ಹತ್ತಿಪ್ಪತ್ತು ರುಪಾಯಿಗೆ ಪೆಟ್ರೋಲ್ ಸಿಗೋ ಹತ್ತು ದೇಶಗಳು

Cheapest Petrol Price Nations
ನಮ್ಮಲ್ಲಿ ಬಾಟಲಿ ನೀರಿಗೆ ಹತ್ತಿಪ್ಪತ್ತು ರುಪಾಯಿ ಕೊಡಬೇಕು. ಲೀಟರ್ ಪೆಟ್ರೋಲ್ ದರ ಕೇಳುವ ಹಾಗಿಲ್ಲ. ಆದರೆ ಕೆಲವು ದೇಶಗಳಲ್ಲಿ ಲೀಟರ್ ಪೆಟ್ರೋಲ್ ದರವು ಹಾಲಿಗಿಂತ ಅಥವಾ ಬಾಟಲಿ ನೀರಿನ ದರಕ್ಕಿಂತ ಕಡಿಮೆಯಿದೆ. ಇಪ್ಪತ್ತು ರುಪಾಯಿಗಿಂತ ಕಡಿಮೆ ದರಕ್ಕೆ ಲೀಟರ್ ಪೆಟ್ರೋಲ್ ದೊರಕುವ ಹತ್ತು ದೇಶಗಳ ಹೆಸರು ಇಲ್ಲಿವೆ. ಅಲ್ಲಿನ ಕರೆನ್ಸಿಯನ್ನು ರೂಪಾಯಿಗೆ ಪರಿವರ್ತಿಸಿ ಈ ಲೆಕ್ಕ ನೀಡಲಾಗಿದೆ.

ವೆನಿಜುವೆಲ್ಲಾ: ವೆನಿಲಾ ಫ್ಲೇವರಿನ ಹೆಸರು ಹೊಂದಿರುವ ವೆನಿಜುವೆಲ್ಲಾದಲ್ಲಿ ಪೆಟ್ರೋಲ್ ದರ ತುಂಬಾ ಅಗ್ಗ. ನಮ್ಮೂರಲ್ಲಿ ದೊರಕುವ ಆಫ್ ಟೀ ದರದಲ್ಲಿ ಅಲ್ಲಿ ಲೀಟರ್ ಪೆಟ್ರೋಲ್ ಖರೀದಿಸಬಹುದು. ವೆನಿಜುವೆಲ್ಲಾದಲ್ಲಿ ಲೀಟರ್ ಪೆಟ್ರೋಲ್ ದರ ಲೀಟರಿಗೆ 7.01 ರುಪಾಯಿ.

ಈಜಿಪ್ಟ್: ಪಿರಮಿಡ್ಡುಗಳಿಂದ ಪ್ರಶಿದ್ಧವಾಗಿರುವ ಈಜಿಪ್ಟನಲ್ಲಿ ಪೆಟ್ರೋಲ್ ಅಗ್ಗ. ವೆನಿಜುವೆಲ್ಲಾಕ್ಕೆ ಹೋಲಿಸಿದ್ರೆ ಕೆಲವು ಪೈಸೆ ದುಬಾರಿ ಅಷ್ಟೇ. ಈಜಿಪ್ಟನಲ್ಲಿ ಪ್ರತಿಲೀಟರ್ ಪೆಟ್ರೋಲಿಗೆ ಈಗ 7.89 ರುಪಾಯಿ ಇದೆ.

ಸೌದಿ ಅರೇಬಿಯಾ: ಪೆಟ್ರೋಲ್ ಬಾವಿಗಳಿರುವ ಸೌದಿಯಲ್ಲಿ ಪೆಟ್ರೋಲಿಗೆ ಬರಗಾಲವಿಲ್ಲ. ಹೀಗಾಗಿ ಅಲ್ಲೂ ಪೆಟ್ರೋಲ್ ದರ ಕಡಿಮೆ. ಒಂದು ಲೀಟರಿಗೆ ಕೇವಲ 8.76 ರುಪಾಯಿ ನೀಡಿದ್ರೆ ಸಾಕು.

ಕತ್ತರ್: ಕತ್ತರಿನಲ್ಲೂ ಪೆಟ್ರೋಲ್ ಅಗ್ಗ. ಹತ್ರೂಪಯಿಗೆ ಒಂದು ಲೀಟರ್ ಸಿಗುತ್ತಿತ್ತು. ಆದರೆ ಈಗ ಅಲ್ಲಿ ಪೆಟ್ರೋಲ್ ದರ 10.52 ರು. ತಲುಪಿದೆ.

ಬೆಹ್ರೈನ್: ಇಲ್ಲೂ ಪೆಟ್ರೋಲ್ ದರ ಅಗ್ಗ. ಒಂದು ಪ್ಯಾಕೇಟ್ ಆರ್ಡಿನರಿ ನಂದಿನಿ ಹಾಲಿನ ದರಕ್ಕೆ ಅಲ್ಲಿ ಒಂದು ಲೀಟರ್ ಪೆಟ್ರೋಲ್ ಸಿಗುತ್ತದೆ. ಬೆಹ್ರೈನ್ ನಲ್ಲಿ ಲೀಟರ್ ಪೆಟ್ರೋಲ್ ದರ 13.15 ರುಪಾಯಿ.

ಲಿಬಿಯಾ: ಲಿಬಿಯಾ ಗೊತ್ತಲ್ವ? ಅದೇ ಆ ಗಡಾಫಿ ಊರು. ಅಲ್ಲೂ ಪೆಟ್ರೋಲ್ ದರ ಬೆಹ್ರೈನ್ ನಷ್ಟೇ ಇದೆ. ಲಿಬಿಯಾದಲ್ಲಿ ಲೀಟರ್ ಪೆಟ್ರೋಲ್ ದರ 13.15 ರುಪಾಯಿ.

ತುರ್ಕಮೆನಿಸ್ತಾನ: ತುರ್ಕಮೆನಿಸ್ತಾನದಲ್ಲಿ ಪೆಟ್ರೋಲ್ ದರ ಲೀಟರಿಗೆ ಕೇವಲ 14.90 ರುಪಾಯಿ.

ಕುವೈತ್: ಕುವೈತಿನಲ್ಲಿ ಪೆಟ್ರೋಲ್ ದರ ಲೀಟರಿಗೆ ಸುಮಾರು 14.90 ರುಪಾಯಿ.

ಅಲ್ಜೇರಿಯಾ: ಇಲ್ಲಿ ಪ್ರತಿಲೀಟರ್ ಪೆಟ್ರೋಲ್ ದರ 14.90 ರುಪಾಯಿ.

ಇರಾನ್: ಇರಾನಿನಲ್ಲಿ ಪೆಟ್ರೋಲ್ ದರ ಪ್ರತಿಲೀಟರಿಗೆ ಸುಮಾರು 18.41 ರುಪಾಯಿ.

ಕೆಲವು ದೇಶಗಳಲ್ಲಿ ಬಾವಿ ತೋಡಿದರೆ ಪೆಟ್ರೋಲಿನ ಒರತೆ ಕಾಣಸಿಗುತ್ತದೆ. ಹಾಗಾಗಿ ಅಲ್ಲಿ ಕುಡಿಯುವ ನೀರಿಗೆ ತತ್ತರವಿದೆ. ನೀರಿಗೆ ಹೆಚ್ಚು ದುಡ್ಡು ಪೆಟ್ರೋಲ್ ಗೆ ಕಡಿಮೆ ದುಡ್ಡು ಅಂತಹ ದೇಶಗಳಲ್ಲಿ ಸಾಮಾನ್ಯ. ಇದೀಗ ಪಾಕಿಸ್ತಾನ ಸೇರಿದಂತೆ ಕೆಲವು ದೇಶಗಳು ನೀರಿನಿಂದ ಚಲಿಸುವ ವಾಹನದ ಅನ್ವೇಷಣೆಯಲ್ಲಿವೆ.

ಓದಿ: ವಾಟರ್ ಕಾರ್ ತಯಾರಿಸಿದ ಪಾಕಿಸ್ತಾನ

More from DriveSpark

Article Published On: Friday, August 24, 2012, 16:26 [IST]
English summary
While the petrol prices of our country is spiraling up, some places like Venezuela, Iran, Algeria, Kuwait, Turkmenistan, Egypt Saudi Arabia provides it in a cheaper cost.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+