ದಾನಶೂರ ವಾರೆನ್ ಬಫೆಟ್ ಬಳಿ ಯಾವ ಕಾರಿದೆ?
ಉದ್ಯಮಿ, ಹೂಡಿಕೆದಾರ ವಾರೆನ್ ಬಫೆಟ್ ಕೋಟ್ಯಾಧಿಪತಿ. ಷೇರುಪೇಟೆಗೆ ಕೋಟಿ ಕೋಟಿ ಡಾಲರ್ ಹೂಡಿಕೆ ಮಾಡಿ ಹಣ ಗಳಿಸುತ್ತಾನೆ. ಮಾರುಕಟ್ಟೆಯಲ್ಲಿರುವ ಕರಡಿ ಮತ್ತು ಗೂಳಿಗಳೆರಡೂ ಆತನ ಸ್ನೇಹಿತರು. ಕೋಟ್ಯಾಧಿಪತಿಗಳಲ್ಲಿ ಈತನ ವ್ಯಕ್ತಿತ್ವ ವಿಭಿನ್ನ.
ಕೋಟ್ಯಾಧಿಪತಿಗಳಲ್ಲಿ ಯಾವೆಲ್ಲ ಕಾರುಗಳಿವೆ ಎಂದು ಹುಡುಕಿದಾಗ ದುಬಾರಿ ವಾಹನಗಳು ಕಣ್ಣೆದುರಿಗೆ ಬರುತ್ತವೆ. ಆದರೆ ಬಂದ ದುಡ್ಡನ್ನೆಲ್ಲ ಚಾರಿಟಿಗಳಿಗೆ ದಾನಮಾಡುವ ವಾರೆನ್ ಬಫೆಟ್ ಬಳಿ ಅಂತಹ ಯಾವುದೇ ಕಾರುಗಳಿಲ್ಲ.
ದುಡಿದ ಶೇಕಡ 85ರಷ್ಟನ್ನು ದಾನ ಮಾಡುವ ವಾರೆನ್ ಬಫೆಟ್ ಕೂಡ ಒಂದೊಮ್ಮೆ ಲಿಂಕನ್ ಟೌನ್ ಕಾರು ಹೊಂದಿದ್ದರು. ಅದನ್ನು ಇಬೇ ಮೂಲಕ ಹರಾಜು ನಡೆಸಲಾಗಿತ್ತು.
ಫೋರ್ಡ್ ಮೋಟರ್ ಕಂಪನಿಯ ಅಂಗಸಂಸ್ಥೆ ಲಿಂಕನ್ ಕಂಪನಿಯ ಪೂರ್ಣಪ್ರಮಾಣದ ಐಷಾರಾಮಿ ಸೆಡಾನ್ ಕಾರೆಂದರೆ ಲಿಂಕನ್ ಟೌನ್ ಕಾರು. ಇದರ ಉತ್ಪಾದನೆ 2011ಕ್ಕೆ ಕೊನೆಗೊಂಡಿದೆ. ಅಮೆರಿಕ ಮತ್ತು ಕೆನಡಾದಲ್ಲಿ ಪ್ರಶಿದ್ಧ ವ್ಯಕ್ತಿಗಳು ಹೆಚ್ಚಾಗಿ ಬಳಸಿದ್ದ ಕಾರು ಇದಾಗಿದೆ.


Click it and Unblock the Notifications









