ನೈಸ್ ರಸ್ತೆ ಹೈಜಾಕ್ ಮಾಡಿದ ಕೆಂಪು ಸುಂದರಿ

Posted By: * ಪ್ರವೀಣ ಚಂದ್ರ
ಡ್ಯೂಡ್, ಬೀ ಕೇರ್ ಫುಲ್ ಅಂತ ಹೇಳಿದ ಸ್ನೇಹಿತರ ಮುಖವನ್ನೊಮ್ಮೆ ನೋಡಿ ಕಾರಿನೊಳಗೆ ಪ್ರವೇಶಿಸಿದಾಗ ಮನದಲ್ಲಿ ಕಡಲ ಮೊರೆತ. ಸ್ಟಿಯರಿಂಗ್ ಹಿಡಿದಾಗ ಪ್ರಪ್ರಥಮ ಬಾರಿಗೆ ನಲ್ಲೆಯ ಟಚ್ ಮಾಡಿದ ಅನುಭವ. ತಗ್ಗಿನ ಸೀಟಿನೊಳಗೆ ಹೋತುಹೋದಾಗ ಎದೆಯಲ್ಲಿ ಢವಢವ. ಕೈಕಾಲುಗಳಲ್ಲಿ ನಡುಕ. ಮನದ ಮೂಲೆಯಲ್ಲಿ ಚುಂಯಿ ಅನ್ನೋ ಪುಳಕ ಬೇರೆ.

ಮಾರುತಿ 800 ನಾನು ಫಸ್ಟ್ ಡ್ರೈವಿಂಗ್ ಮಾಡಿದ ಕಾರು. ಆಲ್ಟೋ, ಸ್ಯಾಂಟ್ರೊ, ಓಮ್ನಿ, ರಿಟ್ಜ್, ಸನ್ನಿ ಡ್ರೈವಿಂಗ್ ಮಾಡಿಯೂ ಗೊತ್ತು. ನಾಚಿಕೆ, ಬಿಗುಮಾನ, ಮುಜುಗರವಿಲ್ಲದೇ ಹೇಳಬೇಕೆಂದರೆ ದುಬಾರಿ ಸ್ಪೋರ್ಟಿ ಕಾರು ಸವಾರಿ ಮಾಡಿರಲಿಲ್ಲ. ಹೀಗಾಗಿ 53 ಲಕ್ಷ ರುಪಾಯಿಯ ನಿಸ್ಸಾನ್ 367ಝಡ್ ಕಾರು ಪ್ರವೇಶಿಸಿದಾಗ ಮನಸ್ಸು ತಲ್ಲಣಿಸಿದು ನಿಜ. ತಲ್ಲಣಿಸದಿರು ಕಂಡ್ಯ ತಾಳು ಮನವೆ ಅಂತ ನನ್ನ ನಾನೇ ಸಂತೈಸಿಕೊಂಡೆ.

ಹ್ಯಾಂಡ್ ಬ್ರೇಕ್ ತೆಗೆದು ಕ್ಚಚ್ ತುಳಿಯೋಣವೆಂದರೆ ಕ್ಲಚ್ಚೇ ಇಲ್ಲ. ಅಯ್ಯೋ ಕರ್ಮವೇ ಅಂದುಕೊಂಡು ಕಾಲು ಕೆಳಗೆ ನೋಡಿದ್ರೆ ಬ್ರೇಕ್ ಮತ್ತು ಆಕ್ಸಿಲರೇಟರ್ ಮಾತ್ರ. ಸ್ಟಾರ್ಟ್ ಮಾಡೋಕೆ ಕೀಲಿಕೈ ಇಲ್ಲ. ಸ್ಟಾರ್ಟ್/ಸ್ಟಾಪ್ ಬಟನ್ ಪ್ರೆಸ್ ಮಾಡಿದ್ರಾಯ್ತು. ಆಟೋಮ್ಯಾಟಿಕ್ ಗೇರ್ ಇರೋ ಕಾರಿಗೆ ಕ್ಲಚ್ ಬೇಕಿಲ್ಲವೆಂದು ನನಗೆ ಜ್ಞಾನೋದಯವಾದಾಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಸಾಗರ "ಸ್ಟಾರ್ಟ್ ಸ್ಟಾಪ್" ಬಟನ್ ಪ್ರೆಸ್ ಮಾಡಿಯಾಗಿತ್ತು.

ಈ ಸ್ಪೋರ್ಟ್ಸ್ ಕಾರಿನ ಸಾರಥಿ "ಸಾಗರ"ನ ಕಥೆ ತುಂಬಾ ಇಂಟ್ರೆಸ್ಟಿಂಗ್. ಅದನ್ನು ಇನ್ನೊಮ್ಮೆ ಹೇಳ್ತಿನಿ.

ಹ್ಯಾಚ್ ಬ್ಯಾಕ್, ಸೆಡಾನ್ ಕಾರಿನ ಬಗ್ಗೆ ಮಾತ್ರ ತಿಳಿದವರಿಗೆ ಸ್ಪೋರ್ಟ್ಸ್ ಕಾರು ಸಾವಿರ ಕನ್ ಫ್ಯೂಸ್ ಮಾಡುತ್ತದೆ. ಈ ದುಬಾರಿ ಸ್ಪೋರ್ಟಿ ಬ್ಯೂಟಿಯಲ್ಲಿ ಎರಡೇ ಎರಡು ಸೀಟ್ ಇದೆ. ಕ್ಲಚ್ ಇಲ್ಲ. ಸ್ಟಿಯರಿಂಗ್(ಟಿಲ್ಟ್ ಸ್ಟಿಯರಿಂಗ್) ಬೇಕಾದ ರೀತಿ ಬಗ್ಗಿಸಬಹುದು. ಸ್ಟಿಯರಿಂಗ್ ವೀಲ್ ನಲ್ಲೇ ಹಲವು ಕಂಟ್ರೋಲ್ಸ್ ಇದೆ. ಸ್ಟಿಯರಿಂಗಲ್ಲೇ ಬಲಭಾಗದಲ್ಲಿ ಗೇರ್ ಶಿಫ್ಟ್ ಬಟನ್ಸ್ ಮಾಡಬಹುದು. ಆಡಿಯೋ ಕಂಟ್ರೋಲ್ಸ್ ಇದೆ.

332 ಅಶ್ವಶಕ್ತಿ ಮತ್ತು 363 ಟಾರ್ಕ್ ಪವರಿನ ಈ ಪೆಟ್ರೋಲ್ ಕಾರು 7 ಸ್ಪೀಡಿನ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಯನ್ನು ಹೊಂದಿದೆ. ಗಂಟೆಗೆ 280 ಕಿ.ಮೀ. ಇದರ ಗರಿಷ್ಠ ವೇಗ. ಅಂದರೆ ಆಟೋಮ್ಯಾಟಿಕ್ ಬೇಡವೆಂದರೆ ಮ್ಯಾನುಯಲ್ ಗೇರ್ ನಲ್ಲಿ ಡ್ರೈವ್ ಮಾಡಬಹುದು(ನಾನು ಕೊಂಚ ದೂರ ಮ್ಯಾನುಯಲ್ ನಲ್ಲೇ ಡ್ರೈವ್ ಮಾಡಿದ್ದು). ಉಳಿದ ಕಾರುಗಳಲ್ಲಿ ಗೇರ್ ಮುಂದಕ್ಕೆ ಹಾಕಿದರೆ, ಇದರಲ್ಲಿ ಹಿಂದಕ್ಕೆ ಸ್ಟೆಪ್ ಬೈ ಸ್ಟೆಪ್ ಹಾಕಬೇಕು. ಆರ್ಮ್ ರೆಸ್ಟ್(ಕೈಯಿಡುವ ಸ್ಥಳದಲ್ಲಿ)ನಲ್ಲಿ ಕೈಯಿಟ್ಟುಕೊಂಡು ಆರಾಮವಾಗಿ ಗೇರ್ ಹ್ಯಾಂಡಲ್ ಮಾಡಬಹುದು.

ಈ ವೇಗದ ಶಕ್ತಿಶಾಲಿ ಕಾರಿನಲ್ಲಿ ಆರು ಏರ್ ಬ್ಯಾಗ್, ಎಬಿಎಸ್, ಇಬಿಡಿ ಇತ್ಯಾದಿ ಸುರಕ್ಷತೆಯ ಫೀಚರುಗಳಿವೆ. ಬಟನ್ ಪ್ರೆಸ್ ಮಾಡುವ ಮೂಲಕ ಆನ್ ಆಫ್ ಮಾಡಬಹುದು. ಬಟನ್ ಪ್ರೆಸ್ ಮಾಡುವ ಮೂಲಕ ಗೇರ್, ಪಾರ್ಕಿಂಗ್, ನೀಟ್ರೋಲ್ ಮಾಡಬಹುದು. ಬೂಟ್ ನಲ್ಲಿ ಸ್ಥಳಾವಕಾಶವೂ ಸಾಕಷ್ಟಿದೆ.

ದುಬಾರಿ ಕಾರುಗಳ ಗಾತ್ರ ಬೃಹತ್ ಆಗಿರಬೇಕು ಎನ್ನುವುದಕ್ಕೆ ಈ ಕಾರು ಉಲ್ಟಾ. ಇದು ಎರಡು ಸೀಟಿನ ಸಣ್ಣ ಬ್ಯೂಟಿ. ಮೀನಿನಂತೆ ಕಾಣುವ ನೀಲ ಹೆಡ್ ಲೈಟ್ ಕಾರಿನ ಅಂದ ಹೆಚ್ಚಿಸಿದೆ. ಜಿಂಗ್ ಚಿಕಾ ಮ್ಯೂಸಿಕ್ ಮಸ್ತಿಗೆ ಬಾಷ್ ಆಡಿಯೋ ಸಿಸ್ಟಮ್ ಕಾರಲ್ಲಿದೆ. ಡೋರ್ ಹ್ಯಾಂಡಲ್ ಆಕರ್ಷಕ. ಹ್ಯಾಂಡಲಲ್ಲೇ ಏಸಿ ವೆಂಟ್ ಅಳವಡಿಸಲಾಗಿದೆ.

ಎಂಜಿನ್ ಸದ್ದು ಗಾಳಿಯ ಮೊರೆತದಂತೆ ಭಾಸವಾಗುತ್ತದೆ. ಇದರ ಆರಾಮದಾಯಕತೆ, ವೇಗದ ಆವೇಗ, ಮುನ್ನುಗುವ ಛಾತಿ, ಹುಮ್ಮಸು ಅನುಭವಿಸಿಯೇ ತೀರಬೇಕು. ಸಿಂಪ್ಲಿ ಸೂಪರ್ಬ್.

ಸ್ಪೋರ್ಟ್ ಕಾರೊಂದರಲ್ಲಿ ಒಂದು ರೌಂಡ್ ಹೊಡೆದ ಹನ್ನೆರಡು ನಿಮಿಷವನ್ನು ಮರೆಯಲು ಕನಿಷ್ಠವೆಂದರೂ ಹನ್ನೆರಡು ವರ್ಷ ಬೇಕಾದೀತು. ಫಸ್ಟ್, ಸೆಕೆಂಡ್, ಥರ್ಡ್ ಗೇರಿನಲ್ಲಿ ಡ್ರೈವಿಂಗ್ ಅನುಭವ ಸೂಪರ್ಬ್. ಕಾರು ಒಟ್ಟಾರೆ ಇದು ನನ್ನ ಪಾಲಿಗೆ ಅಮೇಝಿಂಗ್, ಅಲ್ಟಿಮೆಟ್ ಮತ್ತು ಅಪರೂಪದ ಅನುಭವ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Driivespark test drove Nissan's iconic sports car 370Z on the fast and exciting NICE roads of Bangalore. The 370Z is a powerful machine that offers great performance. It is a truly fast car and we had a great experience driving it.
Story first published: Monday, February 27, 2012, 10:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark