ಟೆಸ್ಟ್ ಡ್ರೈವ್: 2012 ಫಿಯೆಟ್ ಲೀನಿಯಾ ಮಲ್ಟಿಜೆಟ್

ಇಟಲಿಯ ಕಾರು ಕಂಪನಿ ಫಿಯೆಟ್ ಹೊರತಂದ ಮಧ್ಯಮ ಗಾತ್ರದ ಸೆಡಾನ್ ಕಾರು ಫಿಯೆಟ್ ಲೀನಿಯಾ. ಇತ್ತೀಚೆಗೆ ಕಂಪನಿಯು 2012ರ ಫಿಯೆಟ್ ಲೀನಿಯಾವನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಪರಿಚಯಿಸಿದೆ. ಲೀನಿಯಾ ವಿಮರ್ಶೆ ಮುಂದುವರೆದ ಭಾಗ ಓದಿ.

ಇಂಟಿರಿಯರ್ ವಿಷ್ಯಕ್ಕೆ ಬಂದ್ರೆ ಲೀನಿಯಾ ಕೊಂಚ ಇಕ್ಕಟ್ಟು ಎನಿಸುತ್ತದೆ. ಆರಡಿ ಉದ್ದದ ವ್ಯಕ್ತಿಗಳ ತಲೆ ಮೇಲಕ್ಕೆ ತಾಗಬಹುದು. ಹಿಂಬದಿಯ ಸೀಟು ಕೂಡ ಕೊಂಚ ಇಕ್ಕಟ್ಟು ಅನಿಸುತ್ತದೆ. ಮಕ್ಕಳು ಮಾತ್ರ ಆರಾಮವಾಗಿ ಕುಳಿತುಕೊಳ್ಳಬಹುದು. ಮುಂಭಾಗದ ಸೀಟಿಗೆ ಕಾಲುಗಳು ತಾಗಿ ಅನ್ ಕಂಫರ್ಟ್ ಎನಿಸುತ್ತದೆ.

Fiat Linea 2012 Maltijet Test Drive Review

ಲೀನಿಯಾ ಕಾರಿನ ವಿನ್ಯಾಸ ಅತ್ಯುತ್ತಮವಾಗಿದೆ. ಚಾಲನೆ ಮಾಡುತ್ತಿರುವಾಗ ಚಾಲಕನಿಗೆ ಕಾರಿನ ಗಾತ್ರವನ್ನು ಅರಿತುಕೊಂಡು ಚಾಲನೆ ಮಾಡುವುದು ಕಷ್ಟವಾಗುವುದಿಲ್ಲ. ಇದರ ಇಂಟಿರಿಯರ್ ಫೀಚರುಗಳು ಐಷಾರಾಮಿಯಾಗಿದೆ. ಇದರಲ್ಲಿರುವ ಫೀಚರುಗಳೆಲ್ಲ ಸುಲಭವಾಗಿ ಕೈಗೆಟುಕುವಂತಿದೆ. ಸ್ಟೀಯರಿಂಗ್ ವೀಲ್ನಲ್ಲೇ ವಾಲ್ಯೂಂ, ಟ್ರಾಕ್ಷನ್ ಇತ್ಯಾದಿಗಳನ್ನು ನಿರ್ವಹಿಸಬಹುದು.

ನೂತನ ಫಿಯೆಟ್ ಲೀನಿಯಾ ಕಾರಿನಲ್ಲಿ ಬ್ಲೂ ಆಂಡ್ ಮೀ "ಮೈ ಕಾರ್" ತಂತ್ರಜ್ಞಾನವಿದೆ. ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನದ ಮೂಲಕ ಫೋನ್ ಕರೆಗಳನ್ನು ಸ್ವೀಕರಿಸುವುದು, ಕರೆ ಮಾಡುವುದು, ಮ್ಯೂಸಿಕ್ ಬದಲಾಯಿಸುವುದು ಸುಲಭವಾಗಿದೆ. ವಾಯ್ಸ್ ಕಂಟ್ರೋಲ್ ಮೂಲಕ ಇವೆಲ್ಲವನ್ನು ನಿರ್ವಹಿಸಬಹುದಾಗಿದೆ.

ಬಾಗಿಸಬಹುದಾದ ಸ್ಟಿಯರಿಂಗ್ ವೀಲ್‌ನಿಂದಾಗಿ ಚಾಲಕ ತನ್ನ ಅನುಕೂಲತೆ, ಆರಾಮದಾಯಕತೆಗೆ ತಕ್ಕಂತೆ ಸ್ಟೀಯರಿಂಗ್ ವೀಲ್ ಬಾಗಿಸಿಕೊಂಡು ಚಾಲನೆ ಮಾಡಿಕೊಳ್ಳಬಹುದು. ಮುಂಭಾಗದ ಸೀಟು ಆರಾಮದಾಯಕವಾಗಿದೆ. ಆದರೆ ಹಿಂಭಾಗದ ಸೀಟು ಮತ್ತು ಹೆಡ್ ರೂಂ ಇಕ್ಕಟು ಎನಿಸುತ್ತದೆ. ಆರಡಿ ಉದ್ದದ ವ್ಯಕ್ತಿಗಳಿಗೆ ಈ ಕಾರು ಖಂಡಿತವಾಗಿಯೂ ಕಂಫರ್ಟ್ ಎನಿಸದು.

ಸೀಟಿನ ಗುಣಮಟ್ಟ ಅತ್ಯುತ್ತಮ. ಆದರೆ ರೂಫ್‌ಗೆ ಬಳಸಿದ ಮೇಟಿರಿಯಲ್ ಕೊಂಚ ಅಗ್ಗದ ಗುಣಮಟ್ಟದೋ ಎಂದು ಸಂಶಯ ಹುಟ್ಟಿಸುತ್ತದೆ. ಕಾರಿನ ಲಗೇಜ್ ಸ್ಥಳಾವಕಾಶ ವಿಶಾಲವಾಗಿದೆ. ಅಂದ್ರೆ ಇದು 500 ಲೀಟರಿನ ಬೂಟ್ ಸ್ಥಳಾವಕಾಶ ಹೊಂದಿದೆ.

ಮೈಲೇಜ್, ಪವರ್, ದರ ಮಾಹಿತಿ ಮುಂದಿನ ಪುಟದಲ್ಲಿದೆ.

More from DriveSpark

Article Published On: Monday, June 4, 2012, 11:48 [IST]
English summary
Fiat Linea, the mid-level sedan from the Italian carmaker has been in the Indian market from 2007. Now it's the 2012 Linea on sale and Team Drivespark test drove the 1.3 litre multijet diesel engine car recently. Here is our review of the new Linea.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+