ಕೋಟ್ಯಾಧಿಪತಿ ಬಿಲ್ ಗೇಟ್ಸ್ ಕಾರು ಲೋಕ
ಐದು ಸಾವಿರ ಬಿಲಿಯನ್ ಡಾಲರಿಗಿಂತಲೂ ಹೆಚ್ಚು ವಹಿವಾಟು ನಡೆಸುವ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್. ಇವರು ಮೈಕ್ರೋಸಾಫ್ಟ್ ಸಂಸ್ಥಾಪಕ ಮತ್ತು ಚೇರ್ಮನ್. ಎಂಎಸ್ಎನ್ ಕಾರ್ ಮ್ಯಾಗಝಿನ್ ಮಾಲೀಕ ಮತ್ತು ಪ್ರಕಾಶಕ.
ಕೋಟ್ಯಾಧಿಪತಿ ಬಿಲ್ ಗೇಟ್ಸ್ ಗೂ ಪೋರ್ಷ್ ಕಂಪನಿಯ ಎರಡು ಕಾರುಗಳಿಗೂ ಅವಿನಾಭಾವ ನಂಟಿದೆ. ಪ್ರತಿದಿನದ ಸವಾರಿಗಾಗಿ 1999ರ ಪೋರ್ಷ್ 911 ಕನ್ವರ್ಟಿಬಲ್ ಕಾರನ್ನು ಬಳಸುತ್ತಿದ್ದರು.
ಸುಮಾರು ಹತ್ತು ವರ್ಷಗಳ ತರುವಾಯ, ಈಗ ಬಿಲ್ ಗೇಟ್ಸ್ ಬಳಸುತ್ತಿರುವುದು 1988ರ ಪೋರ್ಷ್ 959 ಕೂಪ್ ಆವೃತ್ತಿ. ಬಿಲ್ ಗೇಟ್ಸ್ ಸಾಗುವ ಹಾದಿಗಳ ಕುರಿತು ಸಮರ್ಪಕ ಮಾಹಿತಿ ಪಡೆಯಲು ಈ ಕಾರಿಗಾಗಿ ಮೈಕ್ರೊಸಾಫ್ಟ್ ವಿಶೇಷ ಸಾಫ್ಟ್ ವೇರೊಂದನ್ನು ಬರೆದಿತ್ತು ಎಂಬ ಗಾಳಿ ಸುದ್ದಿಯೂ ಇದೆ.
ಅಂದಹಾಗೆ ದಾನಶೂರ ವಾರೆನ್ ಬಫೆಟ್ ಬಳಿ ಯಾವುದಾದರೂ ಕಾರುಗಳಿವೆಯೇ? ಮುಂದಿನ ಪುಟ ನೋಡಿ.


Click it and Unblock the Notifications
