ಹೆಚ್ಚಿದ ಬೇಡಿಕೆ, ಆಡಿ ಕ್ಯೂ3 ಬುಕ್ಕಿಂಗ್ ಪುನಾರಂಭ

ಆಡಿ ಇತ್ತೀಚೆಗೆ ದೇಶದ ರಸ್ತೆಗೆ ಕ್ಯೂ3 ಕಾರು ಪರಿಚಯಿಸಿತ್ತು. ಇದರ ಐಷಾರಾಮಿ ಮತ್ತು ಅತ್ಯಾಧುನಿಕ ಫೀಚರುಗಳಿಗೆ ಹೋಲಿಸಿದರೆ ನೂತನ ಕಾರಿನ ದರವೂ ಕಡಿಮೆಯಾಗಿತ್ತು. ಕಂಪನಿಯು ಪರಿಚಯಿಸಿದ ಐದೇ ದಿನಗಳಲ್ಲಿ ಎಲ್ಲಾ 500 ಯುನಿಟ್ ಗಳನ್ನು ಗ್ರಾಹಕರು ಬುಕ್ಕಿಂಗ್ ಮಾಡಿದ್ದರು. ಗ್ರಾಹಕರ ಅತ್ಯಧಿಕ ಬೇಡಿಕೆಯಿಂದ ತತ್ತರಿಸಿದ ಕಂಪನಿಯು ಬುಕ್ಕಿಂಗ್ ಸ್ಥಗಿತಗೊಳಿಸಿತ್ತು.
ನೂತನ ಆಡಿ ಕ್ಯೂ3 ಎರಡನೇ ಹಂತದ ಬುಕ್ಕಿಂಗ್ ಗಾಗಿ ಕೂಡ ಕೇವಲ 500 ಕಾರುಗಳಿವೆ. ಹತ್ತು ಹಲವು ಫೀಚರುಗಳಿದ್ದರೂ, ಕಾರ್ಯಕ್ಷಮತೆ ಹೆಚ್ಚಿದ್ದರೂ ಕ್ಯೂ3 ದರ ಉಳಿದ ಮಾಡೆಲಿಗಿಂತ ಅಗ್ಗ. ಇದು ಸಹ ಕ್ಯೂ3 ಜನಪ್ರಿಯತೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಬಿಎಂಡಬ್ಲ್ಯು ಎಕ್ಸ್1 ಜೊತೆ ಆಡಿ ಕ್ಯೂ3 ಪೈಪೋಟಿ ನಡೆಸಲಿದೆ.
ದೇಶದ ವಾಹನ ಮಾರುಕಟ್ಟೆಗೆ ಕ್ಯೂ3 ಪರಿಚಯಿಸುವ ಸಂದರ್ಭದಲ್ಲಿ ಆರಂಭಿಕವಾಗಿ ಕೇವಲ 500 ಯುನಿಟ್ ಮಾತ್ರ ಮಾರಾಟ ಮಾಡುವುದಾಗಿ ಆಡಿ ಪ್ರಕಟಿಸಿತ್ತು. ಆದರೆ ಬೆರಳೆಣಿಕೆಯ ಕೆಲವೇ ದಿನಗಳಲ್ಲಿ ಈ ಎಲ್ಲಾ ಆಡಿ 3 ಕಾರುಗಳನ್ನು ಗ್ರಾಹಕರು ಬುಕ್ಕಿಂಗ್ ಮಾಡಿದ್ದರು.
ಆಡಿ ಕ್ಯೂ3 ಕಾರಿನ ಆರಂಭಿಕ ದರ 26.41 ಲಕ್ಷ ರುಪಾಯಿ ಇದೆ. ಹೈಯರ್ ಎಂಡ್ ಆವೃತ್ತಿ ದರ 31.49 ಲಕ್ಷ ರುಪಾಯಿ ಇದೆ. ಇದು ದೆಹಲಿ ಎಕ್ಸ್ ಶೋರೂಂ ದರವಾಗಿದೆ. "ಈ ತಿಂಗಳ ಅಂತ್ಯದಿಂದ ಆಡಿ ಕ್ಯೂ3 ಬುಕ್ಕಿಂಗ್ ಪುನರ್ ಆರಂಭಿಸಲಿದ್ದೇವೆ. ಕಂಪನಿಯು ಸುಮಾರು 500 ಕಾರುಗಳನ್ನು ಆಮದು ಮಾಡಿಕೊಳ್ಳಲಿದೆ" ಎಂದು ಆಡಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ನೂತನ ಆಡಿ ಕ್ಯೂ3 ಕಾರು ಕೇವಲ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತದೆ. ಆಡಿ ಕ್ಯೂ3 ಕಾರು 2.0 ಲೀಟರಿನ ಟಿಡಿಐ ಎಂಜಿನ್ ಹೊಂದಿದೆ. ಇದು ಎಂಜಿನ್ 177 ಹಾರ್ಸ್ ಪವರ್ ಮತ್ತು 350ಎನ್ಎಂ ಟಾರ್ಕ್ ಪವರ್ ನೀಡುತ್ತದೆ. (ಪೂರ್ತಿ ವಿಮರ್ಶೆ ಓದಿ)


Click it and Unblock the Notifications