ಆದಿತ್ಯ ಛೋಪ್ರ ರಾಣಿಮುಖರ್ಜಿಗೆ ಏನು ಕೊಟ್ಟನು?
ಬಾಲಿವುಡ್ ಬೆಡಗಿ ರಾಣಿ ಮುಖರ್ಜಿಗೂ, ಬಾಲಿವುಡ್ ಚಿತ್ರಗಳ ನಿರ್ಮಾಪಕ ಆದಿತ್ಯಾ ಛೋಪ್ರಾಗೂ ಲವ್ವಿಡುವ್ವಿ ಇರುವ ಸಂಗತಿ ಈಗ ರಹಸ್ಯವಾಗಿಯೇನೂ ಉಳಿದಿಲ್ಲ. ಆದರೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಕಡಿಮೆ. ಅಪರೂಪಕ್ಕೊಮ್ಮೆ ಎಂಬಂತೆ ಮಾಧ್ಯಮದವರ ಹದ್ದಿನ ಕಣ್ಣಿಗೆ ಬಿದ್ದು ಸುದ್ದಿಯಾಗುತ್ತಿದ್ದರು.
ಇದೀಗ ಕನ್ನಡ ಡ್ರೈವ್ ಸ್ಪಾರ್ಕ್ ವಿಭಾಗದಲ್ಲೂ ರಾಣಿ ಮುಖರ್ಜಿ ಮತ್ತು ಆದಿತ್ಯಾ ಛೋಪ್ರಾ ಸುದ್ದಿಯಾಗುತ್ತಿದ್ದಾರೆ. ಯಾಕೆಂದರೆ ತನ್ನ ಒಲವಿನ ರಾಣಿಗೆ ಆದಿತ್ಯಾ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಒಲವಿನ ರಾಣಿಗೆ ನೀಡಿದ್ದು 1.25 ಕೋಟಿ ರುಪಾಯಿಯ ಆಡಿ ಎ8 ಡಬ್ಲ್ಯು12 ಎಂಬ ಅದ್ದೂರಿ ಕಾರು.

ಪ್ರೀತಿಪಾತ್ರರಿಗೆ ಉಡುಗೊರೆ ನೀಡುವುದು ವಿಶೇಷವೇನೂ ಅಲ್ಲ. ಇನಿಯನ ಹುಟ್ಟುಹಬ್ಬಕ್ಕೆ ಕನ್ನಡ ಚಿತ್ರನಟ ದರ್ಶನ್ ಅರ್ಧಾಂಗಿನಿ ವಿಜಯಲಕ್ಷ್ಮಿ1.38 ಕೋಟಿ ರುಪಾಯಿಯ ಹೊಸ ನೀಲಿ ಬಣ್ಣದ ಜಾಗ್ವಾರ್ ಕಾರೊಂದನ್ನು ಉಡುಗೊರೆ ನೀಡಿದ್ದು ನಿಮಗೆಲ್ಲ ಗೊತ್ತಿರಬಹುದು. ಈ ಸುದ್ದಿ ಗೊತ್ತಿಲ್ಲದಿದ್ದರೆ ಈ ಲಿಂಕ್ ಪ್ರವೇಶಿಸಿ ಓದಬಹುದು.
ದರ್ಶನ್ ಸ್ಟೋರಿ ಕೊಂಚ ಹಳತು. ಮೊನ್ನೆ ತನ್ನ ಮಾಜಿ ಪ್ರೇಯಸಿ ಕತ್ರಿನಾ ಕೈಫ್ ಗೆ ಸಲ್ಮಾನ್ ಖಾನ್ ಬೊಂಬಾಟ್ ಉಡುಗೊರೆ ನೀಡಿದ್ದರು. ಆಡಿ ಕಂಪನಿಯ ಲೇಟೆಸ್ಟ್ ಕ್ಯೂ3 ದುಬಾರಿ ಕಾರನ್ನು ತನ್ನ ಕ್ಯೂಟ್ ಗೆಳತಿಗೆ ಸಲ್ಮಾನ್ ಖಾನ್ ಉಡುಗೊರೆ ನೀಡಿದ್ದರು.
ಸದ್ಯ ರಾಣಿ ಮುಖರ್ಜಿ ಪಡೆದ ಆಡಿ ಎ8 ಡಬ್ಲ್ಯು12 ಎಂಬ ಕಾರಿನ ಬಗ್ಗೆ ನೋಡೋಣ. ಆಡಿ ಎ8 ಕಾರು ಒಟ್ಟು ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತದೆ. ಅದರಲ್ಲಿ ಬೇಸ್ ಡೀಸೆಲ್ ಆವೃತ್ತಿ ಎ8 ಎಲ್ 3.0 ಟಿಡಿಐ ಎಕ್ಸ್ ಶೋರೂಂ ದರ ಸುಮಾರು 73 ಲಕ್ಷ ರುಪಾಯಿ ಇದೆ. 4.2 ಲೀಟರಿನ ಎಫ್ ಎಸ್ಐ ಪೆಟ್ರೋಲ್ ಆವೃತ್ತಿ ದರ ಸುಮಾರು 83 ಲಕ್ಷ ರು. ಆಸುಪಾಸಿನಲ್ಲಿದೆ.
ಆಡಿ ಎ8 ಎಲ್ 4.2 ಲೀಟರಿನ ಟಿಡಿಐ ಕ್ಯೂಟ್ರೊ ಎಂಜಿನ್ ಡೀಸೆಲ್ ಸೆಡಾನ್ ಕಾರಿನ ದರ 98 ಲಕ್ಷ ರುಪಾಯಿ ಇದೆ. ಹೈಎಂಡ್ ಆವೃತ್ತಿ ಎ8 ಎಲ್ ಡಬ್ಲ್ಯು 12 ಕಾರಿನ ದರ 1.25 ಕೋಟಿ ರುಪಾಯಿ ಇದೆ. ಅಂದಹಾಗೆ ಇದೇ ಕಾರನ್ನು ರಾಣಿ ಮುಖರ್ಜಿಗೆ ಆದಿತ್ಯಾ ಛೋಪ್ರಾ ನೀಡಿದ್ದು.


Click it and Unblock the Notifications








