ನಂದಿಬೆಟ್ಟ ಏರಿದ ಫಿಯೆಟ್ ಲೀನಿಯಾ ಮಲ್ಟಿಜೆಟ್

By * ಪ್ರವೀಣ ಚಂದ್ರ

ಕನ್ನಡ ಡ್ರೈವ್ ಸ್ಪಾರ್ಕ್ ಇತ್ತೀಚೆಗೆ ಫಿಯೆಟ್ ಲೀನಿಯಾ ಮಲ್ಟಿಜೆಟ್ ಕಾರಿನ ಟೆಸ್ಟ್ ಡ್ರೈವ್ ನಡೆಸಿದೆ. ವಿಶೇಷವೆಂದರೆ ಈ ಕಾರನ್ನು ಅರಿತುಕೊಳ್ಳಲು ನಾವು ಆಯ್ಕೆ ಮಾಡಿಕೊಂಡದ್ದು ಬೆಂಗಳೂರಿನಿಂದ ನಂದಿಬೆಟ್ಟ. ಸಿಟಿ, ಹೆದ್ದಾರಿ ಮಾತ್ರವಲ್ಲದೇ ಬೆಟ್ಟದ ಹಾದಿಯಲ್ಲೂ ನಾವು ನಡೆಸಿದ "2012 ಫಿಯೆಟ್ ಲೀನಿಯಾ ಮಲ್ಟಿಜೆಟ್ ಎಮೋಷನ್" ಟೆಸ್ಟ್ ಡ್ರೈವ್ ರಿಪೋರ್ಟ್ ಕಾರ್ಡ್ ಇಲ್ಲಿದೆ.

ನೈಸ್ ರಸ್ತೆಯಲ್ಲಿ ನಿಸ್ಸಾನ್ ಸನ್ನಿ ಸೆಡಾನ್ ಕಾರಿನ ಟೆಸ್ಟ್ ಡ್ರೈವ್ ನಡೆಸಿದ್ದೆವು. ಅದೇ ರಸ್ತೆಯಲ್ಲಿ 60 ಲಕ್ಷ ರುಪಾಯಿಯ ಶಕ್ತಿಶಾಲಿ ಸ್ಪೋರ್ಟ್ಸ್ ಕಾರು ನಿಸ್ಸಾನ್ 370 ಚಲಾಯಿಸಿದ್ದೆವು. ಆದರೆ ನೂತನ ಲೀನಿಯಾ ಕಾರಿನಲ್ಲಿ ನಾವು ಜಯನಗರದಿಂದ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕವಾಗಿ ಸಾಗಿ ನಂದಿಬೆಟ್ಟ ಏರಿದೆವು.

ಹಳೆಯ ಲೀನಿಯಾಕ್ಕೆ ಹೋಲಿಸಿದರೆ ಕಾರಿನ ಗ್ರೌಂಡ್ ಕ್ಲೀಯರೆನ್ಸ್ ಹೆಚ್ಚಾಗಿದೆ. ಇದರಿಂದ ದೂರ ಪ್ರಯಾಣಕ್ಕೆ ಹೆಚ್ಚು ಸಮರ್ಥವಾಗಿದೆ. ಕಾರಿನ ವಿನ್ಯಾಸ, ಸೌಂದರ್ಯ, ಆರ್16 ಅಲಾಯ್ ವೀಲ್ ಇತ್ಯಾದಿಗಳನ್ನು ಮೆಚ್ಚುಗೆಯಿಂದಲೇ ನೋಡಿ ಕೀಲಿಕೈನಲ್ಲೇ ಡೋರ್ ಅನ್ ಲಾಕ್ ಮಾಡಿ ಕಾರಿನೊಳಗೆ ಪ್ರವೇಶಿಸಿದೆವು.

ಸ್ಟಿಯರಿಂಗ್ ವೀಲ್ ಹಿಡಿದು ಕಾರಿನ ಇಂಗ್ಲಿಷನ್ ತಿರುಗಿಸಿದಾದ ಬೀಪ್ ಬೀಪ್ ಎಂಬ ಅಲಾರಂ ಕೇಳಿಸಿತ್ತು. ಇದೇನಪ್ಪ ಬಾಂಬ್ ಗೀಂಬ್ ಏನಾದ್ರೂ ಇದೇನಾ ಎಂದು ಅಚ್ಚರಿಯಿಂದ ಕನ್ಸೋಲ್ ಮೇಲಿರುವ ಪರದೆ ನೋಡಿದಾಗ ತಪ್ಪಿನ ಅರಿವಾಯ್ತು. ಚಾಲಕ ಸೀಟ್ ಬೆಲ್ಟ್ ಧರಿಸದಿದ್ರೆ ಅಲಾರಂ ಬೀಪ್ ಬೀಪ್ ಸದ್ದು ಮಾಡುತ್ತದೆ. ಆದ್ರೆ ಉಳಿದ ಸೀಟಿನಲ್ಲಿ ಕುಳಿತವರ ಸೀಟ್ ಬೆಲ್ಟ್ ಗಳಿಗೆ ಸೆನ್ಸಾರ್ ಇಲ್ಲ. ಉಳಿದವರು ಸ್ವಂತ ಬುದ್ದಿಯಿಂದ ಸೀಟ್ ಬೆಲ್ಟ್ ಹಾಕಿಕೊಳ್ಳುವುದು ಅನಿವಾರ್ಯ.

ಕಾರು ಪಾರ್ಕ್ ಮಾಡಿದ್ದು ನೆಲಮಾಳಿಗೆಯ ಪಾರ್ಕಿಂಗ್ ಸ್ಥಳದಲ್ಲಿ. ಅಲ್ಲಿಂದ ಮೇಲಕ್ಕೆ ಬರುವ ರಸ್ತೆ 45 ಡಿಗ್ರಿ ಏರುಮುಖವಾಗಿದೆ. ನಂಬಿದ್ರೆ ನಂಬಿ, ಕಾರು ಅರ್ಧ ಏರಿ ನನ್ನಿಂದ ಸಾಧ್ಯವಿಲ್ಲವೆಂದು ನಿಂತುಬಿಟ್ಟಿತು. ಆರಂಭ ವಿಘ್ನಕ್ಕೆ ಶಪಿಸುತ್ತ ಇಬ್ಬರನ್ನು ಇಳಿಸಿದೆವು. ಆಮೇಲೆ ಕಾರು ನಿರಾಳವಾಗಿ ಮೇಲಕ್ಕೆ ಚಲಿಸಿತು.

ಈ ಕಾರಿನಲ್ಲಿ ಟರ್ಬೊ ಲ್ಯಾಗ್ ಅನ್ನೋ ಫೀಚರ್ ಇದೆ. ಎರಡು ಮತ್ತು ಮೂರನೇ ಗೇರಿಗೆ ಪ್ರವೇಶಿದಾಗ ಒಮ್ಮೆಗೆ ಪವರ್ ಬಂದಂತೆ ಅನಿಸುತ್ತದೆ. ಇದು ಟರ್ಬೊ ಲ್ಯಾಗ್ ವಿಶೇಷತೆ. ಈ ಫೀಚರಿನಿಂದಾಗಿ ಕಾರು ಚಾಲನೆ ಶುರು ಮಾಡುವಾಗ ಈ ಕಾರಿಗೆ ಪವರೇ ಇಲ್ಲವೆಂದು ಅನಿಸಿದ್ದು ಸುಳ್ಳಲ್ಲ.

ನಾವು ಹೊರಟ ಕ್ಷಣದಲ್ಲಿ ಸಿಟಿ ರಸ್ತೆಯಲ್ಲಿ ಟ್ರಾಫಿಕ್ ಕೊಂಚ ಜಾಸ್ತಿಯೇ ಇತ್ತು. ನಿಧಾನವಾಗಿ ಪ್ರಯಾಣಿಸಿದಾಗ ಪವರ್ ಕಡಿಮೆ ಅನಿಸುವುದರಿಂದ ಸಿಟಿ ರಸ್ತೆಯ ಸವಾರಿಗೆ ಇದು ಅಷ್ಟೇನೂ ಸೂಕ್ತವಾಗಿಲ್ಲವೆಂದು ನನ್ನ ಅಭಿಪ್ರಾಯ. ಅಥವಾ ಹೆಚ್ಚಿನ ಡೀಸೆಲ್ ಎಂಜಿನ್ ಹಣೆಬರಹವೇ ಇಷ್ಟು ಎಂದುಕೊಳ್ಳಬಹುದು. ಟರ್ಬೊ ಲ್ಯಾಗ್ ಇರುವುದರಿಂದ ಸಿಟಿ ರಸ್ತೆಯಲ್ಲಿ ಲೀನಿಯಾ ಸವಾರಿ ಅಷ್ಟೇನೂ ಮಜಾ ನೀಡುವುದಿಲ್ಲ.

ಡೀಸೆಲ್ ಕಾರುಗಳ ಸರಿಯಾದ ಶಕ್ತಿ ಅರಿವಾಗಬೇಕಾದರೆ ಹೆದ್ದಾರಿಯಲ್ಲಿ ಪ್ರಯಾಣ ಮಾಡಬೇಕು. ಬೆಂಗಳೂರು ಸಿಟಿ ಬಿಟ್ಟು ಚಿಕ್ಕಬಳ್ಳಾಪುರ ಹಾದಿ ಹಿಡಿದ್ಮೇಲೆ ಡ್ರೈವಿಂಗ್ ಅನುಭವ ಸೂಪರ್ಬ್. ನಂದಿಬೆಟ್ಟದ ಸರಳ ತಿರುವುಗಳನ್ನು ಏರುವುದಕ್ಕೂ ಲೀನಿಯಾ ಹೆಚ್ಚು ಕಷ್ಟಪಟ್ಟಿಲ್ಲ.

ಇನ್ನೂ ಕೆಲವು ಆಸಕ್ತಿದಾಯಕ ವಿಷ್ಯಗಳಿವೆ. ಮುಂದಿನ ಪುಟಕ್ಕೆ ಪ್ರಯಾಣಿಸಿ

More from DriveSpark

Article Published On: Monday, June 4, 2012, 11:55 [IST]
English summary
Team Drivespark test drove the 2012 Fiat Linea diesel from Bangalore city to Nandi Hills, a hill station around 70 km out of the city. The car features a classy design which is pleasant to the eyes. The 1.3 litre multijet engine powered car handled city roads as well as hilly bends with ease and comfort. The Linea seemed live throughout the journey offering a pleasurable drive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+