ಫೋರ್ಡ್ ಫಿಯೆಸ್ಟಾ, ದರ ಕಡಿಮೆ ಆಗುತ್ತಾ?

Posted By:
ಫೋರ್ಡ್ ಕಂಪನಿಯು ಇತ್ತೀಚೆಗೆ ನೂತನ ಫಿಯೆಸ್ಟಾ ಕಾರುಗಳನ್ನು ಪರಿಚಯಿಸಿತ್ತು. ಅದರಲ್ಲಿ ಸಾಕಷ್ಟು ಹೊಸ ಹೊಸ ಫೀಚರುಗಳನ್ನು ಅಳವಡಿಸಲಾಗಿತ್ತು. ಅದರ ಸ್ಟೈಲ್ ಕೂಡ ಹೆಚ್ಚಾಗಿತ್ತು. ಆದರೆ ಅದರ ಮಾರಾಟ ಮಾತ್ರ ಸಾಧಾರಣ ಸ್ಥಿತಿಯಲ್ಲಿದೆ.

ಇದೀಗ ಕಂಪನಿಯು ನೂತನ ಫಿಯಸ್ಟಾ ಕಾರಿನ ದರ ಕಡಿಮೆ ಮಾಡುವ ಮೂಲಕ ಮಾರಾಟ ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಕಂಪನಿಯು ಫಿಯೆಸ್ಟಾ ಕಾರಿನ ದರವನ್ನು 8.23 ಲಕ್ಷ ರು.ಗಿಂತ(ದೆಹಲಿ ಎಕ್ಸ್ ಶೋರೂಂ) ಕಡಿಮೆ ಮಾಡುವ ನಿರೀಕ್ಷೆಯಿದೆ.

ಹ್ಯುಂಡೈ ವೆರ್ನಾ, ಹೋಂಡಾ ಸಿಟಿ ಮತ್ತು ಫೋಕ್ಸ್ ವ್ಯಾಗನ್ ವೆಂಟೊ ಕಾರುಗಳ ಬೇಸ್ ಪೆಟ್ರೋಲ್ ಆವೃತ್ತಿ ದರ ಸುಮಾರು 6.99 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ. ಇವುಗಳಿಗೆ ಹೋಲಿಸಿದರೆ ಫೋರ್ಡ್ ಫಿಯೆಸ್ಟಾ ಬೇಸ್ ಆವೃತ್ತಿ ದರ ದುಬಾರಿಯೆಂದೆನಿಸುತ್ತದೆ.

ಕಂಪನಿಯು ದರ ಕಡಿಮೆ ಮಾಡುವ ಪ್ರಕ್ರಿಯೆಯನ್ನು ನೂತನ ಪವರ್ ಶಿಫ್ಟ್ ಆಟೋಮ್ಯಾಟಿಕ್ ಫಿಯೆಸ್ಟಾ ಆವೃತ್ತಿ ಮೂಲಕ ಆರಂಭಿಸಿದೆ. ಇದರ ಆರಂಭಿಕ ದರ 8.99 ಲಕ್ಷ ರು. ಆಗಿದೆ. ಕಳೆದ ಹತ್ತು ತಿಂಗಳಲ್ಲಿ ಕಂಪನಿಯ ಕಾರು ಮಾರಾಟ 75,604 ಯೂನಿಟ್ ಗೆ ತಲುಪಿದ್ದು ಶೇಕಡ 4ರಷ್ಟು ಇಳಿಕೆ ಕಂಡಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Ford will cut Fiesta price Soon. Ford now low starting point for the car, below Rs 8.23 lakh.
Story first published: Wednesday, February 29, 2012, 15:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark