ಟಾಟಾ ಬಿಟ್ಟ ಫಿಯೆಟ್ ಇಂಡಿಯಾ ಒಬ್ಬಂಟಿ ಪಯಣ

ಇತ್ತೀಚೆಗೆ ಇಟಲಿಯ ವಾಹನ ಕಂಪನಿ ಫಿಯೆಟ್ ದೇಶದಲ್ಲಿ ಟಾಟಾ ಮೋಟರ್ಸ್ ಜೊತೆಗಿನ ಮೈತ್ರಿ ಕಡಿದುಕೊಂಡಿತ್ತು. ಇದೀಗ ಕಂಪನಿಯು ದೇಶದಲ್ಲಿ ಸುಮಾರು 100ರಷ್ಟು ಮಾರಾಟ ಮಳಿಗೆಗಳು ಮತ್ತು ಸರ್ವಿಸ್ ಸ್ಟೇಷನ್‌ಗಳನ್ನು ತೆರೆಯಲು ಯೋಜಿಸಿದೆ. ಮತ್ತೆ ದೇಶದಲ್ಲಿ ಭದ್ರವಾಗಿ ಬೇರೂರಲು ಸುಮಾರು ಒಂದುವರೆ ವರ್ಷದ ಅವಶ್ಯಕತೆಯಿದೆ ಎಂದು ಕಂಪನಿ ಹೇಳಿದೆ.

ವಿಸ್ತರಣಾ ಯೋಜನೆಗಳು ಮಾತ್ರವಲ್ಲದೇ ಫಿಯೆಟ್ ದೇಶದಲ್ಲಿ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳಲು ಸಹ ಯೋಜಿಸಿದೆ. ಅಂದರೆ ಕಂಪನಿಯು ಪ್ರಸಕ್ತ ಶೇಕಡ 0.7ರಿಂದ 2015ನೇ ಇಸವಿಗೆ ಶೇಕಡ 1-1.5ಕ್ಕೆ ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳುವ ಗುರಿಹೊಂದಿದೆ.

"ಕಂಪನಿಯ ಜಂಟಿ ಉದ್ಯಮ ಈಗಾಗಲೇ ಕೊನೆಗೊಂಡಿದೆ. ಇನ್ಮುಂದೆ ಸಮಗ್ರ ಬದಲಾವಣೆ ತರಲು ನಮಗೆ ಇನ್ನೂ 12-18 ತಿಂಗಳು ಬೇಕಾಗಬಹುದು" ಎಂದು ಫಿಯೆಟ್ ಇಂಡಿಯಾ ವಾಣಿಜ್ಯ ವಾಹನ ವಿಭಾಗದ ಮುಖ್ಯಸ್ಥರಾದ ಎನ್ರಿಕೊ ಅಟನಾಶಿಯೊ ಹೇಳಿದ್ದಾರೆ.

ದೆಹಲಿಯ ಫಿಯೆಟ್ ಕೆಫೆಯಲ್ಲಿ ನೂತನ ಪುಂಟೊ ಸ್ಪೋರ್ಟ್ ಕಾರನ್ನು ಅನಾವರಣಗೊಳಿಸಿದ ಸಂದರ್ಭದಲ್ಲಿ ಅಟನಾಶಿಯೊ ಕಂಪನಿಯ ವಿಸ್ತರಣಾ ಯೋಜನೆಗಳ ಕುರಿತು ತಿಳಿಸಿದ್ದಾರೆ. ನೂತನ ಪುಂಟೊ ಸ್ಪೋರ್ಟ್ ಆರಂಭಿಕ ದರ ಸುಮಾರು 7.36 ಲಕ್ಷ ರುಪಾಯಿ ಇದೆ.

More from DriveSpark

Article Published On: Tuesday, May 22, 2012, 15:30 [IST]
English summary
Fiat India wants 12 to 18 months for establishing footsteps in the Indian Automobile market. Company recently called off its joint venture with Tata Motors. Fiat India also aiming to double its market share in the next 2-3 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+