2012ರ ನೂತನ ಫೋರ್ಡ್ ಫಿಯೆಸ್ಟಾ ರಸ್ತೆಗೆ, ದರವೆಷ್ಟು?

ಬಹುನಿರೀಕ್ಷಿತ ಫೋರ್ಡ್ ಕಾರೊಂದು ರಸ್ತೆಗಿಳಿದಿದೆ. 2012ರ ನೂತನ ಫೋರ್ಡ್ ಫಿಯೆಸ್ಟಾ ಡ್ಯೂಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಯನ್ನು ಫೋರ್ಡ್ ಇಂಡಿಯಾ ಇಂದು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಫಿಯೆಸ್ಟಾ ಕಾರಿನ ದೆಹಲಿ ಶೋರೂಂ ದರ 8.99 ಲಕ್ಷ ರುಪಾಯಿ.

ಜಾಗತಿಕ ಸ್ಟಾಂಡರ್ಡ್ ಫೀಚರುಗಳನ್ನು ಹೊಂದಿರುವ ಹೊಸ ಫಿಯೆಸ್ಟಾ ಫಿಯೆಸ್ಟಾ 1.5 ಲೀಟರಿನ ಟಿ-ವಿಸಿಟಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 110 ಹಾರ್ಸ್ ಪವರ್ ಮತ್ತು 140 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಈ ಕಾರು ಪವರ್ ಶಿಫ್ಟ್ ಗೇರ್ ಬಾಕ್ಸಿನೊಂದಿಗೆ ಬಂದಿರುವುದು ವಿಶೇಷ. ಪವರ್ ಶಿಫ್ಟ್ ಡ್ಯೂಯಲ್ ಕ್ಲಚ್ ಆಟೋಮ್ಯಾಟಿಕ್ ಆರು ಸ್ಪೀಡಿನ ಗೇರ್ ಬಾಕ್ಸ್ ಹೊಂದಿರುವ ಫಿಯೆಸ್ಟಾ ಆಕರ್ಷಕ ಮೈಲೇಜ್ ಕೂಡ ನೀಡುತ್ತದೆ.

ಹಗುರ ಗೇರ್ ಬಾಕ್ಸ್ ಮತ್ತು ಹೈಟೆಕ್ ಫೀಚರುಗಳು ಫಿಯೆಸ್ಟಾ ಕಾರಿನ ಮೈಲೇಜ್ ಮತ್ತು ಶಕ್ತಿ ಹೆಚ್ಚಿಸಿವೆ. ಕಂಪನಿಯ ಪ್ರಕಾರ ನೂತನ ಫಿಯೆಸ್ಟಾ ಕಾರು ಲೀಟರಿಗೆ 16.97 ಕಿ.ಮೀ. ಮೈಲೇಜ್ ನೀಡುತ್ತದೆ.

ಅತ್ಯಧಿಕ ಮೈಲೇಜ್ ಮಾತ್ರವಲ್ಲದೇ ಈ ಕಾರಿನ ಪವರ್ ಶಿಫ್ಟ್ ಡ್ಯೂಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಾಂಪ್ರದಾಯಿಕ ಗೇರ್ ಬಾಕ್ಸಿಗಳಿಗಿಂತ ಹಲವು ಅನುಕೂಲತೆಗಳನ್ನು ಹೊಂದಿದೆ. ನೂತನ ಪವರ್ ಶಿಫ್ಟ್ ಮೂಲಕ ಸ್ಮೂತಾಗಿ ಮತ್ತು ಶೀಘ್ರವಾಗಿ ಗೇರ್ ಶಿಫ್ಟ್ ಮಾಡಬಹುದಾಗಿದೆ.

ನೂತನ ಫೋರ್ಡ್ ಫಿಯೆಸ್ಟಾ ಪವರ್ ಶಿಫ್ಟ್ ಕಾರು ಎರಡು ಆವೃತ್ತಿಗಳಲ್ಲಿ ದೊರಕಲಿದೆ. ಇದರ ಆರಂಭಿಕ ದರ 8.99 ಲಕ್ಷ ರುಪಾಯಿ. ಟೈಟಾನಿಯಂ ಫಿಯೆಸ್ಟಾ ಆವೃತ್ತಿ ದರ ಸುಮಾರು 9.7 ಲಕ್ಷ ರುಪಾಯಿ ಇದೆ. ಇವೆಲ್ಲ ದೆಹಲಿ ಎಕ್ಸ್ ಶೋರೂಂ ದರ. ಕಂಪನಿಯು ಈಗಾಗಲೇ ನೂತನ ಕಾರಿನ ಬುಕ್ಕಿಂಗ್ ಕೂಡ ಆರಂಭಿಸಿದೆ.

ಪವರ್ ಶಿಫ್ಟ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಿರುವುದರಿಂದ ಸಿಟಿ ಟ್ರಾಫಿಕ್ ನಲ್ಲಿ ಫಿಯೆಸ್ಟಾ ಸವಾರಿ ಹೆಚ್ಚು ಆರಾಮದಾಯಕವಾಗಲಿದೆ. ಈ ಕಾರು 1.5 ಲೀಟರ್ ಟಿ-ವಿಸಿಟಿ ಪೆಟ್ರೋಲ್ ಎಂಜಿನ್ ಹೊಂದಿದೆ

ಇಂತಹ ಫೀಚರು ಇರುವ ಕಾರುಗಳು ದೇಶದ ರಸ್ತೆಯಲ್ಲಿ ಅಪರೂಪ. ಸ್ಕೋಡಾ ಲೌರಾ ಮತ್ತು ಫೋಕ್ಸ್ ವ್ಯಾಗನ್ ಜೆಟ್ಟಾ ಇತ್ಯಾದಿ ಪ್ರೀಮಿಯಂ ಸೆಡಾನ್ ಕಾರುಗಳಲ್ಲಿ ಇಂತಹ ಪವರ್ ಶಿಫ್ಟ್ ಆಟೋಮ್ಯಾಟಿಕ್ ಗೇರ್ ಗಳಿವೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Tuesday, February 28, 2012, 14:54 [IST]
English summary
Ford has launched the automatic version of the 2012 Fiesta sedan just dew minutes ago. With a starting price of Rs.8.99 Lakhs (ex-showroom, Delhi), the new Fiesta will be the top end petrol variant of the Ford sedan. The new Fiesta boasts several best in class features and more importantly the best in class mileage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+