ಭರತಖಂಡ ಸ್ನೇಹಿ ಕಾರುಗಳಿಗೆ ಎಳ್ಳುನೀರು ಬಿಟ್ಟ ಫೋರ್ಡ್

Ford Will No Longer Build India Specific Cars
ಭಾರತದ ರಸ್ತೆಗೆ ವಿಶೇಷವಾಗಿ ಯಾವುದೇ ಕಾರುಗಳನ್ನು ಇನ್ನು ಮುಂದೆ ಉತ್ಪಾದಿಸುವುದಿಲ್ಲ ಮತ್ತು ಕಂಪನಿಯು ಇನ್ನು ಮುಂದೆ ಕೇವಲ ಜಾಗತಿಕ ಕಾರುಗಳನ್ನು ಮಾತ್ರ ಉತ್ಪಾದಿಸಲಿದೆ ಎಂದು ಫೋರ್ಡ್ ಇಂಡಿಯಾ ಇತ್ತೀಚೆಗೆ ಹೇಳಿದೆ.

ಇದರ್ಥವೆಂದರೆ ಕಂಪನಿಯು ಜಾಗತಿಕ ವಾಹನ ಮಾಡೆಲ್ ಗಳನ್ನು ಉತ್ಪಾದಿಸಲಿದೆ. ದೇಶದಲ್ಲೂ ಕಂಪನಿಯು ಜಾಗತಿಕ ಸ್ಟಾಂಡರ್ಡ್ ಕಾರುಗಳನ್ನು ಪರಿಚಯಿಸಲಿದೆ. ಪ್ರತಿದೇಶದ ಪರಿಸ್ಥಿತಿಗೆ ಅನುಗುಣವಾಗಿ ವಾಹನಗಳನ್ನು ಹೊರತರುವುದಕ್ಕಿಂತ ಬದಲಾಗಿ ಹಲವು ಕಸ್ಟಮೈಜೆಷನ್ ಆಯ್ಕೆಯಿರುವ ಜಾಗತಿಕ ಕಾರುಗಳನ್ನು ಪರಿಚಯಿಸುವುದಾಗಿ ಕಂಪನಿ ಹೇಳಿದೆ.

ದೇಶಿ ಆಧರಿತ ವಾಹನ ಅಭಿವೃದ್ಧಿ ವೆಚ್ಚವೂ ಅಧಿಕ. ಟೊಯೊಟಾ ಕಂಪನಿಗೆ ಎಟಿಯೋಸ್ ಅಭಿವೃದ್ಧಿಪಡಿಸಲು 3,200 ಕೋಟಿ ರುಪಾಯಿಗಿಂತಲೂ ಹೆಚ್ಚು ಖರ್ಚಾಗುತ್ತಿದೆ. ಕಂಪನಿಯು ದೇಶಿ ಘಟಕದಲ್ಲಿ ಎಟಿಯೋಸ್ ಕಾರು ಅಭಿವೃದ್ಧಿಪಡಿಸಿ ಕಳೆದ ವರ್ಷ ಮಾರುಕಟ್ಟೆಗೆ ಬಿಟ್ಟಿತ್ತು. ಈ ಕಾರು ಜಾಗತಿಕ ಮಾರುಕಟ್ಟೆಗೆ ಮುಂದಿನ ತಿಂಗಳು ಪ್ರವೇಶಿಸಲಿದೆ.

ದೇಶದ ರಸ್ತೆಗೆ ಮುಂದಿನ ಐದು ವರ್ಷಗಳಲ್ಲಿ ಎಂಟು ಹೊಸ ಕಾರುಗಳನ್ನು ಪರಿಚಯಿಸುವುದಾಗಿ ಫೋರ್ಡ್ ಇಂಡಿಯಾ ಇತ್ತೀಚೆಗೆ ಹೇಳಿತ್ತು. ಆದರೆ ರಸ್ತೆಗಿಳಿಯಲಿರುವ ನೂತನ ಕಾರುಗಳು ಜಾಗತಿಕ ಪ್ಲಾಟ್ ಫಾರ್ಮ್ ನಲ್ಲಿ ಬರಲಿದೆ ಎನ್ನುವುದನ್ನು ಕಂಪನಿ ಇನ್ನೂ ಖಚಿತಪಡಿಸಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Tuesday, February 21, 2012, 11:27 [IST]
English summary
Ford Motors has said the Figo will be its last car that has been developed specifically for the Indian market. The American carmaker has decided to develop global cars under its One Ford policy. New models developed under this policy can be modified as per the requirements of each country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+