್ಷ ರಸ್ತೆಗಿಳಿದಿದೆ. ನಾವು ನಂದಿಬೆಟ್ಟಕ್ಕೆ ಪ್ರಯಾಣಿಸಿದ್ದು 1.3 ಲೀಟರಿನ ಮಲ್ಟಜೆಟ್ ಡೀಸೆಲ್ ಎಮೋಷನ್ ಆವೃತ್ತಿ. ಈ ಕಾರಿನ ಎಂಜಿನ್, ಪವರ್ ಇತ್ಯಾದಿಗಳನ್ನು ತಿಳಿದುಕೊಳ್ಳೋಣ.

ಫಿಯೆಟ್ ಕಂಪನಿಯ ನೂತನ ಲೀನಿಯಾ ಡೀಸೆಲ್ ಮೈಲೇಜ್ ಸುಮಾರು 20.4 ಕಿ.ಮೀ. ಆದರೆ ಟರ್ಬೊ ಲಾಗ್ ಇರುವುದರಿಂದ ಕಾರಿನ ಪವರ್ ಸ್ವಲ್ಪ ಹೆಚ್ಚಾಗಿದೆ. ಸೆಕೆಂಡ್ ಮತ್ತು ಥರ್ಡ್ ಗೇರ್ ನಲ್ಲಿ ಪ್ರಯಾಣಿಸುವಾಗ ಟರ್ಬೊ ಲ್ಯಾಗ್ ಶಕ್ತಿಯ ಅನುಭವವಾಗುತ್ತದೆ.

2012 ಫಿಯೆಟ್ ಲೀನಿಯಾ ಟರ್ಬೊಜೆಟ್ ಕಾರು 5 ಸ್ಪೀಡಿನ ಮ್ಯಾನುಯಲ್ ಗೇರ್ ಹೊಂದಿದೆ. 4ನೇ ಮತ್ತು 5ನೇ ಗೇರಿನಲ್ಲಿ ಡ್ರೈವಿಂಗ್ ಮಾಡುವುದು ಅತ್ಯುತ್ತಮ ಅನುಭವ ನೀಡುತ್ತದೆ. ಫಿಯೆಟ್ ಲೀನಿಯಾದಲ್ಲಿ ಇಷ್ಟವಾಗುವ ವಿಷ್ಯ ಹ್ಯಾಂಡ್ಲಿಂಗ್. ಬೆರಳತುದಿಯಲ್ಲಿ ಇದರ ಸ್ಟೀಯರಿಂಗ್ ವೀಲ್ ನಿರ್ವಹಣೆ ಮಾಡಬಹುದು. ಸಿಟಿ ರಸ್ತೆ ಮತ್ತು ಹೆದ್ದಾರಿಯೆರಡರಲ್ಲೂ ಹ್ಯಾಂಡ್ಲಿಂಗ್ ಸುಲಭ.

ಹೊಸ ಫಿಯೆಟ್ ಲೀನಿಯಾ ಕಾರಿನಲ್ಲಿ ಸಾಕಷ್ಟು ಹೊಚ್ಚಹೊಸ ಫೀಚರುಗಳಿವೆ. ಗ್ಯಾಡ್ಜೆಟ್ ಗಳು, ಏರ್ ಕಂಡಿನನ್ ನಿರ್ವಹಣೆಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹೊರಭಾಗದಲ್ಲಿರುವ ರಿಯರ್ ವ್ಯೂ ಮಿರರನ್ನು ಸ್ವಯಂಚಾಲೀತವಾಗಿ ನಿರ್ವಹಿಸಬಹುದು. ಚಾಲಕ ಕೈಯಿಡಲು ಇರುವ ಆರ್ಮ್ ರೆಸ್ಟಿನೊಳಗೆ ಪುಟ್ಟ ಬಾಕ್ಸ್ ಕೂಡ ಇದೆ. ಹೀಗಾಗಿ ಇದು ಟೂ-ಇನ್-ಒನ್.

ಹಿಂಭಾಗದ ಸೀಟಿನಲ್ಲಿ ತಲೆ ಒರೆಗಿಸಿಕೊಳ್ಳಲು ಮೂರು ಹೆಡ್ ರೆಸ್ಟ್, ಸೂರ್ಯನ ಬೆಳಕು ಬಾರದಂತೆ ತಡೆಗಟ್ಟಲು ಹಿಂಭಾಗದ ಕನ್ನಡಿಗೆ ವಿಶೇಷ ಪರದೆಯಿದೆ. ಇದನ್ನು ಬೇಕಾದರೆ ಮಾತ್ರ ಬಳಸಿಕೊಳ್ಳಬಹುದು. ಇಲ್ಲದಿದ್ದರೆ ಅದು ಯಾರಿಗೂ ಕಾಣದಂತೆ ಸೀಟಿನ ಹಿಂಭಾಗದಲ್ಲಿ ಅಡಗಿಕೊಂಡಿರುತ್ತದೆ. ಹಿಂಭಾಗದ ಸೀಟಿಗೂ ಏರ್ ಕಂಡಿಷನ್ ಕಿಂಡಿಯಿದೆ.

ಸುರಕ್ಷತೆಯ ಸವಾರಿಗಾಗಿ ಈ ಕಾರಿನ ಮುಂಭಾಗದಲ್ಲಿ ಎರಡು ಏರ್ ಬ್ಯಾಗ್ ಇವೆ. ಕಾರಿನ ಹಿಡಿತ ತಪ್ಪಿ ಸ್ಕಿಡ್ ಆಗದಂತೆ ತಡೆಗಟ್ಟಲು ಆಂಟಿ ಲಾಕ್ ಬ್ರೇಕ್ ಸಿಸ್ಟಮ್ ಮತ್ತು ಇಬಿಡಿ ಫೀಚರುಗಳು ಇವೆ. ಬೆಂಕಿಯಿಂದ ಪಾರಾಗಲು ಎಫ್ ಪಿಎಸ್ ಫೀಚರ್ ಇದೆ. ಬೆಂಕಿ ಆಕಸ್ಮಿಕ ಸಂದರ್ಭದಲ್ಲಿ ಇದು ಇಂಧನ ಪೂರೈಕೆ ಬಂದ್ ಮಾಡುತ್ತದೆ. ಕಳ್ಳರಿಂದ ಪಾರಾಗಲು ಆಂಟಿ ಥೆಫ್ಟ್ ಎಂಜಿನ್ ಇಮೊಬಿಲೈಝರ್ ಇದೆ. ವೇಗದ ಮಿತಿ ಸೂಚಕ, ಡಿಜಿಟಲ್ ಡೋರ್ ಓಪನ್ ಇಂಡಿಕೇಟರ್ ಇತ್ಯಾದಿ ಹಲವು ಫೀಚರುಗಳು ಇದರಲ್ಲಿವೆ.

ಫಿಯೆಟ್ ಫ್ಯಾಕ್ಟರಿಯಿಂದ ಹೊರಬಂದ ನೂತನ ಲೀನಿಯಾ ಕಾರಿಗೆ ಮಾರುತಿ ಸುಜುಕಿ ಎಸ್ಎಕ್ಸ್4, ನಿಸ್ಸಾನ್ ಸನ್ನಿ, ಹ್ಯುಂಡೈ ವೆರ್ನಾ ಮತ್ತು ಫೋರ್ಡ್ ಫಿಯೆಸ್ಟ್ ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ. ಲೀನಿಯಾ ಕಾರು ಆಕ್ಟಿವ್, ಎಮೋಷನ್ ಮತ್ತು ಡೈನಾಮಿಕ್ ಎಂಬ ಮೂರು ಆವೃತ್ತಿಗಳಲ್ಲಿ ದೊರಕುತ್ತವೆ. ಫಿಯೆಟ್ ಲೀನಿಯಾ ಕಾರಿನ ಆರಂಭಿಕ ದರ 8.8 ಲಕ್ಷ ರುಪಾಯಿ.

ನಮ್ಮ ಡ್ರೈವ್ ಸ್ಪಾರ್ಕ್ ತಂಡವು ವಾರಾಂತ್ಯದಲ್ಲಿ ಫಿಯೆಟ್ ಲೀನಿಯಾ ಟೆಸ್ಟ್ ಡ್ರೈವ್ ನೆಪದಲ್ಲಿ ಸಮುದ್ರ ಮಟ್ಟದಿಂದ 1,878 ಮೀಟರ್ ಎತ್ತರವಿರುವ ನಂದಿಬೆಟ್ಟ ಟ್ರಿಪ್ ಕೂಡ ಮುಗಿಸಿಬಂದೆವು. ಬೆಂಗಳೂರಿನಿಂದ ನಂದಿಬೆಟ್ಟದವರೆಗೆ ತೆಗೆದ ಲೀನಿಯಾ ಕಾರಿನ ಅತ್ಯಾಕರ್ಷಕ ಚಿತ್ರಸಂತೆ ನೋಡಲು ಈ ಲಿಂಕ್ ಪ್ರವೇಶಿಸಿರಿ.

ನೀವು ನಂದಿಬೆಟ್ಟ ಅಥವಾ ಇನ್ಯಾವುದೋ ಪ್ರಮುಖ ಸ್ಥಳಗಳಿಗೆ ನಿಮ್ಮ ಪ್ರೀತಿಯ ಕಾರು, ಬೈಕ್ ಮೂಲಕ ನಡೆಸಿದ ಟ್ರಿಪ್ ಕಥೆಯನ್ನು ನಮಗೆ ಬರೆದು ಕಳುಹಿಸಲು ಮರೆಯದಿರಿ. ನಮ್ಮ ವಿಳಾಸ [email protected]

More from DriveSpark

Article Published On: Monday, June 4, 2012, 11:43 [IST]
English summary
The Linea is available with 1.4 L "FIRE" petrol and 1.3 L Multijet diesel Engine. As mentioned earlier, we drove the 1.3 litre Multijet diesel. The Linea diesel offers excellent fuel economy with a claimed mileage of 20.4 kmpl. However, Fiat could have made the car a little more powerful as the turbo lag was evident in the second and third gears.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+