ಪೆಟ್ರೋಲ್ ದರ ಐದ್ರೂಪಾಯಿ ಹೆಚ್ಚಾಗುತ್ತಂತೆ, ನೀವು ರೆಡಿನಾ?
ಐದು ರಾಜ್ಯಗಳಲ್ಲಿನ ಚುನಾವಣೆ ಗೌಜು ಮುಗಿದಿದೆ. ಫಲಿತಾಂಶ ಹೆಚ್ಚಿನವರಿಗೆ ಖುಷಿ ತಂದಿರಬಹುದು. ಅಥವಾ ಬೇಜಾರು ಆಗಿರಬಹುದು. ಆದ್ರೆ ದೇಶದ ಹೆಚ್ಚಿನ ಜನತೆಗೆ ದುಃಖದಾಯಕ ಸಂಗತಿಯೊಂದು ಶೀಘ್ರದಲ್ಲಿ ಹೊರಬೀಳುವ ನಿರೀಕ್ಷೆಯಿದೆ. ಕೇಂದ್ರ ಸರಕಾರವು ಪೆಟ್ರೋಲ್ ದರವನ್ನು ಸುಮಾರು 3ರಿಂದ ನಾಲ್ಕು ರುಪಾಯಿ ಹೆಚ್ಚಿಸಲು ಯೋಜಿಸುತ್ತಿದೆ. ನಷ್ಟ ತಪ್ಪಬೇಕಾದ್ರೆ 5 ರುಪಾಯಿ ಹೆಚ್ಚಿಸಬೇಕೆಂದು ತೈಲ ಕಂಪನಿಗಳು ಹೇಳುತ್ತಿವೆ.
ಪ್ರತಿ ಹದಿನೈದು ದಿನಕ್ಕೊಮ್ಮೆ ತೈಲ ದರ ಪರಿಷ್ಕೃರಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಐದು ರಾಜ್ಯಗಳಲ್ಲಿನ ಚುನಾವಣೆಯ ಹಿನ್ನಲೆಯಲ್ಲಿ ಪೆಟ್ರೋಲ್ ದರ ಪರಿಷ್ಕೃಣೆ ಮಾಡಿರಲಿಲ್ಲ. ಇದೀಗ ಚುನಾವಣೆ ಮುಗಿದಿದ್ದು ಜನರ ಕಿಸೆಗೆ ಶೀಘ್ರದಲ್ಲಿ ಕತ್ತರಿ ಬೀಳುವ ನಿರೀಕ್ಷೆಯಿದೆ.
ಪೆಟ್ರೋಲ್ ದರ ಹೆಚ್ಚಳ ವಾಹನ ಮಾರುಕಟ್ಟೆ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತಿದೆ. ಈ ಬಜೆಟಿನಲ್ಲಿ ಡೀಸೆಲ್ ಕಾರುಗಳಿಗೂ ಹೆಚ್ಚುವರಿ ಸುಂಕ ವಿಧಿಸುವ ನಿರೀಕ್ಷೆಯಿದೆ. ಪೆಟ್ರೋಲ್ ದರ ಹೆಚ್ಚಳ ಮತ್ತು ಡೀಸೆಲ್ ತೆರಿಗೆ ಹೆಚ್ಚಳದಿಂದ ಗ್ರಾಹಕರು ವಾಹನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಪೆಟ್ರೋಲ್ ದರ ದಿನೇ ದಿನೇ ಏರಿಕೆ ಕಾಣುತ್ತಿರುವುದರಿಂದ ಕಾರು ಕಂಪನಿಗಳು ಡೀಸೆಲ್, ಸಿಎನ್ ಜಿ ಮತ್ತು ಎಲ್ ಪಿಜಿ ಕಾರುಗಳ ಉತ್ಪಾದನೆಗೆ ಹೆಚ್ಚು ಗಮನ ನೀಡುವ ನಿರೀಕ್ಷೆಗಳಿವೆ.
ಓದಿ: ನಾಲ್ಕು ಇಂಧನಗಳಲ್ಲಿ ಯಾವ ಕಾರು ಉತ್ತಮ?


Click it and Unblock the Notifications









