ಗೂಗಲ್ ಗುರುವಿಗೆ ಶರಣೆಂದ ಕಾರು ಗ್ರಾಹಕ
ಕಾರು ಖರೀದಿ ಮಾಡುವ ಮುನ್ನ ಗ್ರಾಹಕರು ಕಡಿಮೆಯೆಂದ್ರೂ ಸುಮಾರು 9ರಿಂದ 12 ವಾರ ಕಾರುಗಳ ಕುರಿತು ರಿಸರ್ಚ್ ಮಾಡುತ್ತಾರಂತೆ. ಅದರಲ್ಲಿ ಹೆಚ್ಚಿನ ಜನರು ಅಂತರ್ ಜಾಲವನ್ನೇ ಕಾರು ಹುಡುಕುವ ಪ್ರಮುಖ ಗುರುವಾಗಿ ಸ್ವೀಕರಿಸಿದ್ದಾರಂತೆ. ಕಾರು ಕಂಪನಿಗಳು ಮತ್ತು ವೆಬ್ ತಾಣಗಳು ಕೂಡ ಇಂಟರ್ನೆಟಿನಲ್ಲೇ ಗ್ರಾಹಕರಿಗೆ ಹೆಚ್ಚಿನ ಮಾಹಿತಿ ನೀಡುತ್ತಿವೆ ಎಂದು ನೂತನ ಸಮೀಕ್ಷೆಯೊಂದು ಹೇಳಿದೆ.
ಟೆಲಿವಿಷನ್ ಅಥವಾ ಮುದ್ರಣ ಮಾಧ್ಯಮಕ್ಕಿಂತ ಕಾರು ಖರೀದಿದಾರರು ಅಂತರ್ ಜಾಲವನ್ನೇ ಹೆಚ್ಚು ಅವಲಂಬಿಸಿದ್ದಾರೆ. ಸುಲಭವಾಗಿ, ತ್ವರಿತವಾಗಿ ವಾಹನ ಸಂಬಂಧಿ ಮಾಹಿತಿ, ವಿಡಿಯೋ, ವಿಮರ್ಶೆ, ಫಸ್ಟ್ ಡ್ರೈವ್, ಟೆಸ್ಟ್ ಡ್ರೈವ್, ವಾಹನ ಸಲಹೆ ದೊರಕುವುದರಿಂದ ಹೆಚ್ಚಿನವರು ಇಂಟರ್ನೆಟ್ಟೆ ವಾಹನ ಗುರು ಎಂದಿದ್ದಾರೆ.
ಗೂಗಲ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷರಾದ ರಾಜನ್ ಆನಂದನ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಗೂಗಲ್ ಸರ್ಚ್ ಇಂಡಿಯಾದಲ್ಲಿ ಮಾಡಿರುವ ನೂತನ ಆಫ್ ಲೈನ್ ಸಮೀಕ್ಷೆಯಲ್ಲಿ ವಾಹನ ಖರೀದಿದಾರರು ಅಂತರ್ ಜಾಲವನ್ನೇ ಪ್ರಮುಖ ವಾಹನ ರಿಸರ್ಚ್ ತಾಣವಾಗಿ ಪರಿಗಣಿಸಿದ್ದಾರೆ. ಭವಿಷ್ಯದಲ್ಲಿ ಡಿಜಿಟಲ್ ಮಾಧ್ಯಮದಲ್ಲಿ ಹೆಚ್ಚು ಹೆಚ್ಚು ಅವಕಾಶವಿರಲಿದೆ" ಎಂದು ಅವರು ತಿಳಿಸಿದ್ದಾರೆ.
ಗೂಗಲ್ ಹುಡುಕಾಟ ಅಂಕಿ ಅಂಶಗಳನ್ನು ಅವಲೋಕಿಸಿ ಈ ಸಮೀಕ್ಷೆ ನಡೆಸಲಾಗಿದೆ. ಗೂಗಲ್ ನಲ್ಲಿ ವಾಹನೋದ್ಯಮವು ವೇಗವಾಗಿ ಪ್ರಗತಿ ಕಾಣುತ್ತಿರುವ ಸೆಗ್ಮೆಂಟಾಗಿದೆ. ಅಂದರೆ ಗೂಗಲ್ ಹುಡುಕಾಟದಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ಸಂಬಂಧಿ ಹುಡುಕಾಟ ಶೇಕಡ 79ರಷ್ಟು ಏರಿಕೆ ಕಾಣುತ್ತಿದೆ. ಇಷ್ಟೇ ಅಲ್ಲ, ಮೊಬೈಲ್ ಫೋನ್ ಇಂಟರ್ನೆಟ್ಟಿನಲ್ಲಿ, ಸ್ಮಾರ್ಟ್ ಫೋನಿನಲ್ಲಿ ವಾಹನ ಸಂಬಂಧಿತ ಮಾಹಿತಿ ಹುಡುಕುವರ ಪ್ರಮಾಣ ಶೇಕಡ 242ರಷ್ಟು ಏರಿಕೆ ಕಂಡಿದೆ.
ವಾಹನ ಸಂಶೋಧನೆಗೆ ಸರ್ಚ್ ಎಂಜಿನ್‌ಗಳು ಬೆಸ್ಟ್ ಆಗಿ ಇತ್ತೀಚೆಗೆ ಪರಿಣಮಿಸಿದೆ. ವಾಹನ ಹುಡುಕಾಟದಲ್ಲಿ ವರ್ಷದಿಂದ ವರ್ಷಕ್ಕೆ ಸ್ಪೋರ್ಟ್ ಯುಟಿಲಿಟಿ ವಾಹನ ಹುಡುಕಾಟ ಶೇಕಡ 83ರಷ್ಟು, ದುಬಾರಿ ಕಾರುಗಳ ಹುಡುಕಾಟ ಶೇಕಡ 82ರಷ್ಟು, ಸೆಡಾನ್ ಕಾರುಗಳ ಹುಡುಕಾಟ ಶೇಕಡ 75ರಷ್ಟು, ಐಷಾರಾಮಿ ಕಾರುಗಳ ಹುಡಕಾಟ ಶೇಕಡ 74ರಷ್ಟು ಮತ್ತು ಹ್ಯಾಚ್ ಬ್ಯಾಕ್ ಕಾರುಗಳ ಹುಡುಕಾಟ ಶೇಕಡ 53ರಷ್ಟು ಏರಿಕೆ ಕಂಡಿದೆ.
ಕನ್ನಡದ ಪ್ರಪ್ರಥಮ ವಾಹನ ವೆಬ್ ತಾಣ ಕನ್ನಡ ಡ್ರೈವ್ ಸ್ಪಾರ್ಕ್ ಕೂಡ ಓದುಗರಿಗೆ ವಾಹನ ಸಂಬಂಧಿ ಮಾಹಿತಿ, ವಿಮರ್ಶೆ, ಪಸ್ಟ್ ಡ್ರೈವ್, ಟೆಸ್ಟ್ ಡ್ರೈವ್, ಕಾರು ರಿಸರ್ಚ್ ಟೂಲ್, ಬೈಕ್ ಸಂಶೋಧನೆ ಟೂಲ್, ಸೆಕೆಂಡ್ ಹ್ಯಾಂಡ್ ಕಾರು ಬೈಕ್ ಮಾರಾಟ ಮತ್ತು ಖರೀದಿ ಮಾಹಿತಿ, ಸುದ್ದಿಗಳನ್ನು ನೀಡುತ್ತಿದೆ.
ನಿಮ್ಮ ವಾಹನ ಕ್ರೇಝಿಗೆ ಇನ್ನಷ್ಟು ಅಶ್ವಶಕ್ತಿ ತುಂಬಲು ನಾವು ರೆಡಿ


Click it and Unblock the Notifications









