ಕಾರು ವಿಮರ್ಶೆ: ಬೆರಗಿನ ಆಡಿ ಕ್ಯೂ3 ಕ್ರಾಸೊವರ್

ಆಡಿ ಇಂಡಿಯಾ ಫ್ಯಾಕ್ಟರಿಯಿಂದ ನೂತನ ಕ್ಯೂ3 ಎಂಬ ಸಣ್ಣ ಕ್ರಾಸೊವರ್ ಕಾರು ದೇಶದ ರಸ್ತೆಗೆ ಆಗಮಿಸಿದೆ. ಆಡಿ ಕ್ಯೂ3 ಎರಡು ಆವೃತ್ತಿಗಳಲ್ಲಿ ದೊರಕುತ್ತದೆ. ಕ್ಯೂ3 ಬೇಸ್ ಆವೃತ್ತಿ ಎಕ್ಸ್ ಶೋರೂಂ ದರ 26.2 ಲಕ್ಷ ರುಪಾಯಿ ಮತ್ತು ಹೈಎಂಡ್ ಮಾಡೆಲ್ ದರ 31.5 ಲಕ್ಷ ರುಪಾಯಿ ಇದೆ.

ನೂತನ ಆಡಿ ಕ್ಯೂ3 ಕಾರು ಸ್ಪೋರ್ಟಿ, ದಕ್ಷತೆ ಮತ್ತು ನಗರದ ರಸ್ತೆಗೆ ಸೂಕ್ತವಾಗಿರುವ ಐಷಾರಾಮಿ ಕಾರಾಗಿದೆ. ಆಡಿ ಕಂಪನಿಯ ಕ್ಯೂ5 ಮತ್ತು ಕ್ಯೂ7 ಮುಂತಾದ ಬೃಹತ್ ಗಾತ್ರದ ಕಾರುಗಳಿಗೆ ಹೋಲಿಸಿದರೆ ಕ್ಯೂ3 ಸಣ್ಣಗಾತ್ರ ಮತ್ತು ಅತ್ಯಧಿಕ ದಕ್ಷತೆಯಿಂದ ಹೆಚ್ಚು ಆಪ್ತವಾಗುತ್ತದೆ.

ಆಡಿ ಕ್ಯೂ3 ಯುವಕರಿಗೆ ಇಷ್ಟವಾಗುವಂತಹ ಲೈಫ್ ಸ್ಟೈಲ್ ವೆಹಿಕಲ್. ಕ್ಯೂ3 ಕಾರಲ್ಲಿ ಆಡಿ ತಂತ್ರಜ್ಞಾನ ಬೆರಗು ಹುಟ್ಟಿಸುತ್ತದೆ. ಅದರ ಸದೃಢ ಗಂಭೀರ ಆಕರ್ಷಕ ಬಾಡಿ ವಿನ್ಯಾಸ, ಡ್ರೈವ್ ಟ್ರೈನ್, ಚಾಸೀ ಮತ್ತು ಮಲ್ಟಿಮೀಡಿಯಾ ಕಾರು ಪ್ರಿಯರಿಗೆ ಇಷ್ಟವಾಗುವಂತಿದೆ. ಆಡಿ ಕ್ಯೂ3 ಕಾರಿನ ಕ್ಯೂಟ್ರೊ ತಂತ್ರಜ್ಞಾನ ಸವಾರಿ ಹುಮ್ಮಸ್ಸಿಗೆ ಇನ್ನಷ್ಟು ಉತ್ತೇಜನ ನೀಡುತ್ತದೆ.

ವಿಶೇಷವೆಂದರೆ ಆಡಿ ಕಂಪನಿಯ ಬೃಹತ್ ಕಾರುಗಳಿಗಿಂತ ನೂತನ ಕ್ಯೂ3 ಕ್ರಾಸೊವರ್ ಹೆಚ್ಚು ವಿಶೇಷ ಲುಕ್ಕಿನಿಂದ ಕಂಗೊಳಿಸುತ್ತದೆ. ಆಡಿ ಕ್ಯೂ3 ಕಾರು ಅತ್ಯಧಿಕ ಗ್ರೌಂಡ್ ಕ್ಲೀಯರೆನ್ಸ್ ಹೊಂದಿದೆ. ಕ್ಯೂ3 ಇಂಟಿರಿಯರ್ ಐಷಾರಾಮಿ ಫೀಚರುಗಳಿಂದ ಶ್ರೀಮಂತವಾಗಿದೆ.

ಕಾರಿನೊಳಗೆ ಗುಣಮಟ್ಟದ ಸೀಟ್, ಪವರ್ ಸ್ಟಿಯರಿಂಗ್, ಪವರ್ ವಿಂಡೋಸ್, ದಕ್ಷತೆಯ ಏರ್ ಕಂಡಿಷನರ್ ಮತ್ತು ಹೀಟರ್ ಇತ್ಯಾದಿ ಹತ್ತು ಹಲವು ಫೀಚರುಗಳಿವೆ. ಕಾರಿನ ಲಗೇಜ್ ಸ್ಥಳಾವಕಾಶವೂ ವಿಶಾಲವಾಗಿದೆ. ಕ್ಯಾಬಿನ್ ಕೂಡ ವಿಶಾಲವಾಗಿದ್ದು, ಆರಾಮವಾಗಿ ಸವಾರಿ ಮಾಡಬಹುದಾಗಿದೆ.

ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಆಗಮಿಸಿರುವ ಕ್ಯೂ3 ದರ ಕೂಡ ಆಕರ್ಷಕವಾಗಿದೆ. ಈ ಕಾರು ನಿಸ್ಸಂಶಯವಾಗಿ ಬಿಎಂಡಬ್ಲ್ಯು ಎಕ್ಸ್1 ಮತ್ತು ರೇಂಜ್ ರೋವರ್ ಇವೋಕ್ ಕಾರುಗಳಿಗೆ ಪ್ರಬಲ ಪ್ರತಿಸ್ಪರ್ಧೆ ನೀಡಲಿದೆ. ವಿಶೇಷವೆಂದರೆ ಕಾಂಪ್ಯಾಕ್ಟ್ ಎಸ್ ಯುವಿ ಸೆಗ್ಮೆಂಟಿನಲ್ಲಿ ಕ್ಯೂಟ್ರೊ ತಂತ್ರಜ್ಞಾನವಿರುವ ಕಾರು ಕ್ಯೂ3 ಮಾತ್ರ.

ಗಮನಾರ್ಹವೆಂದರೆ ನೂತನ ಆಡಿ ಕ್ಯೂ3 ಕಾರು ಕೇವಲ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತದೆ. ಆಡಿ ಕ್ಯೂ3 ಕಾರು 2.0 ಲೀಟರಿನ ಟಿಡಿಐ ಎಂಜಿನ್ ಹೊಂದಿದೆ. ಇದೇ ಮಾದರಿಯ ಎಂಜಿನ್ ಆಡಿ ಎ4, ಎ6 ಸೆಡಾನ್ ಮತ್ತು ಕ್ಯೂ5 ಕ್ರಾಸೊವರ್ ಕಾರುಗಳಲ್ಲಿವೆ.

ಆಡಿ ಕ್ಯೂ3 ಎಂಜಿನ್ 177 ಹಾರ್ಸ್ ಪವರ್ ಮತ್ತು 350ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದು 7 ಸ್ಪೀಡಿನ ಡ್ಯೂಯಲ್ ಕ್ಲಚ್ ಡಿಎಸ್ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಶಕ್ತಿಶಾಲಿ ಕ್ಯೂ3 ಡೀಸೆಲ್ ಡ್ರೈವ್ ಟ್ರೈನ್ ನಲ್ಲಿ ಕೇವಲ 8.7 ಸೆಕೆಂಡಿನಲ್ಲಿ 100 ಪ್ರತಿಗಂಟೆಗೆ 100 ಕಿ.ಮೀ. ವೇಗ ಪಡೆದುಕೊಳ್ಳಬಹುದಾಗಿದೆ. ಈ ಕಾರುನ ಗರಿಷ್ಠ ವೇಗ 211 ಕಿ.ಮೀ. ವೇಗ ಪಡೆಯಬಹುದಾಗಿದೆ.

ಆಡಿ ಕ್ಯೂ3 ಕ್ರಾಸೊವರ್ ಕಾರಿನಲ್ಲಿ ರೇಡಿಯೋ ರಿಮೋಟ್ ಕಂಟ್ರೋಲ್, ಮುಂಭಾಗದ ಸೀಟ್ ಮಧ್ಯೆ ಆರ್ಮ್ ರೆಸ್ಟ್, ರಿಯರ್ ಪಾರ್ಕಿಂಗ್ ಏಯ್ಡ್, ಕ್ರೂಷ್ ಕಂಟ್ರೋಲ್, ಪ್ಯಾಸೀವ್ ಸ್ಪೀಕರ್, ಡ್ರೈವರ್ ಇನ್ಫಾರ್ಮೆಷನ್ ಸಿಸ್ಟಮ್, ಆಡಿ ಮ್ಯೂಸಿಕ್ ಇಂಟರ್ ಪೇಸ್, ವಾಯ್ಡ್ ಡೈಲಾಗ್ ಸಿಸ್ಟಮ್ ಮತ್ತು ಬ್ಲೂಟೂಥ್ ಇಂಟರ್ ಫೇಸ್ ಇತ್ಯಾದಿ ಬೇಸ್ ಫೀಚರುಗಳಿವೆ. ಹೈಎಂಡ್ ಆವೃತ್ತಿಯಲ್ಲಿ ಆಡಿ ಸೌಂಡ್ ಸಿಸ್ಟಮ್ ಮತ್ತು ಕಲರ್ ಡಿಸ್ ಪ್ಲೇ ನಲ್ಲಿ ಡ್ರೈವರ್ ಇನ್ಫಾರ್ಮೆಷನ್ ಸಿಸ್ಟಮ್ ಸೇರಿದಂತೆ ಹೆಚ್ಚುವರಿ ಫೀಚರುಗಳಿವೆ.

ನೂತನ ಆಡಿ ಕ್ಯೂ3 ಸ್ಪೋರ್ಟ್ ಕ್ರಾಸೊವರ್ ಕಾರು 13 ವಿವಿಧ ಬಣ್ಣಗಳಲ್ಲಿ ದೊರಕುತ್ತದೆ. ಆರಂಭಿಕವಾಗಿ ಕಂಪನಿಯು ಕೇವಲ 500 ಗ್ರಾಹಕರಿಗೆ ಮಾತ್ರ ಬುಕ್ಕಿಂಗ್ ಅವಕಾಶ ನೀಡಿದೆ. ದೇಶದಲ್ಲಿರುವ ಕಂಪನಿಯ 19 ಅಧಿಕೃತ ಶೋರೂಂಗಳಲ್ಲಿ ಆಡಿ ಕ್ಯೂ3 ದೊರಕಲಿದೆ. (ಓದಿ: ಕಾರು ವಿಮರ್ಶೆ)

Most Read Articles

Kannada
English summary
The Stunning Audi Q3 Compact Crossover – Review. The Audi Q3 is a sporty, efficient and versatile urban vehicle. Compared to its Q5 and Q7 big brothers with high off-road ability, the Q3 is more of a lifestyle vehicle aimed at the youth. Every aspect of the Audi Q3 showcases Audi technology - the body, the drivetrain, the chassis and the assistance and multimedia systems and of course it has ‘quattro'.
Story first published: Thursday, June 28, 2012, 14:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X