ಫೋರ್ಡ್ ನಲುವತ್ತೈದು ಶೋರೂಂಗಳು ಶುಭಾರಂಭ

ಕಂಪನಿಯು ಫೆಬ್ರವರಿ ಹದಿನಾರಂದು ದೇಶದಲ್ಲಿ ನೂತನ 45 ಶೋರೂಂಗಳನ್ನು ತೆರೆಯಲಿದೆ. ಫೋರ್ಡ್ ಇಂಡಿಯಾ ಕಂಪನಿಯು ದೇಶದಲ್ಲಿ ಯಶಸ್ವಿ ಕಾರು ಕಂಪನಿ. ಆದರೆ ಇದಕ್ಕೆ ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟರ್ಸ್ ಜೊತೆ ಪೈಪೋಟಿ ಮಾಡಲು ಸಾಧ್ಯವಾಗುತ್ತಿಲ್ಲ.
ಕಂಪನಿಯು ಡೀಲರ್ ನೆಟ್ ವರ್ಕ್ ಹೆಚ್ಚಿಸಿದರೆ ಹೆಚ್ಚು ಗ್ರಾಹಕರನ್ನು ತಲುಪಲು ಸಾಧ್ಯ. ಇದೇ ಕಾರಣಕ್ಕೆ ಕಂಪನಿಯು ನೂತನ ಶೋರೂಂಗಳನ್ನು ತೆರೆಯಲು ನಿರ್ಧರಿಸಿದೆ. ನೂತನ ಶೋರೂಂಗಳಲ್ಲಿ ಕಂಪನಿಯು ಫಿಗೊ, ಫಿಯೆಸ್ಟಾ, ಫಿಯೆಸ್ಟಾ ಕ್ಲಾಸಿಕ್ ಮತ್ತು ಎಂಡೋವರ್ ಕಾರುಗಳನ್ನು ಹೈಲೈಟ್ ಮಾಡಲಿದೆ.
ಹಾಗಂತ ಒಂದೇ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಶೋರೂಂಗಳನ್ನು ತೆರೆಯುವುದು ಕಂಪನಿಗೆ ಮೊದಲ ಅನುಭವವಲ್ಲ. 2010ರಲ್ಲಿ ಕಂಪನಿಯ 28 ಶೋರೂಂಗಳು ಒಂದೇ ದಿನ ಶುಭಾರಂಭಗೊಂಡಿದ್ದವು. ಆದರೆ ಆ ಶೋರೂಂಗಳು ಕೇವಲ ಫಿಗೊ ಮಾರಾಟಕ್ಕೆ ಗಮನ ನೀಡಿದ್ದವು. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








