ಕಾರಿಗೆ ಅಲಾಯ್ ವೀಲ್ ಖರೀದಿಸ್ತಿರಾ? ಒಂದ್ನಿಮಿಷ

ಕಾರಿಗೆ ಅಲಾಯ್ ವೀಲುಗಳು ಬೆಸ್ಟ್ ಆಕ್ಸೆಸರಿಗಳು. ಕಾರಿಗೆ ಅಲಾಯ್ ವೀಲುಗಳೇ ಆಭರಣ. ಅಲಾಯ್ ವೀಲಿದ್ದರೆ ಕಾರಿನ ಲುಕ್ಕೇ ಬೇರೆ. ಇವು ಕಾರಿನ ಅಂದವನ್ನು ಮಾತ್ರ ಹೆಚ್ಚಿಸದೆ ಕಾರಿನ ದಕ್ಷತೆ, ಹ್ಯಾಂಡ್ಲಿಂಗ್ ಕೂಡ ಹೆಚ್ಚಿಸುತ್ತದೆ.

ದೇಶದಲ್ಲಿ ಹತ್ತುಹಲವು ಅಲಾಯ್ ವೀಲ್ ಕಂಪನಿಗಳಿವೆ. ಅಲಾಯ್ ವೀಲ್ ರಿಮ್ ದರ ಎರಡೂವರೆ ಸಾವಿರ ರು.ನಿಂದ 50 ಸಾವಿರ ರು.ವರೆಗೂ ಇದೆ. ನಿಯೊ ವೀಲ್ಸ್, ಪ್ಲಾಟ್ಟಿ, ಎಚ್ ಆರ್ ರೇಸಿಂಗ್, ಔರಾ ಪ್ರಮುಖ ಜನಪ್ರಿಯ ಅಲಾಯ್ ವೀಲ್ ಪೂರೈಸುವ ಕಂಪನಿಗಳು. ಅಲಾಯ್ ವೀಲುಗಳ ಒಳಿತು ಮತ್ತು ಕೆಡುಕುಗಳತ್ತ ದೃಷ್ಟಿ ಹರಿಸೋಣ.

ಒಳಿತುಗಳು
* ಅಲಾಯ್ ವೀಲ್ ಗಳಿಂದ ಕಾರಿನ ಅಂದ ಹೆಚ್ಚುತ್ತದೆ.
* ಇಂಧನ ದಕ್ಷತೆ ಹೆಚ್ಚಿಸುತ್ತದೆ. ಸ್ಟೀಲ್ ವೀಲಿಗಿಂತ ಅಲಾಯ್ ಹೆಚ್ಚು ಹಗುರ. ಇದರಿಂದ ಕಾರಿನ ಒಟ್ಟಾರೆ ತೂಕ ಕೊಂಚ ಕಡಿಮೆಯಾಗುತ್ತದೆ. ಸಹಜವಾಗಿ ಮೈಲೇಜ್ ಹೆಚ್ಚಾಗುತ್ತದೆ.
* ಹ್ಯಾಂಡ್ಲಿಂಗ್ ಗುಣಮಟ್ಟ ಹೆಚ್ಚಿಸುತ್ತದೆ. ಅಲಾಯ್ ವೀಲ್ ಹಗುರವಾಗಿರುವುದರಿಂದ ಸ್ಟೀಯರಿಂಗ್ ವೀಲ್ ಬಳಕೆ ಸುಲಭವಾಗುತ್ತದೆ. ಹ್ಯಾಂಡ್ಲಿಂಗ್ ಸುಲಭವಾಗುತ್ತದೆ.
* ಅಲಾಯ್ ವೀಲುಗಳು ಬಹುಬಾಳಿಕೆ ಹೊಂದಿವೆ. ಸ್ಟೀಲ್ ವೀಲುಗಳಿಗೆ ಹೋಲಿಸಿದರೆ ಅಲಾಯ್ ವೀಲುಗಳ ಆಯಸ್ಸು ಹೆಚ್ಚು. ಅಲ್ಯುಮಿನಿಯಂ-ಮ್ಯಾಗ್ನೆಶಿಯಂನಿಂದ ನಿರ್ಮಾಣ ಮಾಡಿರುವುದರಿಂದ ಅಲಾಯ್ ವೀಲ್ ಸುಲಭವಾಗಿ ಬೆಂಡ್ ಆಗುವುದಿಲ್ಲ.
* ಟ್ಯೂಬ್ ಲೆಸ್ ಟೈರುಗಳಿಗೆ ಅತ್ಯಂತ ಸೂಕ್ತ. ಇವು ಬೆಂಡ್ ಆಗದಿರುವುದರಿಂದ ಟ್ಯೂಬ್ ಲೆಸ್ ಟೈರುಗಳ ಆಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.
* ತುಕ್ಕು ಹಿಡಿಯುವುದಿಲ್ಲ. ಸ್ಟೀಲ್ ವೀಲುಗಳು ತುಕ್ಕು ಹಿಡಿಯುತ್ತವೆ. ಆದರೆ ಅಲಾಯ್ ವೀಲುಗಳಿಗೆ ಇಂತಹ ಸಮಸ್ಯೆಯಿಲ್ಲ.
* ಬ್ರೇಕಿಂಗ್ ದಕ್ಷತೆ ಹೆಚ್ಚಿಸುತ್ತದೆ.

ಅಲಾಯ್ ವೀಲು ಅವಗುಣಗಳು
* ದುಬಾರಿ: ಸ್ಟೀಲ್ ವೀಲುಗಳಿಗಿಂತ ಎರಡು ಮೂರು ಪಟ್ಟು ಅಲಾಯ್ ವೀಲುಗಳು ದುಬಾರಿ.
* ರಿಪೇರಿ ಮಾಡಲಾಗುವುದಿಲ್ಲ: ಅಲಾಯ್ ವೀಲಿಗೆ ಏನಾದರೂ ಹಾನಿಯಾದರೆ ರಿಪೇರಿ ಮಾಡಲಾಗದು. ಮತ್ತೊಂದು ಹೊಸ ಅಲಾಯ್ ವೀಲ್ ತಂದು ಜೋಡಿಸಬೇಕಷ್ಟೇ!

ಉತ್ತಮ ಅಲಾಯ್ ವೀಲ್ ಖರೀದಿಸುವುದು ಹೇಗೆ? ಸಲಹೆಗಾಗಿ ನಿಮ್ಮ ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ. ಧನ್ಯವಾದ.

More from DriveSpark

Article Published On: Monday, August 6, 2012, 15:33 [IST]
English summary
One of the best accessories that you can get your car is a set of alloys wheels. Advantages and Disadvantages of alloy wheels. Before Buying alloy wheels for your car read these article.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+